ಸಿಂದಗಿ: ತಾಲೂಕಿನ ಸಾಸಾಬಾಳ ಗ್ರಾಮದ ಎಚ್.ಪಿ.ಎಸ್. ಶಾಲೆಯಲ್ಲಿ ಸುಮಾರು ೨೦೦ ಮಕ್ಕಳು ಅಧ್ಯಯನ ಮಾಡುತ್ತಿದ್ದು, ಅದರಲ್ಲಿ ಬಹುತೇಕ ಮಕ್ಕಳು ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳಿಗೆ ಹೋಗುತ್ತಿದ್ದು, ಸರಕಾರದ ಸೌಲಭ್ಯಗಳು ದುರುಪಯೋಗವಾಗುತ್ತಿವೆ, ಇದರ ಬಗ್ಗೆ ತಾವು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಕರವೇ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ವಿಚಾರವಾಗಿ ಹಲವಾರು ಬಾರಿ ತಮ್ಮ ಗಮನಕ್ಕೆ ತಂದರು ತಾವುಗಳು ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿಂದೆ ಹಾಜರಾತಿ ವಿಷಯದಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗಿ ಶಾಲೆಯ ಮುಖ್ಯಗುರು ಶಿಕ್ಷಕ ಬಸವರಾಜ ನಾಯ್ಕಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದರಿ ಕೋಚಿಂಗ್ ಕ್ಲಾಸ್‌ಗಳ ಮೇಲೆ ಕ್ರಮ ವಹಿಸಿಕೊಳ್ಳದಿದ್ದರೆ ಶಾಲೆಯನ್ನು ಬಂದ್ ಮಾಡಿ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕರವೇ ಪದಾಧಿಕಾರಿಗಳು ಹಾಗೂ ಸಾಸಾಬಾಳ ಗ್ರಾಮದ ಪಾಲಕ ಪೋಷಕರು ಆಗ್ರಹಿಸಿದರು.
ಈ ವೇಳೆ ಶ್ರೀಕಾಂತ ಬಿಜಾಪೂರ, ಪೀರು ಕೆರೂರ ಸೇರಿದಂತೆ ಕರವೇ ಪದಾಧಿಕಾರಿಗಳು ಗ್ರಾಮದ ಪಾಲಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

