ಸಿಂದಗಿ: ರಕ್ತದಾನ ಮಹತ್ತರವಾದ ದಾನಗಳಲ್ಲಿ ಒಂದಾಗಿದೆ. ರಕ್ತದಾನ ಮಾಡುವ ಮೂಲಕ ಹಲವಾರು ಜೀವವನ್ನು ಉಳಿಸಬಹುದು ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಯಂಕಂಚಿ ಶ್ರೀಮಠದಲ್ಲಿ ಶ್ರೀ ಸಿದ್ದೇಶ್ವರ ರಕ್ತ ಭಂಡಾರ ಮತ್ತು ಯಂಕಂಚಿ ಸಂಸ್ಥಾನ ಹಿರೇಮಠ ಇವರ ಸಹಯೋಗದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ನುಡಿ ನಮನದ ನಿಮಿತ್ಯ ಹಮ್ಮಿಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಹೆಚ್ಚಿನವರು ರಕ್ತದಾನ ಮಾಡುತ್ತಾರೆ. ಆದರೆ ರಕ್ತದಾನ ಮಾಡುವ ಮುನ್ನ ಹಲವಾರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿಯೊಬ್ಬ ರಕ್ತದಾನ ಮಾಡುವ ವ್ಯಕ್ತಿ ತನ್ನ ಗುರುತಿನ ಚೀಟಿಯನ್ನು ಜೊತೆಗೆ ಕೊಂಡೊಯ್ಯಬೇಕು. ರಕ್ತದಾನದ ಸಮಯದಲ್ಲಿ ನಿಮ್ಮ ಜನ್ಮ ದಿನಾಂಕ ಮತ್ತು ಸಂಪರ್ಕ ಮಾಹಿತಿಯನ್ನು ಸಹ ನೀವು ನೀಡಬೇಕಾಗುತ್ತದೆ. ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಶಿಬಿರದಲ್ಲಿ ಅನೇಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಈ ವೇಳೆ ದಾವಣಗೇರಿಯ ಶಿವಕುಮಾರ, ವಾಯ್.ಪಿ. ನಾಯ್ಕೋಡಿ, ಶಿವಣ್ಣ ಮುರಡಿ, ಶಿವಾನಂದ ಶಾಸ್ತ್ರಿಗಳು, ಶಂಕರಗೌಡ ಬಿರಾದಾರ, ಮಹೇಶ ಹಿರೇಮಠ, ಸಿದ್ದು ಬೇನಾಳ, ರಾಮನಗೌಡ ದೋರನಳ್ಳಿ ಸೇರಿದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗುರು ಹಿರಿಯರು ಯುವಕರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

