ಸಿಂದಗಿ: ೧೮ ವರ್ಷಕ್ಕಿಂತ ಕಡಿಮೆ ಇರುವ ಹೆಣ್ಣು ಮಕ್ಕಳ ಮದುವೆ ಮಾಡುವುದು ಕಾನೂನು ಅಡಿಯಲ್ಲಿ ಅಪರಾಧವಾಗಿದ್ದು ಬಾಲ್ಯವಿವಾಹ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಪಿಐ ಡಿ. ಹುಲಿಗೆಪ್ಪ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಜಾಗೃತಿ ಅಭಿಯಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನತೆ ಅಪರಾಧಕ್ಕೆ ಗುರಿಯಾದರೆ ದೇಶಕ್ಕೆ ಮಾರಕ. ಯುವ ಜನತೆ ಅಪರಾಧ ನಡೆಯುವುದು ಕಂಡು ಬಂದರೆ ಪೊಲೀಸರಿಗೆ ಸಹಕರಿಸಬೇಕು. ಅಪರಾಧ ಕಂಡಲ್ಲಿ ೧೧೨ ಪೊಲೀಸ್ ಸಹಾಯವಾಣಿಯ ಉಪಯೋಗ ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡಿದರೆ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಬಾಲ್ಯವಿವಾಹ, ಪೋಕ್ಸೋ ಪ್ರಕರಣ, ಸೋಷಿಯಲ್ ಮೀಡಿಯಾ ಕುರಿತು ತಿಳುವಳಿಕೆ ನೀಡಿದರು.
ಈ ವೇಳೆ ಪಿಎಸ್‌ಐ ಭೀಮಪ್ಪ ರಬಕವಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ವವಿಸ್ತಾರವಾಗಿ ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪ ಪಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪನ್ಯಾಸಕರಾದ ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಎಸ್.ಎಚ್.ಜಾಧವ, ಪಿ.ಬಿ.ಜೋಗೂರ, ಡಾ.ಶರಣಬಸವ ಜೋಗೂರ, ವ್ಹಿ.ಪಿ.ನಂದಿಕೋಲ, ಎನ್.ಎಂ.ಶೆಳ್ಳಗಿ, ಸಂಗಮೇಶ ಚಾವರ್, ರೋಹಿತ ಸುಲ್ಪಿ, ಆರ್.ಎಂ.ಕೊಳ್ಳೂರೆ, ಶಿವಶರಣ ಬೂದಿಹಾಳ, ಬಿ.ಬಿ.ಜಮಾದಾರ, ಸುನೀಲ ಪಾಟೀಲ, ರಾಹುಲ ನಾರಾಯಣಕರ್, ಶಿವಯೋಗಿ ತಾಳಿಕೋಟಿ, ಗವಿಸಿದ್ದಪ್ಪ ಆನೆಗುಂದಿ, ನೀಲಕಂಠ ಮೇತ್ರಿ, ಅಡಿವೆಪ್ಪಾ ದಸ್ಮಾ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

