ಮುದ್ದೇಬಿಹಾಳ: ಇಲ್ಲಿನ ೧೮ ನೇ ವಾರ್ಡ್ ನ ಉಪಚುನಾವಣೆಯ ನಿಮಿತ್ಯ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಎಲ್ಲ ಉಮೇದುದಾರರ ಹಾಗೂ ವಾರ್ಡ ನ ಪ್ರಮುಖರ ಸಮ್ಮುಖದಲ್ಲಿ ಇವಿಎಂ ಮತಯಂತ್ರದಲ್ಲಿ ಅಭ್ಯರ್ಥಿಗಳ ಜೋಡಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಮತಚಲಾಯಿಸುವ ಮೂಲಕ ಯಂತ್ರವನ್ನು ಪರೀಕ್ಷಿಸಲಾಯಿತು.
ಒಟ್ಟು ೧೦೮೨ ಮತಗಳನ್ನು ಹೊಂದಿರುವ ಈ ವಾರ್ಡ್ ಗೆ ಡಿ.೨೭ ರಂದು ಚುನಾವಣೆ ನಡೆಯಲಿದೆ. ಇಲ್ಲಿ ಒಟ್ಟು ೭ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ೧ ನಾಮಪತ್ರ ತಿರಸ್ಕೃತವಾಗಿದ್ದು ಇನ್ನುಳಿದ ೬ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ದಯಾರಾಮಸಿಂಗ್ ರಾಯಚೂರ, ಆಪ್ ಅಭ್ಯರ್ಥಿಯಾಗಿ ನೂರಅಹಮ್ಮದ ಶಿವಣಗಿ ವಕೀಲರು, ಜೆಡಿಎಸ್ ಅಭ್ಯರ್ಥಿಯಾಗಿ ಲಾಳೇಮಶ್ಯಾಕ ನಾಯ್ಕೋಡಿ, ಕಾಂಗ್ರೇಸ್ ಅಭ್ಯರ್ಥಿಯಾಗಿ ಶಾಹಿರಾಬಾನು ಢವಳಗಿ ಸ್ಪರ್ದಿಸಿದರೆ ಪಕ್ಷೇತರರಾಗಿ ಮೊಹಮ್ಮದಸಮೀಉಲ್ಲಾ ಹುಣಚಗಿ ಮತ್ತು ಅಬ್ದುಲಅಜೀಜ ಢವಳಗಿ ಸ್ಪರ್ದಿಸಿದ್ದಾರೆ.
ತಹಶೀಲ್ದಾರ ಬಲರಾಮ ಕಟ್ಟೀಮನಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಪ್ರಕ್ರೀಯೆಯನ್ನು ಶಿಕ್ಷಕ, ಅನುಭವೀ ಮಾಸ್ಟರ್ ಟ್ರೈನರ್ ಟಿ.ಡಿ.ಲಮಾಣಿ, ಆರ್.ಓ ಎಸ್.ಎಂ.ಕಮತರ, ಸಹಾಯಕ ಚುನಾವಣಾ ಅಧಿಕಾರಿ ರಮೇಶ ಲಮಾಣಿ, ಚುನಾವಣಾ ಶಿರಸ್ತೇದಾರ ಎಸ್.ಎಂ.ಸಜ್ಜನ ಒಳಗೊಂಡ ತಂಡ ಈ ಪ್ರಕ್ರೀಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

