ಮಾಗಣಗೇರಿಯಲ್ಲಿ ಪುರಾಣ ಕಾಯ೯ಕ್ರಮಕ್ಕೆ ಚಾಲನೆ | ಡಾ.ವಿಶ್ವರಾಧ್ಶ ಶ್ರೀ ಶ್ಲಾಘನೆ
ಬ್ರಹ್ಮದೇವನಮಡು: ಪುರಾಣ ಪುಣ್ಶ ಕಥಾಶ್ರವಣದಿಂದ ಮಾನವನ ಬದುಕು ಹಸನಾಗುವುದು ಎಂದು ಶ್ರೀಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಡಾ.ವಿಶ್ವರಾಧ್ಶ ಶಿವಾಚಾ೯ರು ಹೇಳಿದರು.
ಸಮೀಪದ ಸುಕ್ಷೇತ್ರ ಮಾಗಣಗೇರಿ ಬೃಹನ್ಮಠದ ಗುರು ಚನ್ನವೃಷಬೇಂದ್ರ ಶಿವಯೋಗಿಗಳ ಮತ್ತು ಕೆಂಭಾವಿ ಗುರು ಅಯ್ಯಪ್ಪಯ್ಯ ಶಿವಾಚಾರ್ಯರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತಿಚೇಗೆ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಮಹಾಪುರಾಣ ಪ್ರಾರಂಭೋತ್ಸವಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಆಶೀವ೯ಚನ ನೀಡಿದರು.
ಸಂಸ್ಕಾರಯುತ ಸಮಾಜ ನಿರ್ಮಾಣದ ಅಡಿಪಾಯ ಕಲ್ಪಿಸುವಂತ ಕಾರ್ಯಗಳಲ್ಲಿ ಎಲ್ಲ ಭಕ್ತ ಬಳಗ ಪಾಲ್ಗೊಂಡು ಇದರ ಸದುಪಯೋಗ ಪಡಿದುಕೊಳ್ಳಬೇಕು. ಈ ನಾಡಿನಲ್ಲಿ ಅನ್ನದಾಸೋಹ ಜ್ಞಾನ ದಾಸೋಹಗಳನ್ನು ಮಾಡುತ್ತಿರುವ ಮಠ ಮಾನ್ಯಗಳ ಕಾರ್ಯ ಶ್ಲಾಘನೀಯ, ಯಾವ ಸಕಾ೯ರಗಳು ಮಾಡದಂತ ದಾಸೋಹವನ್ನು ನಮ್ಮ ನಾಡಿನ ಬಹುತೇಕ ಮಠ ಮಾನ್ಯಗಳು ನಡೆಸಿಕೊಂಡು ಬಂದಿರುವುದು ಸನಾತನ ಧರ್ಮದ ಹೆಗ್ಗುರುತು ಎಂದು ಹೇಳಿದರು.
ಕವಡಿಮಟ್ಚಿಯ ಬಸವಪ್ರಭು ಸ್ವಾಮೀಜಿ ಹಿರೇಮಠ, ಅರಳಹಳ್ಳಿಯ ಬಸವರಾಜ ಶಾಸ್ತ್ರಿಗಳು ವ್ಯಾಸಪೀಠದ ಮೂಲಕ ಪುರಾಣ ಪ್ರಾರಂಭಿಸಿ ಗುರು ಮಹಿಮೆ, ಗುರುಕರುಣೆ ಬಗ್ಗೆ ಸುಂದರವಾಗಿ ವಿಶ್ಲೇಷಣೆ ಮಾಡಿದರು.
ಈ ವೇಳೆ ಶಿವುಪ್ರಸಾದ ಹಿರೇಮಠ, ಸಿದ್ದನಗೌಡ ದಳಪತಿ, ಬಸನಗೌಡ ಬಿರಾದಾರ, ಸೋಮನಗೌಡ ಚಬನೂರ, ನಾಗೇಶ ಧನಶೆಟ್ಟಿ ಇದ್ದರು.
ಗದುಗಿನ ಮಲ್ಲಿಕಾರ್ಜುನ ನರಸಲಗಿ ಸಂಗೀತ ಸೇವೆಯೊಂದಿಗೆ ಆಕಾಶ ಹಿರೇಮಠ ತಬಲಾ ಸಾತ್ ನೀಡಿದರು.

