Author: editor.udayarashmi@gmail.com

ವಿಜಯಪುರ: ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ೩ನೇ ತ್ರೈಮಾಸಿಕ ಸಭೆಯು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ೨೦೨೪ರ ಜನವರಿ ೩ ರಂದು ಬೆಳಿಗ್ಗೆ ೧೦-೩೦ಕ್ಕೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೪ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದ್ದು, ಅದರನ್ವಯ ಕರಡು ಮತದಾರರ ಯಾದಿ ಪ್ರಕಟಿಸಿ ನಂತರದಲ್ಲಿ ದಿನಾಂಕ: ೦೯-೧೦-೨೦೨೩ರವರೆಗೆ ಸ್ವೀಕೃತವಾದ ಹಕ್ಕು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ನಿಗದಿಪಡಿಸಲಾದ ದಿನಾಂಕ : ೨೬-೧೨-೨೦೨೩ರನ್ನು ಪರಿಷ್ಕರಿಸಿ ದಿ.೧೨-೦೧-೨೦೨೪ ವರೆಗೆ ಹಾಗೂ ಅಂತಿಮ ಮತದಾರರ ಯಾದಿಯನ್ನು ಪ್ರಕಟಿಸಲು ನಿಗದಿಪಡಿಸಲಾದ ೦೫-೦೧-೨೦೨೪ರ ದಿನಾಂಕವನ್ನು ದಿ: ೨೨-೦೧-೨೦೨೪ಕ್ಕೆ ನಿಗದಿಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ೨೧ನೇ ಅವಧಿಗೆ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಜನವರಿ ೯ರಂದು ಚುನಾವಣೆ ನಡೆಸಲು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ದಿನಾಂಕ ನಿಗದಿಗೊಳಿಸಿದ್ದಾರೆ.ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮಹಾಪೌರ ಸ್ಥಾನ ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಿರಿಸಲಾಗಿದೆ. ಚುನಾವಣಾ ವೇಳಾಪಟ್ಟಿಯಂತೆ ದಿ.೦೯-೦೧-೨೦೨೪ರಂದು ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸುವುದು. ಮಧ್ಯಾಹ್ನ ೧ ಗಂಟೆಗೆ ಸಭೆ ಆರಂಭ, ಮಧ್ಯಾಹ್ನ ೧ ಗಂಟೆಯ ನಂತರ ಮಹಾಪೌರ, ಉಪಮಹಾಪೌರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ, ಪ್ರಮಾಣ ವಚನ, ಹಾಜರಾತಿ, ಕೋರಂ ಪರಿಶೀಲನೆ, ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ಹಾಗೂ ಮತಗಳ ಏಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು…

Read More

ಮಾಗಣಗೇರಿಯಲ್ಲಿ ಪುರಾಣ ಕಾಯ೯ಕ್ರಮಕ್ಕೆ ಚಾಲನೆ | ಡಾ.ವಿಶ್ವರಾಧ್ಶ ಶ್ರೀ ಶ್ಲಾಘನೆ ಬ್ರಹ್ಮದೇವನಮಡು: ಪುರಾಣ ಪುಣ್ಶ ಕಥಾಶ್ರವಣದಿಂದ ಮಾನವನ ಬದುಕು ಹಸನಾಗುವುದು ಎಂದು ಶ್ರೀಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಡಾ.ವಿಶ್ವರಾಧ್ಶ ಶಿವಾಚಾ೯ರು ಹೇಳಿದರು.ಸಮೀಪದ ಸುಕ್ಷೇತ್ರ ಮಾಗಣಗೇರಿ ಬೃಹನ್ಮಠದ ಗುರು ಚನ್ನವೃಷಬೇಂದ್ರ ಶಿವಯೋಗಿಗಳ ಮತ್ತು ಕೆಂಭಾವಿ ಗುರು ಅಯ್ಯಪ್ಪಯ್ಯ ಶಿವಾಚಾರ್ಯರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತಿಚೇಗೆ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಮಹಾಪುರಾಣ ಪ್ರಾರಂಭೋತ್ಸವಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಆಶೀವ೯ಚನ ನೀಡಿದರು.ಸಂಸ್ಕಾರಯುತ ಸಮಾಜ ನಿರ್ಮಾಣದ ಅಡಿಪಾಯ ಕಲ್ಪಿಸುವಂತ ಕಾರ್ಯಗಳಲ್ಲಿ ಎಲ್ಲ ಭಕ್ತ ಬಳಗ ಪಾಲ್ಗೊಂಡು ಇದರ ಸದುಪಯೋಗ ಪಡಿದುಕೊಳ್ಳಬೇಕು. ಈ ನಾಡಿನಲ್ಲಿ ಅನ್ನದಾಸೋಹ ಜ್ಞಾನ ದಾಸೋಹಗಳನ್ನು ಮಾಡುತ್ತಿರುವ ಮಠ ಮಾನ್ಯಗಳ ಕಾರ್ಯ ಶ್ಲಾಘನೀಯ, ಯಾವ ಸಕಾ೯ರಗಳು ಮಾಡದಂತ ದಾಸೋಹವನ್ನು ನಮ್ಮ ನಾಡಿನ ಬಹುತೇಕ ಮಠ ಮಾನ್ಯಗಳು ನಡೆಸಿಕೊಂಡು ಬಂದಿರುವುದು ಸನಾತನ ಧರ್ಮದ ಹೆಗ್ಗುರುತು ಎಂದು ಹೇಳಿದರು.ಕವಡಿಮಟ್ಚಿಯ ಬಸವಪ್ರಭು ಸ್ವಾಮೀಜಿ ಹಿರೇಮಠ, ಅರಳಹಳ್ಳಿಯ ಬಸವರಾಜ ಶಾಸ್ತ್ರಿಗಳು ವ್ಯಾಸಪೀಠದ ಮೂಲಕ ಪುರಾಣ ಪ್ರಾರಂಭಿಸಿ…

Read More

ಮುದ್ದೇಬಿಹಾಳ: ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾ ಸಂಸ್ಥೆಯ ಸ್ಥಾಪನೆಗೆ ಕಾರಣೀಕರ್ತರಾದ ಹಿಂದೂ ಸೇವಾ ಪ್ರತಿಷ್ಠಾನದ ಪ್ರಥಮ ನಿರ್ದೇಶಕರಾದ ದಿ.ಅಜಿತಕುಮಾರರವರ ಸ್ಮೃತಿ ದಿವಸದ ನಿಮಿತ್ತ ಮುದ್ದೇಬಿಹಾಳದ ಜ್ಞಾನ ಭಾರತಿ ವಿದ್ಯಾಮಂದಿರದ ವಿದ್ಯಾರ್ಥಿಗಳಿಂದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಫಲಗಳನ್ನು ಹಂಚುವ ಕಾರ್ಯ ನಡೆಯಿತು.ಈ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನಿಲಕುಮಾರ ಶೇಗುಣಸಿ, ಮಕ್ಕಳ ತಜ್ಞ ಪರಶುರಾಮ ವಡ್ಡರ, ನರ್ಸಿಂಗ ಅಧಿಕಾರಿ ಸಂಜಯ ಭೋಸಲೆ, ಬಿಎಚ್ಓ ತಾಳಿಕೋಟಿ, ಸಂಸ್ಥೆಯ ನಿರ್ದೇಶಕಿ ಲೀಲಾ ಭಟ್ಟ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿ ಸೇರಿದಂತೆ ಇತರರು ಹಾಜರಿದ್ದರು.

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯುತ್ ಉಪಕೇಂದ್ರ ೧೧೦/೩೩/೧೧ಕೆವಿ ಯಲ್ಲಿ ಡಿ.೨೯ ರಂದು ಮೂರನೇ ತ್ರೈಮಾಸಿಕ ನಿರ್ವಹಣೆಯನ್ನು ಕೈಗೊಳ್ಳುತ್ತಿರುವದರಿಂದ ಸದರಿ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜು ಹೊಂದಿರುವ ೧೧ಕೆವಿ ಹಿರೇಮುರಾಳ, ೩೩ಕೆವಿ ನಾಲತವಾಡ, ಢವಳಗಿ, ತಂಗಡಗಿ ಉಪಕೇಂದ್ರಗಳು ಹಾಗೂ ಕುಡಿಯುವ ನೀರು ಸರಬರಾಜು, ಪಂಪಸೆಟ್ಟ ಮತ್ತು ನಿರಂತರ ಜ್ಯೋತಿ ಮಾರ್ಗಗಳಿಗೆ ವಿದ್ಯುತ್ ಪೂರೈಕೆ ಇರುವದಿಲ್ಲ. ಗ್ರಾಹಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಶತಮಾನದ ಶ್ರೇಷ್ಠ ಸಂತ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಯವರ ಗುರುನಮನ ದಿನದಂದು ಸರ್ಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳ ಸಿಬ್ಬಂದಿ ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೂಕೂಲವಾಗಿಸಲು ಜನೇವರಿ 1 ಹಾಗೂ 2 ತಾರಿಖಿನ ಎರಡು ದಿನಗಳಂದು ರಜೆ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘವು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ನೌಕರರ ಸಮನಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಶ್ರೀಗಳು ಹಲವಾರು ದಶಕಗಳವರೆಗೆ ದೇಶ ವಿದೇಶಗಳಲ್ಲಿ ಸಂಚರಿಸಿ ಜ್ಞಾನದಾಸೋಹ ಮಾಡಿದವರು. ಪೂಜ್ಯರು 2023 ಜನೇವರಿ 2 ರಂದು ತಮ್ಮ ಭೌತಿಕ ದೇಹವನ್ನು ತ್ಯಜಿಸಿ ಬಯಲಲ್ಲಿ ಬಯಲಾದರು. ಆ ದಿನದಂದು ನಾವೆಲ್ಲರೂ ಪೂಜ್ಯರಿಗೆ ತಮ್ಮ ಹೃದಯಾಂತರಾಳದ ನಮನಗಳನ್ನು ಅರ್ಪಿಸುವದು ಆದ್ಯ ಕರ್ತವ್ಯವಾಗಿದೆ ಎಂದರು.ಎರಡು ದಿವಸಗಳ ಕಾಲ ನಡೆಯುವ ಎಲ್ಲ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸರಕಾರಿ ನೌಕರರು ಹಾಗೂ…

Read More

ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ಸಿಬ್ಬಂದಿ ಮನಬಂದಂತೆ ಮನೆ ಕರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ಕೈಗೊಂಡರು.ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಪಂಚಾಯಿತಿ ಆವರಣಕ್ಕೆ ಗುರುವಾರ ಆಗಮಿಸಿದ ತಾಂಡಾದ ಜನರು, ಪಂಚಾಯಿತಿ ಕಾರ್ಯದರ್ಶಿ ಮನಬಂದಂತೆ ವರ್ಷಕ್ಕೆ ಎರಡು ಬಾರಿ ಹೆಚ್ಚುವರಿ ದುಬಾರಿಯಾದ ಮನೆಕರ ವಸೂಲಿ ಮಾಡುತ್ತಿದ್ದಾರೆ. ಜೊತೆಗೆ ಮನೆ ಖರೀದಿ ಸಮಯದಲ್ಲಿ ಸರ್ಕಾರ ನಿಗದಿಪಡಿಸಿದ ೧೨೦೦ ರೂ.ದರಕ್ಕಿಂತ ಹೆಚ್ಚಿನದಾಗಿ ೫ ರಿಂದ ೧೦ ಸಾವಿರ ಹಣವನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಪಿಡಿಓ ಅವರಲ್ಲಿ ಕೇಳಬೇಕೆಂದರೆ ಅವರು ಸಹ ಪಂಚಾಯಿತಿಗೆ ಬರುತ್ತಿಲ್ಲ. ಹೀಗಾದರೆ ನಾವು ಯಾರನ್ನು ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಬ್ಬಂದಿಗೆ ಧಿಕ್ಕಾರ ಕೂಗುತ್ತಾ ಕೂಡಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಪಂಚಾಯಿತಿಗೆ ಭೇಟಿ ನೀಡಿ, ವಿಚಾರಣೆ ಮಾಡುವುದರ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅನೀಲ ರಾಠೋಡ, ಬಾಬು ರಾಠೋಡ, ಸಂತೋಷ ಚವ್ಹಾಣ, ಚಂದ್ರಕಾಂತ ಚವ್ಹಾಣ, ಆನಂದ ಮಾಂಜಿ, ವಿಲಾಸ್…

Read More

ಕೊಲ್ಹಾರ: ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಮಹಾಸ್ವಾಮಿಗಳ ಅವರ ಗುರುನಮನ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಸದುದ್ದೇಶದಿಂದ ಕೊಲ್ಹಾರ ಪಟ್ಟಣದ ಭಕ್ತ ವೃಂದದವರು ಸೇವೆಯನ್ನು ಸಲ್ಲಿಸಿದರು.ಈ ಕುರಿತು ಎರಡು ದಿನಗಳಿಂದ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಡುಗೆ ಭಟ್ಟರಾದ ಸಂಗಪ್ಪ ಪತಂಗಿ ಹಾಗೂ ಸಂಗಡಿಗರು ಹತ್ತು ಕ್ವಿಂಟಾಲ್ ಸುರಮಾ ಮಾದಲಿಯನ್ನು ತಯಾರು ಮಾಡಿದರು. ಸರ್ವ ಭಕ್ತರು ಸಜ್ಜೆ ಮತ್ತು ಬಿಳಿಜೋಳದ ಅಂದಾಜು ಆರು ಸಾವಿರ ರೊಟ್ಟಿಗಳನ್ನು ಮನೆಯಲ್ಲಿ ತಯಾರಿಸಿ ತಾವೇ ಖುದ್ದಾಗಿ ಬಂದು ತಂದುಕೊಟ್ಟರು, ಕೆಲವರು ಅಕ್ಕಿ ವ್ಯವಸ್ಥೆಯನ್ನು ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಜಿಲ್ಲಾ ಪಂಚಾಯತ ಹಿಂದಿನ ಸದಸ್ಯ ಕಲ್ಲು ದೇಸಾಯಿ ಮಾತನಾಡಿದರು.ಈ ಸಂದರ್ಭದಲ್ಲಿ ಪಡದಯ್ಯ ಹಿರೇಮಠ, ಪಟ್ಟಣ ಪಂಚಾಯತ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪಗೋಳ, ಜನಪದ ಕಲಾವಿದ ಮಲ್ಲಪ್ಪ ಈ ಗಣಿ, ಈರಣ್ಣ ಔರಸಂಗ, ಭೀಮಪ್ಪ ಸಂ ಬೀಳಗಿ, ರುದ್ರಪ್ಪ ಉಪ್ಪಲದಿನ್ನಿ, ಬಸಪ್ಪ ಬರಗಿ, ನಾಗಪ್ಪ ಗಾಣಿಗೇರ, ಪಿಎಸ್‌ಐ ಪ್ರವೀಣ ಗರೇಬಾಳ, ತುಳಸೀಗೇರಿ ಹಗೇದಾಳ, ಯಮನೂರಿ ಮಾಕಾಳಿ,…

Read More

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಡಿ.೨೯ ರಂದು ಮಹಾಪೂಜೆ ಹಾಗೂ ಪಡಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಬೆ.೧೦ಗಂಟೆಗೆ ಅದ್ಧೂರಿ ವಾದ್ಯ ವೈಭವಗಳೊಂದಿಗೆ ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಹಾಗೂ ತಿರುವಾಭರಣ ಮೆರವಣಿಗೆ ನಡೆಯಲಿದೆ. ಮದ್ಯಾಹ್ನ ೧ಗಂಟೆಗೆ ಮಹಾ ಪ್ರಸಾದ ಸಂಜೆ ೬ಗಂಟೆಗೆ ಮಹಾಪೂಜೆ ಹಾಗೂ ಪಡಿಪೂಜೆ ಕಾರ್ಯಕ್ರಮ ಜರುಗಲಿದ್ದು ತಾಲೂಕಿನ ಎಲ್ಲ ಮಾಲಾಧಾರಿಗಳು ಸೇರಿದಂತೆ ಭಕ್ತಾದಿಗಳು ಆಗಮಿಸಿ ಮಣಿಕಂಠನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಕಮೀಟಿ ತಿಳಿಸಿದೆ.

Read More