ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ಸಿಬ್ಬಂದಿ ಮನಬಂದಂತೆ ಮನೆ ಕರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ಕೈಗೊಂಡರು.
ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಪಂಚಾಯಿತಿ ಆವರಣಕ್ಕೆ ಗುರುವಾರ ಆಗಮಿಸಿದ ತಾಂಡಾದ ಜನರು, ಪಂಚಾಯಿತಿ ಕಾರ್ಯದರ್ಶಿ ಮನಬಂದಂತೆ ವರ್ಷಕ್ಕೆ ಎರಡು ಬಾರಿ ಹೆಚ್ಚುವರಿ ದುಬಾರಿಯಾದ ಮನೆಕರ ವಸೂಲಿ ಮಾಡುತ್ತಿದ್ದಾರೆ. ಜೊತೆಗೆ ಮನೆ ಖರೀದಿ ಸಮಯದಲ್ಲಿ ಸರ್ಕಾರ ನಿಗದಿಪಡಿಸಿದ ೧೨೦೦ ರೂ.ದರಕ್ಕಿಂತ ಹೆಚ್ಚಿನದಾಗಿ ೫ ರಿಂದ ೧೦ ಸಾವಿರ ಹಣವನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಪಿಡಿಓ ಅವರಲ್ಲಿ ಕೇಳಬೇಕೆಂದರೆ ಅವರು ಸಹ ಪಂಚಾಯಿತಿಗೆ ಬರುತ್ತಿಲ್ಲ. ಹೀಗಾದರೆ ನಾವು ಯಾರನ್ನು ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿಗೆ ಧಿಕ್ಕಾರ ಕೂಗುತ್ತಾ ಕೂಡಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಪಂಚಾಯಿತಿಗೆ ಭೇಟಿ ನೀಡಿ, ವಿಚಾರಣೆ ಮಾಡುವುದರ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅನೀಲ ರಾಠೋಡ, ಬಾಬು ರಾಠೋಡ, ಸಂತೋಷ ಚವ್ಹಾಣ, ಚಂದ್ರಕಾಂತ ಚವ್ಹಾಣ, ಆನಂದ ಮಾಂಜಿ, ವಿಲಾಸ್ ಚವ್ಹಾಣ, ಮಾದೇವ ಚವ್ಹಾಣ, ಶಾಂತಿಲಾಲ್ ಮಾಂಜಿ, ಭೀಮಸಿಂಗ್ ರಾಠೋಡ, ಸುನೀಲ ರಾಠೋಡ, ಕುಮಾರ ಚವ್ಹಾಣ, ಸಂತೋಷ ಚವ್ಹಾಣ, ಸಂಜು ರಾಠೋಡ, ಮಹೀಂದ್ರ ರಾಠೋಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

