Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಡಿ.೩೧ ರಂದು ಬೆಳಗ್ಗೆ ೧೦.೩೦ಕ್ಕೆ ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದಸಮಾಜದ ಸಂಘಟನಾ ಸಭೆ ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ರಾಜ್ಯ ದೇವಾಂಗ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಈ ಸಭೆಗೆ ಹಮ್ಮಿಕೊಂಡಿದ್ದು ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ, ಹಂಪಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಮಠದ ಟ್ರಸ್ಟಿ ನಾಗೇಶ ಭಾವಿಕಟ್ಟಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಕುಮಾರ್ ಕೋಷ್ಠಿ, ಕರ್ನಾಟಕ ರಾಜ್ಯ ದೇವಾಂಗದ ಸಂಘದ ವಿಜಯಪುರ ನಗರ ಘಟಕದ ಅಧ್ಯಕ್ಷ ಪ್ರಸಾದ ಬಸರಕೋಡ ಆಗಮಿಸುವರು ಎಂದು ತಾಲೂಕು ಸಂಘಟನಾ ಕಾರ್ಯದರ್ಶಿ ಎಸ್.ಆಯ್.ಹೆಬ್ಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿ: ಭೀಮಾ ನದಿಯ ತೀರದಲ್ಲಿರುವ ಜನಸಾಮಾನ್ಯರ ಅಭಿವೃದ್ಧಿಗಾಗಿ ಇಂಡಿ ಜಿಲ್ಲೆಯಾಗಿಸಲು ಮನವಿ ಮಾಡಿಕೊಳ್ಳಲಾಗುತ್ತಿದೆಯೇ ಹೊರತಾಗಿ ಜನರ ಮಧ್ಯದಲ್ಲಿ ಬೆಂಕಿ ಹಚ್ಚುವ ಯಾವದೇ ಕೆಲಸ ನಮ್ಮ ಶಾಸಕರು ಮಾಡುತ್ತಿಲ್ಲ ಎಂದು ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಇಂಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಕಾಮಗೊಂಡ ಹೇಳಿದರು.ಶುಕ್ರವಾರ ಸಿಂದಗಿ ರಸ್ತೆಯ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಇಂಡಿ ಬ್ರಿಟೀಷರ ಕಾಲದಿಂದಲೂ ಸಿಂದಗಿ ಒಳಗೊಂಡು ಉಪ ಕಂದಾಯ ವಿಭಾಗಾಧಿಕಾರಿಗಳ ಕಚೇರಿ, ಡಿವೈಎಸ್ಪಿ ಕಚೇರಿಗಳನ್ನು ಹೊಂದಿದ್ದು, ಅಲ್ಲದೇ ಚುನಾವಣೆ ಹುಟ್ಟಿದಾಗಿನಿಂದಲೂ ೨೦೦೨ ರ ವರೆಗೆ ಸಿಂದಗಿ ತಾಲ್ಲೂಕಿನ ೪೨ ಗ್ರಾಮಗಳು ಇಂಡಿ ಮತಕ್ಷೇತ್ರದಲ್ಲಿಯೇ ಇದ್ದು, ಅವುಗಳಿಗೆ ಯಾವದೇ ತಾರತಮ್ಯ ಮಾಡದೇ ಆಡಳಿತ ನಡೆಸಲಾಗಿದೆ. ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳ ಜನ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದಾರೆ. ಇವೆರಡೂ ತಾಲ್ಲೂಕುಗಳ ಮಧ್ಯದಲ್ಲಿ ಆಡಳಿತದ ದೃಷ್ಠಿಯಿಂದ ಯಾವದೇ ಭಿನ್ನಾಭಿಪ್ರಾಯ ಬಂದಿಲ್ಲ.ಇಂಡಿ ಶಾಸಕರು ವಿಧಾನ ಸಭೆಯ ಪೂರ್ವದಲ್ಲಿಯೇ ಈ ಭಾಗದ ಅಭಿವೃದ್ಧಿಯ ಕನಸನ್ನು ಹೊತ್ತು ಇಂಡಿ ಜಿಲ್ಲೆ ಮಾಡಬೇಕೆಂದು…
ಇಂಡಿ: ಓ ನನ್ನ ಚೇತನ ಆಗು ನೀ ಅನಿಕೇತನ ಎಂದು ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು ಒಂದು ಧೀಮಂತ ಚೇತನ. ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಕೃತಿ ಸಾಧ್ಯತೆಗಳನ್ನು ಸಮೃದ್ಧವಾಗಿ ನೀಡಿದ ಕುವೆಂಪು ಮಾನವ ಸಮಾನತೆಯ ಹರಿಕಾರರಾಗಿದ್ದರು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕುವೆಂದು ಜನ್ಮ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.ಬದುಕಿನ ಸಣ್ಣ ಸಂಗತಿಗಳು ಚಿಲ್ಲರೆ ಮನಸುಗಳು ಅವರೆನ್ನಂದೂ ಬಾಧಿಸಲಿಲ್ಲ. ಕಡೆಗಣಿಸಲ್ಪಟ್ಟವರಿಗೆ ಉತ್ತಮ ಸ್ಥಾನವನ್ನು ನೀಡಿ ನೋವುಂಡ ಪಾತ್ರಗಳಿಗೆ ದನಿಯಾಗಿ ನಿಂತರು ಎಂದರು.ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ, ಬಸವರಾಜ ರಾಹೂರ, ಎಸ್.ಆರ್. ಮುಜಗೊಂಡ, ಎಡಿಎಲ್‌ಆರ್ ಕಾಂಬಳೆ, ಎಂ.ಪಿ. ಕೊಡತೆ, ಲಲಿತಾ ಬಗಲಿ ಮತ್ತಿತರಿದ್ದರು.
ಇಂಡಿ: ಇಂಡಿ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ೨೯ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧ ತೆರಳಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಅರ್ಪಿಸಿದರು.ಪ್ರತಿಭಟನೆ ಪಟ್ಟಣದ ಕುಂಬಾರ ಓಣಿಯಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಿನಿ ವಿಧಾನಸೌಧ ತಲುಪಿ ಅಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಅಲ್ಲಿ ಮಾತನಾಡಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಕಾಂತು ಇಂಡಿ, ರಾಜು ಕುಲಕರ್ಣಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಸಿದ್ದಣ್ಣ ತಾಂಬೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಣ್ಣ ಸುಣಗಾರ, ಶರಣ ಸಾಹಿತ್ಯ ಪರಿಷತ್ತಿನ ಬಿ.ಎಸ್.ಪಾಟೀಲ, ಖಾಸಗಿ ವೈದ್ಯಾಧಿಕಾರಿಗಳ ಸಂಘದ ಡಾ|| ಬಿ.ಎಸ್.ಅಂಕಲಗಿ, ಪುರಸಭೆ ಮಾಜಿ ಅಧ್ಯಕ್ಷ ಸಂಘದ ಶ್ರೀಕಾಂತ ಕುಡಿಗನೂರ, ಅಶೋಕ ಪಾಟೀಲ, ಮರಾಠಾ ಯುವ ಘಟಕ ಸಂಘದ ಯಮುನಾಜಿ ಸಾಳುಂಕೆ, ಗ್ರಾ.ಪಂ ಅಧ್ಯಕ್ಷರ ಸಂಘದ ಶೈಲಜಾ ಜಾಧವ, ಕದಳಿ ವೇದಿಕೆಯ ಶಶಿಕಲಾ ಬೇಟಗೇರಿ, ಕುಂಬಾರ ಸಮಾಜದ ಸಂಘದಿಂದ ಸತೀಶ ಕುಂಬಾರ, ಮತ್ತು ಕಾಂಗ್ರೆಸ್ ಮಹಿಳಾ ಘಟಕದ ನಿರ್ಮಲಾ ತಳಕೇರಿ, ಮಾತನಾಡಿ ಇಂಡಿ…
ಸಿಂದಗಿ: ಶ್ರೀ ಧರ್ಮಶಾಸ್ತಾ ಸನ್ನಿದಾನಂ ಹಾಗೂ ಸೇವಾ ಸಮಿತಿ ಸಿಂದಗಿ ಇವರ ವತಿಯಿಂದ ಡಿ. ೩೧ರಂದು ಹಮ್ಮಿಕೊಂಡಿರುವ ೪ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮ ಮತ್ತು ನೂತನ ಶಾಸಕ ಅಶೋಕ ಮನಗೂಳಿಯವರಿಗೆ, ಪತ್ರಕರ್ತರಿಗೆ, ಪುರಸಭೆಯ ಸದಸ್ಯರಿಗೆ ಸನ್ಮಾನ ಸಮಾರಂಭ ನೇರವೇರಲಿದೆ ಎಂದು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಅಧ್ಯಕ್ಷ ರಾಜಶೇಖರ ಉಪ್ಪಿನ ತಿಳಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಸೇವಾ ಸಮಿತಿಯ ಉಪಾಧ್ಯಕ್ಷ ಶಾಂತವೀರ ಕುಂಬಾರ, ಸಿಂದಗಿ ತಾಲ್ಲೂಕಿನ ಮಹಾಜನತೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಅಯ್ಯಪ್ಪ ಸ್ವಾಮಿಯವರ ಮಹಾಪ್ರಸಾದವನ್ನು ಸ್ವೀಕರಿಸಬೇಕು ಎಂದು ಹೇಳಿದರು..ಈ ವೇಳೆ ಸೇವಾ ಸಮಿತಿಯ ಸದಸ್ಯ ಕಿರಣ ಶಿವಸಿಂಪಿಗೇರ, ಶಾಂತು ಬಿರಾದಾರ, ಆನಂದ ಮಲ್ಲೇದ, ರಾಜ ಬಡಿಗೇರ, ಶಿವಾನಂದ ಪರಸಪ್ಪಗೋಳ, ಅರವಿಂದ ವಸ್ತ್ರದ ಸೇರಿದಂತೆ ಅಯ್ಯಪ್ಪ ಸ್ವಾಮಿ ವೃತಾಧಾರಿಗಳು ಇದ್ದರು.
ಮುದ್ದೇಬಿಹಾಳ: ಜಿದ್ದಾ ಜಿದ್ದಿಯಿಂದ ಕೂಡಿದ್ದ ಇಲ್ಲಿನ ೧೮ ನೇ ವಾರ್ಡ್ ನ ಉಪಚುನಾವಣೆಗೆ ಶನಿವಾರ ತೆರೆ ಬಿದ್ದಿದೆ.ಅಲ್ಲಾಭಕ್ಷ ಢವಳಗಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಒಟ್ಟು ೬ ಜನ ಸ್ಪರ್ದಿಸಿದ್ದು ಡಿ.೨೭ ರಂದು ಮತದಾನ ನಡೆದಿದ್ದು ಒಟ್ಟು ೮೨೬ ಮತಗಳು ಚಲಾವಣೆಗೊಂಡಿದ್ದವು.ಶನಿವಾರ ಬೆಳಿಗ್ಗೆ ೮:೩೦ ರ ಹೊತ್ತಿಗೆ ಮತ ಎಣಿಕೆ ಕಾರ್ಯ ಮುಕ್ತಾಯವಾಗಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶಾಹಿರಾಬಾನು ಅಲ್ಲಾಭಕ್ಷ ಢವಳಗಿ ಅವರು ವಿಜಯದ ಮಾಲೆ ಧರಿಸಿದರು.ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಸದಸ್ಯರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ರಿಯಾಜ ಢವಳಗಿ, ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ದಾವಲ ಗೊಳಸಂಗಿ, ಬಾಪ್ ಢವಳಗಿ ಸೇರಿದಂತೆ ಮತ್ತೀತರರು ಇದ್ದರು.ಮತಗಳ ವಿವರ ಹೀಗಿದೆ :ದಯಾರಾಮ್‌ಸಿಂಗ್ ರಾಯಚೂರ – ೬೧ನೂರ್‌ಅಹಮ್ಮದ ಶಿವಣಗಿ – ೨೩ಲಾಳೇಮಶ್ಯಾಕ ನಾಯ್ಕೋಡಿ(ಬುಡ್ಡಾ) – ೪೮ಶಾಹಿರಾಬಾನು ಢವಳಗಿ – ೪೫೪ಮೊಹಮ್ಮದ ಹುಣಚಗಿ – ೧೮ಅಬ್ದುಲಅಜೀಜ ಢವಳಗಿ -…
ಆಲಮೇಲದಲ್ಲಿ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಸಚಿವ ಶಿವಾನಂದ ಪಾಟೀಲ ಕರೆ ವಿಜಯಪುರ: ರೈತರು ಹೊಸ ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯಿಂದ ಕೂಡಿದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಅದರೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಬಳಸಿಕೊಳ್ಳಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಶನಿವಾರ ಆಲಮೇಲ ಪಟ್ಟಣದಲ್ಲಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಒಂದೇ ಬೆಳೆಗ ಸೀಮಿತವಾಗದೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಬೇಕು. ಅದರಲ್ಲಿ ಒಂದರ ಬೆಲೆ ಇಲ್ಲದಿದ್ದಲ್ಲಿ ಇನ್ನೊಂದು ಬೆಳೆಯ ಬೆಲೆ ಇರುತ್ತದೆ. ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಮಳೆ ಕಡಿಮೆ ಆದ ಸಂದರ್ಭದಲ್ಲಿ ಕೂಡ ಅದಕ್ಕೆ ಹೊಂದುಕೊಳ್ಳುವಂತಹ ಬೇಸಾಯ ಪದ್ಧತಿಗಳನ್ನು ರೈತರು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು.ಕಾರ್ಯಕ್ರಮದಲ್ಲಿ ಆಲಮೇಲದ ಗುರುಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಆಲಮೇಲ ದೇವರಗುಡ್ಡ ಗುರುಪೀಠದ…
ಸಿಂದಗಿ: ಕಂದಾಯ ಇಲಾಖೆಯ ಸೆಕ್ರೆಟೆಡ್ ಆಫೀಸಿನ ಉಲ್ಲೇಖದ ಮೇರೆಗೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕೆನ್ನುವ ಜನಾಭಿಪ್ರಾಯ ಸಂಗ್ರಹ ಮಾಡಲು ಸಭೆ ಕರೆಯಲಾಗಿದೆ. ಅದಕ್ಕೆ ಸಾಧಕ ಬಾಧಕಗಳನ್ನು ಚರ್ಚಿಸಿ ಅಭಿಪ್ರಾಯ ಮಂಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಕಾರಣ ಜ.೧೦ರ ಒಳಗಾಗಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಚಂದ್ರಕಾಂತ ಗದ್ಯಾಳ ಹೇಳಿದರು.ಪಟ್ಟಣದ ತಾಪಂ ಸಭಾ ಭವನದಲ್ಲಿ ನಡೆದ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಕರೆದ ಜನಾಭಿಪ್ರಾಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶಾಸಕ ಅಶೋಕ ಮನಗೂಳಿ ಮಾತನಾಡಿ, ಸರಕಾರದಿಂದ ಬಂದ ವರದಿಯ ಬಗ್ಗೆ ಯಾರಿಗೂ ಸಂಪರ್ಕ ಮಾಡಿಲ್ಲ. ಹಿಂದೆ ಅಖಂಡ ಜಿಲ್ಲೆಯಲ್ಲಿ ೧೫ ತಾಲೂಕುಗಳಿದ್ದವು ಬಾಗಲಕೋಟ ಪ್ರತ್ಯೇಕ ಜಿಲ್ಲೆಯಾಗಿರುವುದರಿಂದ ಅಭಿವೃದ್ಧಿ ಕುಂಟಿತವಾಗಿತ್ತು ಜೆ.ಎಚ್.ಪಟೇಲ, ಎಚ್.ಡಿ.ಕುಮಾರಸ್ವಾಮಿಯವರು ಮತ್ತೆ ಹಲವು ತಾಲೂಕುಗಳನ್ನು ರಚನೆ ಮಾಡಿರುವುದರಿಂದ ಈ ಜಿಲ್ಲೆಗೆ ೧೩ ತಾಲೂಕುಗಳಾಗಿವೆ ಇವುಗಳಲ್ಲಿ ನೀರಾವರಿ, ರಾಷ್ಟ್ರೀಯ ಹೆದ್ದಾರಿಯಿಂದ ನಾಲ್ಕು ರಾಜ್ಯಗಳ ಸಂಪರ್ಕಕೊಂಡಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ತುಲನಾತ್ಮವಾಗಿ ನೋಡಿದಾಗ ಎಲ್ಲ…
ಸಿಂದಗಿ: ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶ್ರೀ ಸಮರ್ಥ ಸದ್ಗುರು ಭೀಮಾಶಂಕರ ಮಹಾರಾಜರ ೬೯ನೆಯ ಪುಣ್ಯಾರಾಧನೆಯ ಪ್ರಯುಕ್ತ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.ತಾಲೂಕಿನ ಮಂಗಳೂರು ಗ್ರಾಮದ ಶ್ರೀ ಸಮರ್ಥ ಸದ್ಗುರು ಭೀಮಾಶಂಕರ ಮಹಾರಾಜರ ೬೯ನೇ ಪುಣ್ಯರಾಧನೆ ಪ್ರಯುಕ್ತ ನಿವೃತ್ತ ಶಿಕ್ಷಕ ವಿರೂಪಾಕ್ಷಪ್ಪ ಸಿಂಪಿ ರಚಿಸಿದ ಭವ ದಾಟುವ ದಾರಿ ಎಂಬ ಆಧ್ಯಾತ್ಮಿಕ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಡಿ.೩೧ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರದ ದಿವ್ಯ ಸಾನಿಧ್ಯ ಯಂಕಂಚಿಯ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ವಹಿಸುವರು. ಬಮ್ಮನಹಳ್ಳಿಯ ಶ್ರೀ ಸಮರ್ಥ ಸದ್ಗುರು ನರಸಿಂಹ ಮಹಾರಾಜರು ಅಧ್ಯಕ್ಷತೆ ವಹಿಸುವರು. ಮಂಗಳೂರಿನ ವೇ. ಮೂ. ಮಲ್ಲಯ್ಯ ಸಿದ್ದರಾಮಯ್ಯ ಹಿರೇಮಠ ಅವರು ಸಮ್ಮುಖ ವಹಿಸುವರು. ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳು ನೇತೃತ್ವ ವಹಿಸುವರು. ನ್ಯಾಯವಾದಿ ಎನ್.ಎಸ್. ಹಿರೇಮಠ ಗ್ರಂಥ ಬಿಡುಗಡೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕುಮಸಿಯ ಸದ್ಗುರು ರಘುನಾಥ್ ಭಟ್ ಜೋಶಿ, ವಿಠ್ಠಲ ಕೊಳ್ಳೂರ, ತದ್ದೇವಾಡಿಯ ಪುರಾಣ ಕೇಸರಿ ಮಹಾಂತೇಶ ಶಾಸ್ತ್ರಿಗಳು ಉಪಸ್ಥಿತರಿರುವರು.ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ…
ಸಿಂದಗಿ: ಬೆಂಗಳೂರಲ್ಲಿ ನಡೆದ ಕರವೇ ಬ್ರಹತ್ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಹಾಗೂ ಎಲ್ಲ ಕರವೇ ಕಾರ್ಯಕರ್ತರನ್ನು ರಾಜ್ಯ ಸರಕಾರ ಬಂಧನ ಮಾಡಿಸಿದೆ. ಕರ್ನಾಟಕದಲ್ಲಿ ಕನ್ನಡಿಗನಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ್ ಡಂಬಳ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಂದಗಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬೆಂಗಳೂರಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಬಂಧಿಸಿದನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡಿದ ಅವರು, ನಾರಾಯಣಗೌಡರು ತಮ್ಮ ಯಾವುದೇ ಸ್ವಾರ್ಥಿಕ್ಕಾಗಿ ಹೋರಾಟ ಮಾಡಿಲ್ಲ. ಈ ಕನ್ನಡ ನಾಡಿನ ಮಣ್ಣಿಗಾಗಿ, ಕನ್ನಡದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರನ್ನು ಬಂದಿಸಿದ ಮಾತ್ರಕ್ಕೆ ಕರವೇ ಹೋರಾಟ ನಿಲ್ಲುತ್ತದೆ ಎನ್ನುವುದು ನಿಮ್ಮ ಮುಟ್ಟಾಳತನ. ನಮ್ಮ ಹೋರಾಟ ಯಾವತ್ತೂ ನಿಲ್ಲುವುದಿಲ್ಲ. ಸಿಂದಗಿಯ ಅಂಗಡಿ ಮಾಲೀಕರಿಗೆ ಕಳೆದ ದಿನಗಳಲ್ಲಿ ಕನ್ನಡ ನಾಮಫಲಕ ಕುರಿತು ಜಾಗ್ರತಿ ಮೂಡಿಸಿದ್ದೇವೆ. ವಿಶೇಷವಾಗಿ ಮಾರ್ವಾಡಿಗಳು ಎಚ್ಚೆತ್ತುಕೊಂಡು ನಿಮ್ಮ ನಾಮ ಫಲಕಗಳನ್ನು ಬದಲಾಯಿಸಿ ಅಚ್ಚ ಕನ್ನಡದ…
