ಸಿಂದಗಿ: ಶ್ರೀ ಧರ್ಮಶಾಸ್ತಾ ಸನ್ನಿದಾನಂ ಹಾಗೂ ಸೇವಾ ಸಮಿತಿ ಸಿಂದಗಿ ಇವರ ವತಿಯಿಂದ ಡಿ. ೩೧ರಂದು ಹಮ್ಮಿಕೊಂಡಿರುವ ೪ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮ ಮತ್ತು ನೂತನ ಶಾಸಕ ಅಶೋಕ ಮನಗೂಳಿಯವರಿಗೆ, ಪತ್ರಕರ್ತರಿಗೆ, ಪುರಸಭೆಯ ಸದಸ್ಯರಿಗೆ ಸನ್ಮಾನ ಸಮಾರಂಭ ನೇರವೇರಲಿದೆ ಎಂದು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಅಧ್ಯಕ್ಷ ರಾಜಶೇಖರ ಉಪ್ಪಿನ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಸೇವಾ ಸಮಿತಿಯ ಉಪಾಧ್ಯಕ್ಷ ಶಾಂತವೀರ ಕುಂಬಾರ, ಸಿಂದಗಿ ತಾಲ್ಲೂಕಿನ ಮಹಾಜನತೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಅಯ್ಯಪ್ಪ ಸ್ವಾಮಿಯವರ ಮಹಾಪ್ರಸಾದವನ್ನು ಸ್ವೀಕರಿಸಬೇಕು ಎಂದು ಹೇಳಿದರು..
ಈ ವೇಳೆ ಸೇವಾ ಸಮಿತಿಯ ಸದಸ್ಯ ಕಿರಣ ಶಿವಸಿಂಪಿಗೇರ, ಶಾಂತು ಬಿರಾದಾರ, ಆನಂದ ಮಲ್ಲೇದ, ರಾಜ ಬಡಿಗೇರ, ಶಿವಾನಂದ ಪರಸಪ್ಪಗೋಳ, ಅರವಿಂದ ವಸ್ತ್ರದ ಸೇರಿದಂತೆ ಅಯ್ಯಪ್ಪ ಸ್ವಾಮಿ ವೃತಾಧಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
