ಸಿಂದಗಿ: ಕುವೆಂಪುರವರ ಸಾಹಿತ್ಯ ವೈಜ್ಞಾನಿಕ ಹಾಗೂ ವೈಚಾರಿಕ ತಳಹದಿಯ ಮೇಲೆ ರೂಪ ಗೊಂಡಿರುವುದರಿಂದ ಮೌಡ್ಯವು ವಿಜ್ಞಾನಕ್ಕೆ ಮಂಡಿ ಊರಿ ನಿಂತಿದ್ದು ವಿದ್ಯಾರ್ಥಿಗಳು ಕುವೆಂಪು ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಎಂದು ಸಾಹಿತಿ ಚಿದಂಬರ ಬಂಡಗರ ಹೇಳಿದರು.
ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಅಂಗ ಸಂಸ್ಥೆಯ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರ, ಸೂಫಿ ಸಂತರ, ತತ್ವಪದಕಾರರ, ಕೀರ್ತನಕಾರರ, ಸಾಹಿತ್ಯ ಚಿಂತನಗಳಲ್ಲಿ ಸೌಹಾರ್ದತೆ, ಧಾರ್ಮಿಕ ಸಾಮರಸ್ಯ, ಸಹಿಷ್ಣುತೆ, ಸಮಾನತೆಯ ವಿಚಾರಗಳು ಮತ್ತು ವೈಚಾರಿಕತೆ ನೆಲೆ ಮತ್ತು ಚಿಂತನೆಗಳ ಮೂಲಕ ಜನರಲ್ಲಿ ವೈಚಾರಿಕತೆಯ ವಿವೇಕವನ್ನು ಮೂಡಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹಾತ್ಮರ ತತ್ವಾದರ್ಶ ಮತ್ತು ವೈಚಾರಿಕತೆಯನ್ನು ವಿದ್ಯಾರ್ಥಿಗಳು ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಡಾ. ರಾಜೇಶ್ವರಿ ಹಲಸಂಗಿ ಮಾತನಾಡಿ, ಸಂಪ್ರದಾಯದ ಶ್ರೇಣಿಕೃತ ವ್ಯವಸ್ಥೆಗೆ ಕುವೆಂಪು ಸಾಹಿತ್ಯ ಚಾಟಿ ಏಟಾಗಿ ಪರಿಣಮಿಸಿದ್ದು, ಕಾಯಕ ಹಾಗೂ ಸ್ವಾವಲಂಬಿ ಬದುಕಿಗೆ ಪೂರಕವಾದ ವಾತಾವರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ.ಬಿ.ಜಿ.ಪಾಟೀ¯ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ರಾಹುಲ್ ಕಾಂಬಳೆ, ಕಾರ್ತಿಕ್ ಹಿರೇಮಠ, ಐಕ್ಯೂಎಸಿ ಸಂಯೋಜಕ ಡಾ.ಅಂಬರೀಶ ಬಿರಾದಾರ, ಡಾ.ಅರವಿಂದ ಮನಗೂಳಿ, ಜಿ.ಜಿ.ಕಾಂಬಳೆ, ಬಿ.ಡಿ.ಮಾಸ್ತಿ, ಸತೀಶ. ಬಿರಾದಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

