Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ

“ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ

‘ನಮ್ಮ ಕಥಾ ಅರಮನೆ’ ಕನ್ನಡದ ಅಕ್ಷರೋತ್ಸವಕ್ಕೆ ೮ನೇ ವಾರ್ಷಿಕೋತ್ಸವ ಸಂಭ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಉಪಕಸುಬುಗಳೆ ರೈತರ ಸುಸ್ಥಿರ ಬದುಕಿಗೆ ಜೀವಾಳ :ಕೊಪ್ಪ
(ರಾಜ್ಯ ) ಜಿಲ್ಲೆ

ಉಪಕಸುಬುಗಳೆ ರೈತರ ಸುಸ್ಥಿರ ಬದುಕಿಗೆ ಜೀವಾಳ :ಕೊಪ್ಪ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಆಧುನಿಕ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಸಿಂದಗಿ: ದುಬಾರಿಯಾಗುತ್ತಿರುವ ಕೃಷಿ ನಿರ್ವಹಣೆ ವೆಚ್ಚಗಳನ್ನು ಸರಿದೂಗಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯನ್ನು ಕಲ್ಪಿಸಿ ಆದಾಯ ದ್ವಿಗುಣಗೊಳಿಸಲು ನಡೆಸಿದ ಸರ್ವ ಪ್ರಯತ್ನಗಳು ನಿರರ್ಥಕವೆನಿಸಿದ ಪ್ರಸ್ತುತ ಕಾಲಘಟ್ಟದಲ್ಲಿ ಉಪ ಕಸುಬುಗಳೆ ರೈತರ ಸುಸ್ಥಿರ ಬದುಕಿಗೆ ಜೀವಾಳವಾಗಿವೆ ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.
ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಕೃಷಿ ಇಲಾಖೆ, ಜಲಾನಯನ ಇಲಾಖೆ, ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕ ಕಂಪನಿ, ಸಿಂದಗಿ ಮತ್ತು ಅನ್ನದಾತ ಒಣ ದ್ರಾಕ್ಷಿ ವಿಂಗಡನೆ ಕೇಂದ್ರ ಬ್ಯಾಕೋಡ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಆಧುನಿಕ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿರುವ ಕಾರಣ ಏರುತ್ತಿರುವ ತಾಪಮಾನ ಮತ್ತು ಬದಲಾಗುತ್ತಿರುವ ಮಳೆ ಮಾದರಿಗಳಿಂದ ಅನಿಶ್ಚತೆಗೊಂಡಿರುವ ಕೃಷಿಯಲ್ಲಿ ಸ್ಥಿರತೆ ಕಾಣಲು ಜಾನುವಾರು ಸಾಕಾಣಿಕೆಯನ್ನು ಮುಖ್ಯ ಕಸುಬನ್ನಾಗಿಸುವ ನೀತಿ ಜಾರಿಗೆ ಬರಬೇಕು ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ನಾನಾಗೌಡ ಪಾಟೀಲ ಮಾತನಾಡಿದರು.
ತಾಂತ್ರಿಕ ಗೋಷ್ಠಿಯಲ್ಲಿ ಸಮುನ್ನತಿ ಬ್ಯಾಂಕಿನ ತಾಂತ್ರಿಕ ಅಧಿಕಾರಿ ಅನೀಲಕುಮಾರ ಡ್ರೋನ ಸೇರಿದಂತೆ ಆಧುನಿಕ ಕೃಷಿಗೆ ನೀಡಲಾಗುವ ಸಾಲ ಯೋಜನೆಗಳ ಬಗ್ಗೆ, ಬೆಳಗಾವಿಯ ವಲಯ ವ್ಯವಸ್ಥಾಪಕ ನಾಗರಾಜ ಇವರು ಎಫ್.ಪಿ.ಓ ಮುಖಾಂತರ ರೈತರಿಗಿರುವ ಸಾಲಸೌಲಭ್ಯಗಳ ಕುರಿತು, ಅಮೃತ ಆರ್ಗ್ಯಾನಿಕ್ ಫರ್ಟಿಲೈಜರ್ಸ ಜಿಲ್ಲಾ ವ್ಯವಸ್ಥಾಪಕ ಅಶೋಕ ಬಿರಾದಾರ ಸಾವಯವ ಗೊಬ್ಬರಗಳ ಕುರಿತು ಮತ್ತು ಕೀರ್ತಿ ಕಂಪನಿಯ ಪರಮೇಶ್ವರರವರು ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುರಿತು ತಾಂತ್ರಿಕ ಮಾಹಿತಿಗಳನ್ನು ನೀಡಿ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ನಿಂಗನಗೌಡ ಪಾಟೀಲ(ಡಂಬಳ), ಕವಿತಾ ಅಂಬಲಿ, ಗುರಬಸಪ್ಪ ಯಲಗೋಡ, ಅಂಬರೀಶ ಮಾರಲಭಾವಿ,ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶಿವಶಂಕ್ರಪ್ಪ ಅಂಬಲಿ, ಧರ್ಮಣ್ಣ ಸಾಹುಕಾರ ಭಾವಿಕಟ್ಟಿ, ಹನಿ ನೀರಾವರಿ ತಾಂತ್ರಿಕ ಸಲಹೆಗಾರ ಹಣಮಂತ ಕಲ್ಲೂರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಆಯೋಜಕ ನಿಂಗಣ್ಣ ಭಾವಿಕಟ್ಟಿ ಸ್ವಾಗತಿಸಿದರು. ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕಿ ಮಹಾದೇವಿ ಅಂಬಲಿ ಕಾರ್ಯಕ್ರಮ ನಿರೂಪಿಸಿದರು. ರಾಣಿ ಪೂಜಾರಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ

“ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ

‘ನಮ್ಮ ಕಥಾ ಅರಮನೆ’ ಕನ್ನಡದ ಅಕ್ಷರೋತ್ಸವಕ್ಕೆ ೮ನೇ ವಾರ್ಷಿಕೋತ್ಸವ ಸಂಭ್ರಮ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 24, 2026

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ
    In ವಿಶೇಷ ಲೇಖನ
  • “ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ
    In ವಿಶೇಷ ಲೇಖನ
  • ‘ನಮ್ಮ ಕಥಾ ಅರಮನೆ’ ಕನ್ನಡದ ಅಕ್ಷರೋತ್ಸವಕ್ಕೆ ೮ನೇ ವಾರ್ಷಿಕೋತ್ಸವ ಸಂಭ್ರಮ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 24, 2026
    In ದಿನಪತ್ರಿಕೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 23, 2026
    In ದಿನಪತ್ರಿಕೆ
  • ಜು.೨೪ ರಂದು ವಿವಿಧ ಗ್ರಾಮಗಳಲ್ಲಿ ಪಿಂಚಣಿ ಅದಾಲತ್
    In (ರಾಜ್ಯ ) ಜಿಲ್ಲೆ
  • ಜಗಳ ಹಚ್ಚುವುದು ಬಸನಗೌಡರ ಚಟ :ಹಮೀದ್ ಮುಶ್ರೀಫ್
    In (ರಾಜ್ಯ ) ಜಿಲ್ಲೆ
  • ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ೭ ದಿನದೊಳಗೆ ಹೇಳಿಕೆ, ದಾಖಲೆ ಸಲ್ಲಿಸಿ
    In (ರಾಜ್ಯ ) ಜಿಲ್ಲೆ
  • ಶ್ರೀ ದತ್ತ ಇಂಡಿಯಾ ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯ 12,000 ಟಿಸಿಡಿಗೆ ವಿಸ್ತರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.