ಸಿಂದಗಿ: ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶ್ರೀ ಸಮರ್ಥ ಸದ್ಗುರು ಭೀಮಾಶಂಕರ ಮಹಾರಾಜರ ೬೯ನೆಯ ಪುಣ್ಯಾರಾಧನೆಯ ಪ್ರಯುಕ್ತ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.
ತಾಲೂಕಿನ ಮಂಗಳೂರು ಗ್ರಾಮದ ಶ್ರೀ ಸಮರ್ಥ ಸದ್ಗುರು ಭೀಮಾಶಂಕರ ಮಹಾರಾಜರ ೬೯ನೇ ಪುಣ್ಯರಾಧನೆ ಪ್ರಯುಕ್ತ ನಿವೃತ್ತ ಶಿಕ್ಷಕ ವಿರೂಪಾಕ್ಷಪ್ಪ ಸಿಂಪಿ ರಚಿಸಿದ ಭವ ದಾಟುವ ದಾರಿ ಎಂಬ ಆಧ್ಯಾತ್ಮಿಕ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಡಿ.೩೧ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರದ ದಿವ್ಯ ಸಾನಿಧ್ಯ ಯಂಕಂಚಿಯ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ವಹಿಸುವರು. ಬಮ್ಮನಹಳ್ಳಿಯ ಶ್ರೀ ಸಮರ್ಥ ಸದ್ಗುರು ನರಸಿಂಹ ಮಹಾರಾಜರು ಅಧ್ಯಕ್ಷತೆ ವಹಿಸುವರು. ಮಂಗಳೂರಿನ ವೇ. ಮೂ. ಮಲ್ಲಯ್ಯ ಸಿದ್ದರಾಮಯ್ಯ ಹಿರೇಮಠ ಅವರು ಸಮ್ಮುಖ ವಹಿಸುವರು. ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳು ನೇತೃತ್ವ ವಹಿಸುವರು. ನ್ಯಾಯವಾದಿ ಎನ್.ಎಸ್. ಹಿರೇಮಠ ಗ್ರಂಥ ಬಿಡುಗಡೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಮಸಿಯ ಸದ್ಗುರು ರಘುನಾಥ್ ಭಟ್ ಜೋಶಿ, ವಿಠ್ಠಲ ಕೊಳ್ಳೂರ, ತದ್ದೇವಾಡಿಯ ಪುರಾಣ ಕೇಸರಿ ಮಹಾಂತೇಶ ಶಾಸ್ತ್ರಿಗಳು ಉಪಸ್ಥಿತರಿರುವರು.
ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
