ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದಲ್ಲಿ ನ್ಯಾಯವಾದಿಗಳ ಸಂಘದ ವತಿಯಿಂದ ಹೊಸ ವರ್ಷದ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಮಾತನಾಡಿ, ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಕೂಡ ನ್ಯಾಯವಾದಿಗಳು ಸಹಕಾರ ನೀಡುವಂತೆ ಮನವಿ ಮಾಡುತ್ತಾ ಕೋವಿಡ್ ಮಹಾಮಾರಿ ಮತ್ತೆ ಹರಡುತ್ತಿದ್ದು ಮುಂಜಾಗೃತೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ಸಂಘದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ, ಸರ್ಕಾರಿ ವಕೀಲ ಬಸವರಾಜ ಆಹೇರಿ, ನ್ಯಾಯವಾದಿಗಳಾದ ಸಂಗಮೆಶ ಹೂಗಾರ, ಎಂ.ಎಚ್.ಕ್ವಾರಿ, ಎಂ.ಎಸ್.ಅಮಲ್ಯಾಳ, ಎನ್.ಆರ್.ಮೊಕಾಶಿ, ಸಿದ್ದನಗೌಡ ಬಿರಾದಾರ ಮಾತನಾಡಿ ಶುಭಾಶಯಗಳನ್ನ ತಿಳಿಸಿದರು. ಎಜಿಪಿ ಎಚ್.ಎಲ್.ಸರೂರ, ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ ವೇದಿಕೆಯಲ್ಲಿದ್ದರು.
ಹಿರಿಯ ನ್ಯಾಯವಾದಿಗಳಾದ ಸಿ.ಆರ್.ಜೋಶಿ, ಎಂ.ಎ.ಮುದ್ದೇಬಿಹಾಳ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಎನ್.ಜಿ.ಕುಲಕರ್ಣಿ ನ್ಯಾಯವಾದಿಗಳಾದ ಬಿ.ಎ.ಚಿನಿವಾರ, ಎಸ್.ಎಂ.ಕಿಣಗಿ, ಪಿ.ಎ.ಹಿರೇಮಠ, ಎಲ್.ಎಸ್.ಮೇಟಿ, ಎಸ್.ಬಿ.ಬಾಚಿಹಾಳ, ಎನ್.ಬಿ.ಮುದ್ನಾಳ, ಚೇತನ ಶಿವಶಿಂಪಿ, ಎಸ್.ಎಚ್.ಚಳ್ಳಗಿ, ಬಿ.ಎ.ನಾಡಗೌಡರ, ಎಚ್.ಟಿ.ಪೂಜಾರಿ, ಆರ್.ಎಸ್.ತುಪ್ಪದ, ರೇಣುಕಾ ಪಾಟೀಲ, ಶೋಭಾ ಕಾಶಿನಕುಂಟಿ ಸೇರಿದಂತೆ ಮತ್ತೀತರರು ಇದ್ದರು.
ಪಿ.ಬಿ.ಗೌಡರ ಕಾರ್ಯಕ್ರಮವನ್ನು ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

