ಸಿಂದಗಿ: ಬೆಂಗಳೂರಲ್ಲಿ ನಡೆದ ಕರವೇ ಬ್ರಹತ್ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಹಾಗೂ ಎಲ್ಲ ಕರವೇ ಕಾರ್ಯಕರ್ತರನ್ನು ರಾಜ್ಯ ಸರಕಾರ ಬಂಧನ ಮಾಡಿಸಿದೆ. ಕರ್ನಾಟಕದಲ್ಲಿ ಕನ್ನಡಿಗನಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ್ ಡಂಬಳ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಂದಗಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬೆಂಗಳೂರಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಬಂಧಿಸಿದನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡಿದ ಅವರು, ನಾರಾಯಣಗೌಡರು ತಮ್ಮ ಯಾವುದೇ ಸ್ವಾರ್ಥಿಕ್ಕಾಗಿ ಹೋರಾಟ ಮಾಡಿಲ್ಲ. ಈ ಕನ್ನಡ ನಾಡಿನ ಮಣ್ಣಿಗಾಗಿ, ಕನ್ನಡದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರನ್ನು ಬಂದಿಸಿದ ಮಾತ್ರಕ್ಕೆ ಕರವೇ ಹೋರಾಟ ನಿಲ್ಲುತ್ತದೆ ಎನ್ನುವುದು ನಿಮ್ಮ ಮುಟ್ಟಾಳತನ. ನಮ್ಮ ಹೋರಾಟ ಯಾವತ್ತೂ ನಿಲ್ಲುವುದಿಲ್ಲ. ಸಿಂದಗಿಯ ಅಂಗಡಿ ಮಾಲೀಕರಿಗೆ ಕಳೆದ ದಿನಗಳಲ್ಲಿ ಕನ್ನಡ ನಾಮಫಲಕ ಕುರಿತು ಜಾಗ್ರತಿ ಮೂಡಿಸಿದ್ದೇವೆ. ವಿಶೇಷವಾಗಿ ಮಾರ್ವಾಡಿಗಳು ಎಚ್ಚೆತ್ತುಕೊಂಡು ನಿಮ್ಮ ನಾಮ ಫಲಕಗಳನ್ನು ಬದಲಾಯಿಸಿ ಅಚ್ಚ ಕನ್ನಡದ ನಾಮ ಫಲಕಗಳನ್ನು ಅಳವಡಿಸಿ, ಇಲ್ಲವಾದಲ್ಲಿ ಖಂಡಿತವಾಗಿಯೂ ನಿಮ್ಮ ಅಂಗಡಿಗಳನ್ನು ಧ್ವಂಸಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರವಿಕಾಂತ ನಾಯ್ಕೋಡಿ, ಶ್ರೀಕಾಂತ ಬಿಜಾಪುರ, ಬಂಗಾರೆಪ್ಪಗೌಡ ಬಿರಾದಾರ, ಮಂಜು ಬಿಜಾಪುರ, ತನ್ವಿರ್ ಬೈರಾಮಡಗಿ, ಸಂದೀಪ ಚೌರ, ಮಹಾಂತೇಶ ಪರಗೊಂಡ, ಮಡಿವಾಳಪ್ಪಗೌಡ ಬಿರಾದಾರ, ಶ್ರೀಶೈಲ್ ಚೆಳ್ಳಗಿ, ಶ್ರೀಕಾಂತ ರಾಠೋಡ, ಅಂಬರೀಶ ಮಾರಾಲಬಾವಿ, ಸಂತೋಷ ಕ್ಷತ್ರಿ, ಗೊಲ್ಲಾಳ ಬ್ಯಾಕೋಡ, ಸಮೀರ್ ಪಟೇಲ್ ಸೇರಿದಂತೆ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

