ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಡಿ.೨೯ ರಂದು ಮಹಾಪೂಜೆ ಹಾಗೂ ಪಡಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆ.೧೦ಗಂಟೆಗೆ ಅದ್ಧೂರಿ ವಾದ್ಯ ವೈಭವಗಳೊಂದಿಗೆ ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಹಾಗೂ ತಿರುವಾಭರಣ ಮೆರವಣಿಗೆ ನಡೆಯಲಿದೆ. ಮದ್ಯಾಹ್ನ ೧ಗಂಟೆಗೆ ಮಹಾ ಪ್ರಸಾದ ಸಂಜೆ ೬ಗಂಟೆಗೆ ಮಹಾಪೂಜೆ ಹಾಗೂ ಪಡಿಪೂಜೆ ಕಾರ್ಯಕ್ರಮ ಜರುಗಲಿದ್ದು ತಾಲೂಕಿನ ಎಲ್ಲ ಮಾಲಾಧಾರಿಗಳು ಸೇರಿದಂತೆ ಭಕ್ತಾದಿಗಳು ಆಗಮಿಸಿ ಮಣಿಕಂಠನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಕಮೀಟಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
