Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ತಾಲೂಕಿನ ಸಾಸಾಬಾಳ ಗ್ರಾಮದ ಎಚ್.ಪಿ.ಎಸ್. ಶಾಲೆಯಲ್ಲಿ ಸುಮಾರು ೨೦೦ ಮಕ್ಕಳು ಅಧ್ಯಯನ ಮಾಡುತ್ತಿದ್ದು, ಅದರಲ್ಲಿ ಬಹುತೇಕ ಮಕ್ಕಳು ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳಿಗೆ ಹೋಗುತ್ತಿದ್ದು, ಸರಕಾರದ ಸೌಲಭ್ಯಗಳು ದುರುಪಯೋಗವಾಗುತ್ತಿವೆ, ಇದರ ಬಗ್ಗೆ ತಾವು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಕರವೇ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ಈ ವಿಚಾರವಾಗಿ ಹಲವಾರು ಬಾರಿ ತಮ್ಮ ಗಮನಕ್ಕೆ ತಂದರು ತಾವುಗಳು ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿಂದೆ ಹಾಜರಾತಿ ವಿಷಯದಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗಿ ಶಾಲೆಯ ಮುಖ್ಯಗುರು ಶಿಕ್ಷಕ ಬಸವರಾಜ ನಾಯ್ಕಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದರಿ ಕೋಚಿಂಗ್ ಕ್ಲಾಸ್‌ಗಳ ಮೇಲೆ ಕ್ರಮ ವಹಿಸಿಕೊಳ್ಳದಿದ್ದರೆ ಶಾಲೆಯನ್ನು ಬಂದ್ ಮಾಡಿ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕರವೇ ಪದಾಧಿಕಾರಿಗಳು ಹಾಗೂ ಸಾಸಾಬಾಳ ಗ್ರಾಮದ ಪಾಲಕ ಪೋಷಕರು ಆಗ್ರಹಿಸಿದರು.ಈ ವೇಳೆ ಶ್ರೀಕಾಂತ ಬಿಜಾಪೂರ, ಪೀರು ಕೆರೂರ ಸೇರಿದಂತೆ ಕರವೇ ಪದಾಧಿಕಾರಿಗಳು ಗ್ರಾಮದ ಪಾಲಕರು ಇದ್ದರು.
ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದಲ್ಲಿ ನ್ಯಾಯವಾದಿಗಳ ಸಂಘದ ವತಿಯಿಂದ ಹೊಸ ವರ್ಷದ ದಿನಾಚರಣೆಯನ್ನು ಆಚರಿಸಲಾಯಿತು.ಈ ವೇಳೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಮಾತನಾಡಿ, ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಕೂಡ ನ್ಯಾಯವಾದಿಗಳು ಸಹಕಾರ ನೀಡುವಂತೆ ಮನವಿ ಮಾಡುತ್ತಾ ಕೋವಿಡ್ ಮಹಾಮಾರಿ ಮತ್ತೆ ಹರಡುತ್ತಿದ್ದು ಮುಂಜಾಗೃತೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ಸಂಘದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ, ಸರ್ಕಾರಿ ವಕೀಲ ಬಸವರಾಜ ಆಹೇರಿ, ನ್ಯಾಯವಾದಿಗಳಾದ ಸಂಗಮೆಶ ಹೂಗಾರ, ಎಂ.ಎಚ್.ಕ್ವಾರಿ, ಎಂ.ಎಸ್.ಅಮಲ್ಯಾಳ, ಎನ್.ಆರ್.ಮೊಕಾಶಿ, ಸಿದ್ದನಗೌಡ ಬಿರಾದಾರ ಮಾತನಾಡಿ ಶುಭಾಶಯಗಳನ್ನ ತಿಳಿಸಿದರು. ಎಜಿಪಿ ಎಚ್.ಎಲ್.ಸರೂರ, ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ ವೇದಿಕೆಯಲ್ಲಿದ್ದರು.ಹಿರಿಯ ನ್ಯಾಯವಾದಿಗಳಾದ ಸಿ.ಆರ್.ಜೋಶಿ, ಎಂ.ಎ.ಮುದ್ದೇಬಿಹಾಳ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಎನ್.ಜಿ.ಕುಲಕರ್ಣಿ ನ್ಯಾಯವಾದಿಗಳಾದ ಬಿ.ಎ.ಚಿನಿವಾರ, ಎಸ್.ಎಂ.ಕಿಣಗಿ, ಪಿ.ಎ.ಹಿರೇಮಠ, ಎಲ್.ಎಸ್.ಮೇಟಿ, ಎಸ್.ಬಿ.ಬಾಚಿಹಾಳ, ಎನ್.ಬಿ.ಮುದ್ನಾಳ, ಚೇತನ ಶಿವಶಿಂಪಿ,…
ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿದ್ದು, ಸುತ್ತ ಮುತ್ತಲಿನ ಕಲಬುರುಗಿ, ಯಾದಗೀರಿ, ರಾಯಚೂರ, ವಿಜಯಪೂರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ. ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದ್ದು ಜಿಲ್ಲಾ ಕೇಂದ್ರವಾಗಲು ಯೋಗ್ಯವಾಗಿದೆ ಎಂದು ಆದಿಜಾಂಬವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಹೇಳಿದರು.ರಾಷ್ಟ್ರೀಯ ಹೆದ್ದಾರಿ-೫೦ ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ. ಬರುವ ದಿನಗಳಲ್ಲಿ ನೂತನ ರೇಲ್ವೇ ಮಾರ್ಗ ಸೃಷ್ಟಿಯಾಗುವ ಲಕ್ಷಣಗಳಿದ್ದು, ಪೂರ್ವ ದಿಕ್ಕಿನಲ್ಲಿ ಕಲಬುರಗಿ ಹಾಗೂ ಪಶ್ಚಿಮದಲ್ಲಿ ವಿಜಯಪೂರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಗಳಿದ್ದು, ರಾಜ್ಯದ ರಾಜಧಾನಿ ಸಂಪರ್ಕಿಸಲು ಸಮಯದ ಉಳಿತಾಯವಾಗುವುದು. ಮತ್ತು ಉತ್ತಮ ಕೈಗಾರೀಕರಣ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಹೆಬ್ಬಾಗಿಲು ಆಗಿ ಬೌಗೋಳಿಕವಾಗಿ ಎರಡು ವಲಯಗಳನ್ನು ಸಂಪರ್ಕಿಸಿ ಸಾಂಸ್ಕೃತಿಕ ಪ್ರತಿಬಿಂಬವಾಗಿದೆ. ಸುತ್ತ-ಮುತ್ತಲಿನ ಎಲ್ಲಾ ತಾಲೂಕಗಳಿಗೆ…
ಸಿಂದಗಿ: ಪಟ್ಟಣದಲ್ಲಿನ ಕುಡಿಯುವ ನೀರಿನ ಬವಣೆ ನೀಗಿಸಲು ಅಮೃತ-೨ ಯೋಜನೆಯ ಮೂಲಕ ಪ್ರತಿ ಮನೆ ಮನೆಗಳಿಗೆ ನೀರಿನ ಸರಬರಾಜು ಮಾಡಲು ಸುಮಾರು ೯೬ ಕೋಟಿ ಅನುದಾನದಲ್ಲಿ ಕಾಮಗಾರಿ ಕೂಡಲೆ ಪ್ರಾರಂಭ ಮಾಡಲಾಗುವುದು. ಪ್ರಸ್ತುತ ಕಾಮಗಾರಿಗೆ ಮೊದಲ ಹಂತದಲ್ಲಿರೂ ೪೦ ಕೊಟಿ ಬಿಡುಗಡೆಗೊಂಡಿದ್ದು ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪುರಸಭೆ ಕಾರ್ಯಾಲಯ ಸಿಂದಗಿ ಆಯೋಜಿಸಿರುವ ೨೦೨೩-೨೪ ನೇ ಸಾಲಿನ ಪುರಸಭೆಯ ನಿಧಿಯಲ್ಲಿ ಮನಗೂಳಿ ಅವರ ಮನೆಯಿಂದ ಶ್ರೀ ಸೋಮಲಿಂಗೇಶ್ವರ ಚೌಕದವರೆಗೆ ೩೦ ಲಕ್ಷರೂ ಗಳಲ್ಲಿನ ಸಿಸಿ ರಸ್ತೆ, ವಿಜಯಪುರದ ಮುಖ್ಯರಸ್ತೆಯಿಂದ ಶ್ರೀ ಸೋಮಲಿಂಗೇಶ್ವರ ಚೌಕದವರೆಗೆ ೧೫ ಲಕ್ಷರೂಗಳಲ್ಲಿ ಬೀದಿ ದ್ವೀಪ ಅಳವಡಿಕೆ, ಆಲಮೇಲ ಸರ್ ಮನೆಯಿಂದ ಆಶೀರ್ವಾದ ಕಲ್ಯಾಣ ಮಂಟಪದಿಂದ ಬಿರಾದಾರ ಸರ್ ಮನೆಯವರೆಗೆ ೧೫ ಲಕ್ಷ ರೂಗಳಲ್ಲಿ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಪಟ್ಟಣದ ಜನತೆಗೆ ಪ್ರಸ್ತುತ ಸುಮಾರು ೬-೭ ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜ ಆಗುತ್ತಿದೆ. ಇದನ್ನು ತಪ್ಪಿಸಲು…
ಸಿಂದಗಿ: ಪೂಜ್ಯ ಸಿದ್ದೇಶ್ವರ ಶ್ರೀಗಳು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು. ಅವರ ಗುಣಗಳನ್ನು ವಿವರಿಸುವಲ್ಲಿ ಪದಗಳು ಕಡಿಮೆಯಾಗಬಹುದು ಅವರದೊಂದು ಸ್ವಚ್ಚ, ಅರ್ಥಪೂರ್ಣ ಬದುಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ ಹೇಳಿದರು.ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅವ್ವಾ ಫೌಂಡೇಶನ್ ವತಿಯಿಂದ ಮಂಗಳವಾರ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಶ್ರೀಗಳ ನುಡಿ ನಮನ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.ಸಮಾಜ ತಿದ್ದುವ ಸ್ವಾಮಿಗಳು ಹೇಗಿರಬೇಕು ಎನ್ನುವದಕ್ಕೆ ಉತ್ತಮ ಉದಾರಣೆ ಶ್ರೀಗಳು. ತಮ್ಮ ಪ್ರವಚನಗಳ ಮೂಲಕವೇ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ ಲಕ್ಷಾಂತರ ಜನರಿಗೆ ಆದರ್ಶರಾದವರು. ಅವರು ಹುಟ್ಟಿ ಬೆಳೆದ ವಿಜಯಪುರ ಜಿಲ್ಲೆಯಲ್ಲಿ ನಾವೆಲ್ಲ ಇದ್ದೇವೆ ಎನ್ನುವುದೆ ನಮ್ಮೆಲ್ಲರ ಸೌಭಾಗ್ಯ ಎಂದರು. ಈ ವೇಳೆ ಶ್ರೀ ಪದ್ಮರಾಜ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಶರಣಬಸವ ಜೋಗೂರ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಜೆ.ಸಿ.ನಂದಿಕೋಲ ಅವರು ಉಪಸ್ಥಿತರಿದ್ದರು.ಉಪನ್ಯಾಸಕರಾದ ಸುಧಾಕರ ಚವ್ಹಾಣ, ಪಿ.ಸಿ.ಕುಲಕರ್ಣಿ, ಆರ್.ಎ.ಹಾಲಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಈ ವೇಳೆ ಅವ್ವಾ ಫೌಂಡೇಶನ್ ಸಂಚಾಲಕ ಸಿದ್ದಲಿಂಗ…
ಸಿಂದಗಿ: ಪದವಿ ಶಿಕ್ಷಣ ಬದುಕನ್ನು ನಿರ್ಮಾಣ ಮಾಡುತ್ತದೆ ಆದರೆ ಅಕ್ಷರದ ಜ್ಞಾನವಿಲ್ಲದಿದ್ದರೆ ಬದುಕೆ ನಿರ್ನಾಮವಾಗುತ್ತದೆ ಎಂದು ವಿಜಯಪುರ ಅಕ್ಕ ಮಹಾದೇವಿ ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿಷ್ಣು ಎಂ. ಶಿಂಧೆ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಪ್ರಸಕ್ತ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಕೇವಲ ಓದು-ಬರಹವಲ್ಲ. ಶಿಕ್ಷಣವೆಂದರೆ ಬದುಕು ನಿರ್ಮಿಸಬಲ್ಲ ಅಸ್ತ್ರವಾಗಿದೆ. ಇಂದು ಯುವಕರು ಮಾದಕ ವಸ್ತುಗಳ ದಾಸರಾಗುತ್ತ ದಾರಿ ತಪ್ಪುತ್ತಿದ್ದಾರೆ. ಪಾಲಕರು ಕೇವಲ ಶಿಕ್ಷಣ ಸಂಸ್ಥೆಯೆಡೆಗೆ ಬೆರಳು ಮಾಡಿ ತೊರಿಸದೇ ಗ್ರಾಮೀಣ ಬಾಗದಲ್ಲಿ ಇಂತಹ ದಾರಿ ತಪ್ಪುತ್ತಿರುವ ಯುವಕರನ್ನು ಒಂದೆಡೆಗೆ ಸೇರಿಸಿ ಜೀವನದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವದಲ್ಲದೇ ಮಾರ್ಗದರ್ಶನ ನೀಡಬೇಕು. ಇದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಅಂದ ಅವರು, ಇಂದು ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು ಎನ್ನುವ ಭಾವನೆಯಲ್ಲಿರುವ ನಾವುಗಳು ತಾರತಮ್ಯ ತೊರದೇ ಸರಿಸಮಾನವಾದ ಶಿಕ್ಷಣ ನೀಡುವ ಮೂಲಕ ಸಂಸ್ಕಾರ ಬೆಳೆಸಬೇಕು…
ಕೊಲ್ಹಾರ: ಮುಳಗಡೆಯ ಪ್ರದೇಶ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣದ ಹಲವಾರು ಜ್ವಲಂತ ಸಮಸ್ಯೆಗಳ ಕುರಿತು ಸಚಿವ ಶಿವಾನಂದ ಎಸ್. ಪಾಟೀಲ ಅವರಿಗೆ ವಿಜಯಪುರದ ಪ್ರವಾಸಿ ಮಂದಿರದಲ್ಲಿ ಕೊಲ್ಹಾರ ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ ಮಂಗಳವಾರ ಮನವಿ ಸಲ್ಲಿಸಿದರು.ಪುನರ್ವಸತಿ ಕೇಂದ್ರದಲ್ಲಿ ಸರಕಾರಿ ಜಾಗವನ್ನು ಅನಧೀಕೃತವಾಗಿ ಬಳಸುತ್ತಿರುವ ವ್ಯಕ್ತಿಗಳಿಂದ, ಸಂಸ್ಥೆಗಳಿಂದ ಮರಳಿ ಸರಕಾರಕ್ಕೆ ವಶಪಡಿಸಿಕೊಂಡು ತಾಲೂಕಾ ಆಡಳಿತದ ಸರಕಾರಿ ಕಚೇರಿಗಳ ಕಟ್ಟಡ ನಿರ್ಮಿಸಲು ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ ತೆರವುಗೊಳಿಸಲು ಆದೇಶ ಹೊರಡಿಸಬೇಕು. ಕೊಲ್ಹಾರ ಪಟ್ಟಣಕ್ಕೆ ಮುಳಗಡೆಯ ಪರಿಹಾರ ಹಣದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಬೇಕು. ತಾಲೂಕು ಕೇಂದ್ರಕ್ಕೆ ಇನ್ನು ಬರಬೇಕಾದ ಸರಕಾರಿ ಕಚೇರಿಗಳನ್ನು ತ್ವರಿತವಾಗಿ ಮಂಜೂರು ಮಾಡಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯಲಯ ಹಾಗೂ ರೈತರು ಬೆಳೆಯುವ ಈ ಭಾಗದ ಪ್ರಮುಖ ಬೆಳೆಯಾದ ಉಳ್ಳಾಗಡ್ಡಿಗೆ ಸರಕಾರಿ ಶಿಥಲೀಕರಣ ಘಟಕ ನಿರ್ಮಾಣ ಮಾಡಿ ಈರುಳ್ಳಿ ಬೆಳೆಗೆ ಯೋಗ್ಯ ದರ ಸಿಗಬೇಕು. ಮುಳವಾಡ ಕೈಗಾರಿಕಾ ವಸಹಾತು ಪ್ರದೇಶದಲ್ಲಿ ನಿರುದ್ಯೋಗ ಯುವಕರಿಗೆ ಉದ್ಯೋಗ ಸಿಗುವಂತಾಗಲು ಜವಳಿ…
ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ಜ.2 ರಂದು ಶತಮಾನದ ಸಂತ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗುರುನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ನಮನ ಸಲ್ಲಿಸಿ ಮಾತನಾಡಿದ ಬನ್ಸಿಲಾಲ ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಚ್ ಮಣ್ಣೂರ, ಪ್ರತಿ ಘಳಿಗೆ, ಪ್ರತಿದಿನವೂ ಪ್ರಕೃತಿಯ ನವ ಚೈತನ್ಯದಂತೆ ಬದುಕಿ ಭಕ್ತರ ಹೃದಯದಲ್ಲಿ ಶಾಶ್ವತ ನೆಲೆಯೂರಿ ಜ್ಞಾನದಾಸೋಹ ಹಂಚಿ ಸಮಾಜದಲ್ಲಿ ಎಲ್ಲರೂ ಪ್ರತಿ ಪ್ರೇಮ, ಸಹೋದರತೆ ಹಾಗೂ ಸೌಹಾರ್ದತೆಯಿಂದ ಹೇಗೆ ಬಾಳಬೇಕು ಎಂಬುದನ್ನು ಕಲಿಸಿಕೊಟ್ಟು ತಾವೂ ಅದರಂತೆ ಬದುಕಿ ಮಾದರಿಯಾದ ದಾರ್ಶನಿಕ, ಸಂತ ಶರಣರ, ವಿವೇಕಾನಂದರ ಆದರ್ಶಗಳನ್ನು ಯುವಜನಾಂಗಕ್ಕೆ ಅಮೂಲ್ಯವಾದ ಸಂದೇಶವನ್ನು ಸಾರಿದ ನಿಜ ಸಂತ ಅವರಾಗಿದ್ದರು ಎಂದು ತಿಳಿಸಿದರು.ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ ಉಪಸ್ಥಿತರಿದ್ದರುವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಿಳಿ ಸಮವಸ್ತ್ರ ಧರಿಸಿ ಸಾಲಾಗಿ ಶಿಸ್ತಿನಿಂದ ಪುಷ್ಪ ಸಮರ್ಪಣೆ ಸಲ್ಲಿಸಿದರು.
ವಿಜಯಪುರ: ವಿಜಯಪುರ ಮೀಸಲು ಕ್ಷೇತ್ರದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಬಂಜಾರಾ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ವಿಜಯಪುರ ಮೀಸಲು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಸೋಮವಾರ ನಗರದ ಬಿ.ಎಲ್.ಡಿ.ಇ ಅತಿಥಿಗೃಹದಲ್ಲಿ ಮುಖ್ಯಮಂತ್ರಿಗಳಿಗೆ ಬಂಜಾರಾ ಸಮುದಾಯದ ಶಾಲನ್ನು ಹೋದಿಸಿ, ಸನ್ಮಾನಿಸಿ, ಮನವಿ ಸಲ್ಲಿಸಿದ ಅವರು, ನಾನು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕವಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಅಲ್ಲದೇ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಳಮೀಸಲಾತಿಯ ವಿರುದ್ಧ ಮೊದಲ ಬಾರಿ ನಾನು ಧ್ವನಿ ಎತ್ತಿ, ಇಡೀ ರಾಜ್ಯಾದ್ಯಾಂತ ಬಂಜಾರಾ ಸಮಾಜಕ್ಕೆ ಜಾಗೃತಿ ಮೂಡಿಸಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮ ವಹಿಸಿದ್ದೇನೆ. ಈ ಕಾರ್ಯಕ್ಕಾಗಿ ರಾಜ್ಯಾಧ್ಯಕ್ಷರು, ಶಾಸಕರು, ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಶಾಸಕರಾದ ಅಪ್ಪಾಜಿ ನಾಡಗೌಡ, ಯಶವಂತರಾಯಗೌಡ…
Udayarashmi kannada daily newspaper
