ಕೊಲ್ಹಾರ: ಭೂಮಿಯಲ್ಲಿ ಶ್ರಮದಿಂದ ಬಿತ್ತುವ ಕಾರ್ಯವನ್ನು ಮಾಡಿ ಬೆವರು ಹರಿಸಿ ಜಗತ್ತಿನಲ್ಲಿ ತನ್ನವರಿಗೂ ಮತ್ತು ಕಾಣದ ಉಳಿದ ಜನರಿಗೂ ಹೊಟ್ಟೆ ತುಂಬಿಸುವ ಜೀವಿ ಎಂದರೆ ರೈತನಾಗಿದ್ದು, ರೈತರನ್ನು ದಿನನಿತ್ಯವೂ ನಾವು ನೆನೆಯಲೇ ಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಅರವಟಿಗೆ ಬಸವೇಶ್ವರ ದೇವಸ್ಥಾನದ ಹತ್ತಿರ ಜೈಕಿಸಾನ ಸಂಘದವರು ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಜಗದ ಹಸಿವು ನೀಗಿಸುವ ರೈತ ಕುಲದ ನಿಸ್ವಾರ್ಥ ಸೇವೆಯನ್ನು ಸದಾ ಕಾಲ ಸ್ಮರಿಸೋಣ. ಸರ್ವ ರೈತರಿಗೂ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ನಾಡಿನ ಸಮಸ್ತ ಅನ್ನದಾತರ ಬಾಳು ಬಂಗಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಇದೇ ಸಂದರ್ಭದಲ್ಲಿ ಜುವಾರಿ ಪಾರ್ಮಹಬ್ ಲಿಮಿಟೆಡ್ ಅವರ ಸಹಯೋಗದಲ್ಲಿ ಜೈಕಿಸಾನ ಜಂಕ್ಷನ್ ಕೊಲ್ಹಾರ ವತಿಯಿಂದ ರೈತರಿಗೆ ವಿತರಿಸಲು ಪಾರ್ಮ ಅಫೆ ಬಿಡುಗಡೆಯ ಕಾರ್ಯಕ್ರಮವು ಜರುಗಿತು. ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಮಾಝಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಉದ್ಘಾಟಿಸಿದರು. ಪಟ್ಟಣ ಪಂಚಾಯತ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಭಾಸ್ಕರ ಪಾಂಡೆ, ರುದ್ರಪ್ಪ ಮಹಾಲಿಂಗಪೂರ, ಅನಿಸಿ ಪ್ರಸಾದ, ಟಿ.ಟಿ.ಹಗೇದಾಳ, ಸಂಗಪ್ಪ ಬಾಟಿ, ಚಂದ್ರಶೇಖರಯ್ಯ ಗಣಕುಮಾರ, ಎಚ್.ಎಮ್.ಮಹೇಶ್ವರ, ಸುಭಾಸ ಪಾಟೀಲ, ಶ್ರೀಶೈಲ ಪತಂಗಿ, ಮಹಾದೇವ ನಾಟಿಕಾರ, ಎಸ್,ಎಮ್,ಬಗಲಿ, ಅನೇಕ ಪ್ರಮುಖರು ಉಪಸ್ಥಿತರಿದ್ದರು. ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

