ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ೨೮ನೆಯ ಜಾತ್ರಾ ಮಹೋತ್ಸವ ಹಾಗೂ ೨ನೆಯ ವರ್ಷದ ಭವ್ಯ ರಥವನ್ನು ಎಳೆಯುವುದರ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಗೊಂಬೆ ಕುಣಿತ, ವೀರಗಾಸೆ ಕುಣಿತ, ಡೋಳ್ಳು ಕುಣಿತ, ಮಕ್ಕಳ ಕುಣಿತ ಜನಮನಗೆದ್ದಿತು. ಪುರವಂತಿಕೆ, ಜಯ ಘೋಷಗಳೊಂದಿಗೆ ರಥ ಹಾಗೂ ಪಲ್ಲಕ್ಕಿ ವಿಜೃಂಭಣೆಯಿಂದ ಮೂಡಿ ಬಂದಿತು.
ನಂತರ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ವೃಷಬಲಿಂಗ ಮಹಾಶಿವಯೋಗಿಗಳು ಮಾತನಾಡಿ, ಮಠ ಮಾನ್ಯಗಳಲ್ಲಿ ಜನರಿಗೆ ಆದ್ಯಾತ್ಮಿಕ ಚಿಂತನೆ ಮೂಡಿಸುವ ಜೊತೆಗೆ ಭಕ್ತಿ ಭಾವದ ರಸದೌತಣವನ್ನು ಉಣಬಡಿಸುತ್ತಿರುವುದು ಸಂತಸ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳು ಭಾವೈಕ್ಯತೆ ಸಾಕ್ಷಿಯಾಗುತ್ತಿವೆ ಎಂದರು.
ಈ ವೇಳೆ ಓತಿಹಾಳ ಶ್ರೀಮಠದ ಬಸವಮಹಾಂತ ಸ್ವಾಮೀಜಿಗಳು, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಶಹಪೂರದ ಶ್ರೀಗಳು, ಶಾಂತಗಂಗಾಧರ ಶ್ರೀಗಳು, ಬಮ್ಮನಹಳ್ಳಿ ಶ್ರೀಗಳು, ನಾಗರತ್ನ ಅಶೋಕ ಮನಗೂಳಿ, ಮಲ್ಲನಗೌಡ ಪಾಟೀಲ, ರವಿಗೌಡ ಪಾಟೀಲ, ಶಂಕ್ರಪ್ಪ ಮಕಣಾಪುರ, ಶಾಂತಗೌಡ ಬಿರಾದಾರ, ಸಿದ್ದನಗೌಡ ದೇವರೆಡ್ಡಿ, ಕಿರಣಕುಮಾರ ನಾಟೀಕಾರ, ಶಿವಾನಂದ ಸಾಲಿಮಠ, ಮಂಜುನಾಥ ಮಣೂರ, ಶಂಕರಗೌಡ ಜುಮನಾಳ, ಶಂಕರಗೌಡ ಕುಮಸಗಿ, ಶೆಂಕ್ರೆಪ್ಪ ಮಕಣಾಪುರ ಸೇರಿದಂತೆ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಶ್ರೀಮಠದ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

