ಕೊಲ್ಹಾರ: ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಮಹಾಸ್ವಾಮಿಗಳ ಅವರ ಗುರುನಮನ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಸದುದ್ದೇಶದಿಂದ ಕೊಲ್ಹಾರ ಪಟ್ಟಣದ ಭಕ್ತ ವೃಂದದವರು ಸೇವೆಯನ್ನು ಸಲ್ಲಿಸಿದರು.
ಈ ಕುರಿತು ಎರಡು ದಿನಗಳಿಂದ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಡುಗೆ ಭಟ್ಟರಾದ ಸಂಗಪ್ಪ ಪತಂಗಿ ಹಾಗೂ ಸಂಗಡಿಗರು ಹತ್ತು ಕ್ವಿಂಟಾಲ್ ಸುರಮಾ ಮಾದಲಿಯನ್ನು ತಯಾರು ಮಾಡಿದರು. ಸರ್ವ ಭಕ್ತರು ಸಜ್ಜೆ ಮತ್ತು ಬಿಳಿಜೋಳದ ಅಂದಾಜು ಆರು ಸಾವಿರ ರೊಟ್ಟಿಗಳನ್ನು ಮನೆಯಲ್ಲಿ ತಯಾರಿಸಿ ತಾವೇ ಖುದ್ದಾಗಿ ಬಂದು ತಂದುಕೊಟ್ಟರು, ಕೆಲವರು ಅಕ್ಕಿ ವ್ಯವಸ್ಥೆಯನ್ನು ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಜಿಲ್ಲಾ ಪಂಚಾಯತ ಹಿಂದಿನ ಸದಸ್ಯ ಕಲ್ಲು ದೇಸಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಡದಯ್ಯ ಹಿರೇಮಠ, ಪಟ್ಟಣ ಪಂಚಾಯತ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪಗೋಳ, ಜನಪದ ಕಲಾವಿದ ಮಲ್ಲಪ್ಪ ಈ ಗಣಿ, ಈರಣ್ಣ ಔರಸಂಗ, ಭೀಮಪ್ಪ ಸಂ ಬೀಳಗಿ, ರುದ್ರಪ್ಪ ಉಪ್ಪಲದಿನ್ನಿ, ಬಸಪ್ಪ ಬರಗಿ, ನಾಗಪ್ಪ ಗಾಣಿಗೇರ, ಪಿಎಸ್‌ಐ ಪ್ರವೀಣ ಗರೇಬಾಳ, ತುಳಸೀಗೇರಿ ಹಗೇದಾಳ, ಯಮನೂರಿ ಮಾಕಾಳಿ, ಬನಪ್ಪ ಬಾಲಗೊಂಡ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಹೊಂದಿದ ಹತ್ತು ಕ್ಯಾಂಟರ್ ಲಾರಿ ಅನ್ನಪ್ರಸಾದವನ್ನು ತೆಗೆದುಕೊಂಡು ತೆರಳಿತು.
Subscribe to Updates
Get the latest creative news from FooBar about art, design and business.
Related Posts
Add A Comment

