Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಗ್ರಾಮ ಪಂಚಾಯತ ಮಟ್ಟದ ಹೊನ್ನಳ್ಳಿ, ಬ್ರಹ್ಮದೇವನಮಡು, ಖಾನಾಪುರ, ಕರವಿನಾಳ ಶಾಲೆಗಳ ೪,೫,೬ ನೇ ತರಗತಿಗಳ ಮಕ್ಕಳಿಗೆ ಗಣಿತ ಕಲಿಕಾ ಆಂದೋಲನ ಪರೀಕ್ಷೆ ಏಪ೯ಡಿಸಲಾಗಿತ್ತು. ಕಾಂಗ್ರೆಸ್ ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ(ಕರವಿನಾಳ) ಅಧ್ಶಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ಕೇಂದ್ರ ವ್ಶಕ್ತಿ ಪ್ರಕಾಶ ಕಾಂಬಳೆ, ಎಸ್ಡಿಎಂಸಿ ಅಧ್ಶಕ್ಷ ಇಶ್ಮಾಯಿಲ್ ತಂಗಡಗಿ, ಸಂಗನಗೌಡ ಪಾಟೀಲ, ಸಾಹೇಬಪಟೇಲ ಮುರಡಿ ಸೇರಿದಂತೆ ಮತ್ತಿತ್ತರರು ವೇದಿಕೆ ಮೇಲಿ ಇದ್ದರು. ಎನ್.ಆರ್.ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಸ್.ವಾಯ್.ಯಳಸಂಗಿ ಸ್ವಾಗತಿಸಿದರು. ದಸ್ತಗೀರ ಉಸ್ತಾದ ವಂದಿಸಿದರು. ಹೊನ್ನಳ್ಳಿ ಕ್ಲಸ್ಟರ್ ಮಟ್ಟದ ಶಾಲೆಯ ಮುಖ್ಶಗುರುಗಳು, ಶಿಕ್ಷಕರು ಇದ್ದರು.
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿಯ ಶ್ರೀ ಚೌಡೇಶ್ವರಿದೇವಿ ಟ್ರಸ್ಟ್ ಕಮಿಟಿ ಹಾಗೂ ಭಕ್ತಾಧಿಗಳಿಂದ ಡಿ.೩೦ ರಂದು ದೇವಸ್ಥಾನದಲ್ಲಿ ಸಂಜೆ ೫ ಗಂಟೆಗೆ ನೂತನ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನಿಸಲಾಗುವುದು.ರಾತ್ರಿ ೮ ಗಂಟೆಗೆ ಭಜ್ಜಿ ರೊಟ್ಟಿ ಪ್ರಸಾದ ವ್ಶವಸ್ಥೆ ಮಾಡಲಾಗಿದೆ. ನಂತರ ಇಡೀ ರಾತ್ರಿ ಭಜನಾ ಕಾಯ೯ಕ್ರಮ ನಡೆಯಲಿದೆ ಎಂದು ಮುಖಂಡ ಶಿವಪುತ್ರ ಕನಾ೯ಳ ತಿಳಿಸಿದ್ದಾರೆ.
ದೇವರಹಿಪ್ಪರಗಿ: ಇಕೆವೈಸಿಗಾಗಿ ಈ ತಿಂಗಳ ಕಡೆಯ ದಿನವೇ ನಿಗದಿಪಡಿಸಲಾಗಿದೆ ಎಂಬ ಸುಳ್ಳು ವದಂತಿಗಳ ಹಿನ್ನೆಲೆಯಲ್ಲಿ ನಸುಕಿನಿಂದಲೇ ಮಹಿಳೆಯರು ಎಚ್.ಪಿ ಗ್ಯಾಸ್ ವಿತರಣಾ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತ ಪ್ರಸಂಗ ಪಟ್ಟಣದಲ್ಲಿ ಜರುಗಿತು.ಪಟ್ಟಣದ ಎಚ್.ಪಿ ಗ್ಯಾಸ್ ವಿತರಣಾ ಕೇಂದ್ರದ ಮುಂದೆ ಇಕೆವೈಸಿ ಗಾಗಿ ಕಳೆದ ೩ ದಿನಗಳಿಂದ ಬೆಳಗಿನ ೬ ಗಂಟೆಯಿಂದಲೇ ಚಳಿಯಲ್ಲಿ ವಿವಿಧ ಗ್ರಾಮಗಳ ಮಹಿಳೆಯರು ಸಾಲಿನಲ್ಲಿ ನಿಂತಿದ್ದು ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ಪ್ರತಿಯೊಬ್ಬ ಗ್ಯಾಸ ಹೊಂದಿದವರು ಹೆಬ್ಬೆಟ್ಟು ನೀಡಬೇಕು ಇಲದಿದ್ದರೇ ಮುಂದಿನ ತಿಂಗಳಿಂದ ಸಿಲೆಂಡರ್ ಸಿಗಲಾರದು ಎಂಬ ವದಂತಿ ಎಲ್ಲೆಡೆ ಹರಡಿದ್ದೇ ಮಹಿಳೆಯರು ಸಾಲು ನಿಲ್ಲಲು ಕಾರಣ.ಈ ಕುರಿತು ವಿತರಣಾ ಕೇಂದ್ರದ ಸಿಬ್ಬಂದಿ ಸಾಕಷ್ಟು ತಿಳಿಹೇಳಿದ್ದರೂ ಸಹ ಕೇಳದ ಮಹಿಳೆಯರು ಮಾತ್ರ ದಿನ ಬೆಳಗಾಗುವುದೇ ತಡ ವಿತರಣಾ ಕೇಂದ್ರದ ಮುಂದೆ ನಿಲ್ಲುತ್ತಿದ್ದಾರೆ. ಗುರುವಾರ ಮಹಿಳೆಯರ ಸಂಖ್ಯೆ ಹೆಚ್ಚಾಗಿ ನೂಕು ನುಗ್ಗುಲು ಉಂಟಾದ ಕಾರಣ ಪೊಲೀಸರು ಆಗಮಿಸಿ ನಿಯಂತ್ರಿಸುವಂತಾಯಿತು.ಈ ಕುರಿತು ಆಹಾರ ಪೂರೈಕೆ ಮತ್ತು ಗ್ರಾಹಕ ಸರಬುರಾಜು ಇಲಾಖೆಯ ಅಧಿಕಾರಿಗಳು ಈ…
ದೇವರಹಿಪ್ಪರಗಿ: ಪಟ್ಟಣಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಯುವಮೋರ್ಚಾ ಕಾರ್ಯಕರ್ತರಾದ ಶಿವರಾಜ ತಳವಾರ, ಚಂದ್ರಶೇಖರ ದಾನಗೊಂಡ, ಚೇತನ ಇಂಡಿ, ಸೋಮು ದೇವೂರ, ವಿನೋದ ಚವ್ಹಾಣ, ಮಹಾಂತೇಶ ಬಿರಾದಾರ ಸನ್ಮಾನಿಸಿದರು.
ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ೨೮ನೆಯ ಜಾತ್ರಾ ಮಹೋತ್ಸವ ಹಾಗೂ ೨ನೆಯ ವರ್ಷದ ಭವ್ಯ ರಥವನ್ನು ಎಳೆಯುವುದರ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಗೊಂಬೆ ಕುಣಿತ, ವೀರಗಾಸೆ ಕುಣಿತ, ಡೋಳ್ಳು ಕುಣಿತ, ಮಕ್ಕಳ ಕುಣಿತ ಜನಮನಗೆದ್ದಿತು. ಪುರವಂತಿಕೆ, ಜಯ ಘೋಷಗಳೊಂದಿಗೆ ರಥ ಹಾಗೂ ಪಲ್ಲಕ್ಕಿ ವಿಜೃಂಭಣೆಯಿಂದ ಮೂಡಿ ಬಂದಿತು.ನಂತರ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ವೃಷಬಲಿಂಗ ಮಹಾಶಿವಯೋಗಿಗಳು ಮಾತನಾಡಿ, ಮಠ ಮಾನ್ಯಗಳಲ್ಲಿ ಜನರಿಗೆ ಆದ್ಯಾತ್ಮಿಕ ಚಿಂತನೆ ಮೂಡಿಸುವ ಜೊತೆಗೆ ಭಕ್ತಿ ಭಾವದ ರಸದೌತಣವನ್ನು ಉಣಬಡಿಸುತ್ತಿರುವುದು ಸಂತಸ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳು ಭಾವೈಕ್ಯತೆ ಸಾಕ್ಷಿಯಾಗುತ್ತಿವೆ ಎಂದರು.ಈ ವೇಳೆ ಓತಿಹಾಳ ಶ್ರೀಮಠದ ಬಸವಮಹಾಂತ ಸ್ವಾಮೀಜಿಗಳು, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಶಹಪೂರದ ಶ್ರೀಗಳು, ಶಾಂತಗಂಗಾಧರ ಶ್ರೀಗಳು, ಬಮ್ಮನಹಳ್ಳಿ ಶ್ರೀಗಳು, ನಾಗರತ್ನ ಅಶೋಕ ಮನಗೂಳಿ, ಮಲ್ಲನಗೌಡ ಪಾಟೀಲ, ರವಿಗೌಡ ಪಾಟೀಲ, ಶಂಕ್ರಪ್ಪ ಮಕಣಾಪುರ, ಶಾಂತಗೌಡ ಬಿರಾದಾರ, ಸಿದ್ದನಗೌಡ ದೇವರೆಡ್ಡಿ, ಕಿರಣಕುಮಾರ ನಾಟೀಕಾರ, ಶಿವಾನಂದ ಸಾಲಿಮಠ,…
ಸಿಂದಗಿ: ರಕ್ತದಾನ ಮಹತ್ತರವಾದ ದಾನಗಳಲ್ಲಿ ಒಂದಾಗಿದೆ. ರಕ್ತದಾನ ಮಾಡುವ ಮೂಲಕ ಹಲವಾರು ಜೀವವನ್ನು ಉಳಿಸಬಹುದು ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ತಾಲೂಕಿನ ಯಂಕಂಚಿ ಶ್ರೀಮಠದಲ್ಲಿ ಶ್ರೀ ಸಿದ್ದೇಶ್ವರ ರಕ್ತ ಭಂಡಾರ ಮತ್ತು ಯಂಕಂಚಿ ಸಂಸ್ಥಾನ ಹಿರೇಮಠ ಇವರ ಸಹಯೋಗದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ನುಡಿ ನಮನದ ನಿಮಿತ್ಯ ಹಮ್ಮಿಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಹೆಚ್ಚಿನವರು ರಕ್ತದಾನ ಮಾಡುತ್ತಾರೆ. ಆದರೆ ರಕ್ತದಾನ ಮಾಡುವ ಮುನ್ನ ಹಲವಾರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿಯೊಬ್ಬ ರಕ್ತದಾನ ಮಾಡುವ ವ್ಯಕ್ತಿ ತನ್ನ ಗುರುತಿನ ಚೀಟಿಯನ್ನು ಜೊತೆಗೆ ಕೊಂಡೊಯ್ಯಬೇಕು. ರಕ್ತದಾನದ ಸಮಯದಲ್ಲಿ ನಿಮ್ಮ ಜನ್ಮ ದಿನಾಂಕ ಮತ್ತು ಸಂಪರ್ಕ ಮಾಹಿತಿಯನ್ನು ಸಹ ನೀವು ನೀಡಬೇಕಾಗುತ್ತದೆ. ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.ಈ ಶಿಬಿರದಲ್ಲಿ ಅನೇಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.ಈ ವೇಳೆ ದಾವಣಗೇರಿಯ ಶಿವಕುಮಾರ, ವಾಯ್.ಪಿ. ನಾಯ್ಕೋಡಿ, ಶಿವಣ್ಣ ಮುರಡಿ, ಶಿವಾನಂದ ಶಾಸ್ತ್ರಿಗಳು, ಶಂಕರಗೌಡ ಬಿರಾದಾರ, ಮಹೇಶ ಹಿರೇಮಠ, ಸಿದ್ದು ಬೇನಾಳ,…
ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಆಧುನಿಕ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಸಿಂದಗಿ: ದುಬಾರಿಯಾಗುತ್ತಿರುವ ಕೃಷಿ ನಿರ್ವಹಣೆ ವೆಚ್ಚಗಳನ್ನು ಸರಿದೂಗಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯನ್ನು ಕಲ್ಪಿಸಿ ಆದಾಯ ದ್ವಿಗುಣಗೊಳಿಸಲು ನಡೆಸಿದ ಸರ್ವ ಪ್ರಯತ್ನಗಳು ನಿರರ್ಥಕವೆನಿಸಿದ ಪ್ರಸ್ತುತ ಕಾಲಘಟ್ಟದಲ್ಲಿ ಉಪ ಕಸುಬುಗಳೆ ರೈತರ ಸುಸ್ಥಿರ ಬದುಕಿಗೆ ಜೀವಾಳವಾಗಿವೆ ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಕೃಷಿ ಇಲಾಖೆ, ಜಲಾನಯನ ಇಲಾಖೆ, ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕ ಕಂಪನಿ, ಸಿಂದಗಿ ಮತ್ತು ಅನ್ನದಾತ ಒಣ ದ್ರಾಕ್ಷಿ ವಿಂಗಡನೆ ಕೇಂದ್ರ ಬ್ಯಾಕೋಡ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಆಧುನಿಕ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿರುವ ಕಾರಣ ಏರುತ್ತಿರುವ ತಾಪಮಾನ ಮತ್ತು ಬದಲಾಗುತ್ತಿರುವ ಮಳೆ ಮಾದರಿಗಳಿಂದ ಅನಿಶ್ಚತೆಗೊಂಡಿರುವ…
ಸಿಂದಗಿ: ಕುವೆಂಪುರವರ ಸಾಹಿತ್ಯ ವೈಜ್ಞಾನಿಕ ಹಾಗೂ ವೈಚಾರಿಕ ತಳಹದಿಯ ಮೇಲೆ ರೂಪ ಗೊಂಡಿರುವುದರಿಂದ ಮೌಡ್ಯವು ವಿಜ್ಞಾನಕ್ಕೆ ಮಂಡಿ ಊರಿ ನಿಂತಿದ್ದು ವಿದ್ಯಾರ್ಥಿಗಳು ಕುವೆಂಪು ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಎಂದು ಸಾಹಿತಿ ಚಿದಂಬರ ಬಂಡಗರ ಹೇಳಿದರು.ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಅಂಗ ಸಂಸ್ಥೆಯ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರ, ಸೂಫಿ ಸಂತರ, ತತ್ವಪದಕಾರರ, ಕೀರ್ತನಕಾರರ, ಸಾಹಿತ್ಯ ಚಿಂತನಗಳಲ್ಲಿ ಸೌಹಾರ್ದತೆ, ಧಾರ್ಮಿಕ ಸಾಮರಸ್ಯ, ಸಹಿಷ್ಣುತೆ, ಸಮಾನತೆಯ ವಿಚಾರಗಳು ಮತ್ತು ವೈಚಾರಿಕತೆ ನೆಲೆ ಮತ್ತು ಚಿಂತನೆಗಳ ಮೂಲಕ ಜನರಲ್ಲಿ ವೈಚಾರಿಕತೆಯ ವಿವೇಕವನ್ನು ಮೂಡಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹಾತ್ಮರ ತತ್ವಾದರ್ಶ ಮತ್ತು ವೈಚಾರಿಕತೆಯನ್ನು ವಿದ್ಯಾರ್ಥಿಗಳು ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ಡಾ. ರಾಜೇಶ್ವರಿ ಹಲಸಂಗಿ ಮಾತನಾಡಿ, ಸಂಪ್ರದಾಯದ ಶ್ರೇಣಿಕೃತ…
ಸಿಂದಗಿ: ೧೮ ವರ್ಷಕ್ಕಿಂತ ಕಡಿಮೆ ಇರುವ ಹೆಣ್ಣು ಮಕ್ಕಳ ಮದುವೆ ಮಾಡುವುದು ಕಾನೂನು ಅಡಿಯಲ್ಲಿ ಅಪರಾಧವಾಗಿದ್ದು ಬಾಲ್ಯವಿವಾಹ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಪಿಐ ಡಿ. ಹುಲಿಗೆಪ್ಪ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಜಾಗೃತಿ ಅಭಿಯಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನತೆ ಅಪರಾಧಕ್ಕೆ ಗುರಿಯಾದರೆ ದೇಶಕ್ಕೆ ಮಾರಕ. ಯುವ ಜನತೆ ಅಪರಾಧ ನಡೆಯುವುದು ಕಂಡು ಬಂದರೆ ಪೊಲೀಸರಿಗೆ ಸಹಕರಿಸಬೇಕು. ಅಪರಾಧ ಕಂಡಲ್ಲಿ ೧೧೨ ಪೊಲೀಸ್ ಸಹಾಯವಾಣಿಯ ಉಪಯೋಗ ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡಿದರೆ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಬಾಲ್ಯವಿವಾಹ, ಪೋಕ್ಸೋ ಪ್ರಕರಣ, ಸೋಷಿಯಲ್ ಮೀಡಿಯಾ ಕುರಿತು ತಿಳುವಳಿಕೆ ನೀಡಿದರು.ಈ ವೇಳೆ ಪಿಎಸ್‌ಐ ಭೀಮಪ್ಪ ರಬಕವಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ವವಿಸ್ತಾರವಾಗಿ ವಿವರಿಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ…
ನೂತನ ಜಿಲ್ಲೆ ರಚನೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ಮುಖಂಡರ ಒಕ್ಕೊರಲ ಧ್ವನಿ ಸಿಂದಗಿ: ಸಿಂದಗಿ ಜಿಲ್ಲೆ ಮಾಡುವ ದಿಸೆಯಲ್ಲಿ ಹತ್ತು ಜನರ ನಿಯೋಗದೊಂದಿಗೆ ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುವ ಕಾರ್ಯವಾಗಲಿ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.ಶುಕ್ರವಾರ ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನಿಲುವು ಒಂದೇ, ಸಿಂದಗಿ ಜಿಲ್ಲೆಯಾಗಬೇಕು. ಸಿಎಂ ಮತ್ತು ಡಿಸಿಎಂ ಅವರ ಮೇಲೆ ಸಿಂದಗಿ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಒತ್ತಡ ತರುವ ಕಾರ್ಯ ನಾವೆಲ್ಲರೂ ಸೇರಿ ಮಾಡೋಣ. ಪಕ್ಷಾತೀತವಾಗಿ ಹೋರಾಟ ಮಾಡಿ ಸರಕಾರದ ಕಣ್ಣು ತೆರೆಸುವ ಕಾರ್ಯ ಮಾಡಬೇಕು. ಜಿಲ್ಲಾ ಹೋರಾಟ ಸಮಿತಿ ರಚನೆಯಾಗಬೇಕು. ಇಂದು ಅಧಿಕಾರ ಬರುತ್ತೆ ಹೋಗುತ್ತೆ. ಆದರೆ ಜನಪ್ರತಿನಿದಿನಗಳ ನಿರ್ಧಾರ ಮಾತ್ರ ಕಠೋರವಾಗಿರಬೇಕು. ಹಾಗೆಯೇ ಜನಸಂಖ್ಯೆಯಲ್ಲೂ ಸಿಂದಗಿ ಮುಂದಿದೆ. ವಿವಿಧ ತಾಲೂಕುಗಳನ್ನು ಪರಿಗಣಿಸಿದರೆ ಸಿಂದಗಿಯೇ ಹೆಚ್ಚಿದೆ. ಮುಂಬರುವ ಜ.೫ರಂದು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುವ ಒಂದು ನಿಯೋಗ ತಯ್ಯಾರಿ ಆಗಲಿ…
