ಕೊಲ್ಹಾರ: ಮುಳಗಡೆಯ ಪ್ರದೇಶ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣದ ಹಲವಾರು ಜ್ವಲಂತ ಸಮಸ್ಯೆಗಳ ಕುರಿತು ಸಚಿವ ಶಿವಾನಂದ ಎಸ್. ಪಾಟೀಲ ಅವರಿಗೆ ವಿಜಯಪುರದ ಪ್ರವಾಸಿ ಮಂದಿರದಲ್ಲಿ ಕೊಲ್ಹಾರ ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ ಮಂಗಳವಾರ ಮನವಿ ಸಲ್ಲಿಸಿದರು.
ಪುನರ್ವಸತಿ ಕೇಂದ್ರದಲ್ಲಿ ಸರಕಾರಿ ಜಾಗವನ್ನು ಅನಧೀಕೃತವಾಗಿ ಬಳಸುತ್ತಿರುವ ವ್ಯಕ್ತಿಗಳಿಂದ, ಸಂಸ್ಥೆಗಳಿಂದ ಮರಳಿ ಸರಕಾರಕ್ಕೆ ವಶಪಡಿಸಿಕೊಂಡು ತಾಲೂಕಾ ಆಡಳಿತದ ಸರಕಾರಿ ಕಚೇರಿಗಳ ಕಟ್ಟಡ ನಿರ್ಮಿಸಲು ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ ತೆರವುಗೊಳಿಸಲು ಆದೇಶ ಹೊರಡಿಸಬೇಕು. ಕೊಲ್ಹಾರ ಪಟ್ಟಣಕ್ಕೆ ಮುಳಗಡೆಯ ಪರಿಹಾರ ಹಣದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಬೇಕು. ತಾಲೂಕು ಕೇಂದ್ರಕ್ಕೆ ಇನ್ನು ಬರಬೇಕಾದ ಸರಕಾರಿ ಕಚೇರಿಗಳನ್ನು ತ್ವರಿತವಾಗಿ ಮಂಜೂರು ಮಾಡಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯಲಯ ಹಾಗೂ ರೈತರು ಬೆಳೆಯುವ ಈ ಭಾಗದ ಪ್ರಮುಖ ಬೆಳೆಯಾದ ಉಳ್ಳಾಗಡ್ಡಿಗೆ ಸರಕಾರಿ ಶಿಥಲೀಕರಣ ಘಟಕ ನಿರ್ಮಾಣ ಮಾಡಿ ಈರುಳ್ಳಿ ಬೆಳೆಗೆ ಯೋಗ್ಯ ದರ ಸಿಗಬೇಕು. ಮುಳವಾಡ ಕೈಗಾರಿಕಾ ವಸಹಾತು ಪ್ರದೇಶದಲ್ಲಿ ನಿರುದ್ಯೋಗ ಯುವಕರಿಗೆ ಉದ್ಯೋಗ ಸಿಗುವಂತಾಗಲು ಜವಳಿ ಪಾರ್ಕ ಜೊತೆಯಲ್ಲಿ ಇನ್ನೀತರ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಸಚಿವರು ಗಮನಹರಿಸಬೇಕು ಎಂದರು.
ಪಟ್ಟಣದಲ್ಲಿ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಪೂರ್ವ ಹಾಗೂ ಉನ್ನತ ಶಿಕ್ಷಣದ ಪದವಿ ವಿದ್ಯಾಲಯಗಳನ್ನು ಪ್ರಾರಂಭಿಸಬೇಕು ಅದರಂತೆ ಮೆಟ್ರಿಕ ನಂತರದ ಬಾಲಕ ಮತ್ತು ಬಾಲಕಿಯರ ಸರಕಾರಿ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು. ಕೊಲ್ಹಾರದಿಂದ ಮಮದಾಪೂರ ಸೇಗುಣಸಿ ಸಂಗಾಪೂರ ಚಿಕ್ಕಲಕಿ ತೊದಲಬಾಗಿ ಸಾವಳಗಿ ಕೊಕಟನೂರ ಅಥಣಿವರೆಗಿನ ಈಗಿರುವ ರಸ್ತೆಯನ್ನು ಹಾಗೂ ಕೊಲ್ಹಾರ ರೋಣಿಹಾಳ ಮಲಘಾನ ಕಲಬುರ್ಕಿ ಮನಗೂಳಿ ಉಕ್ಕಲಿ ಯಾಳವಾರ ದೇವರ ಹಿಪ್ಪರಗಿ ವರೆಗಿನ ಈಗಿರುವ ರಸ್ತೆಯನ್ನು ದ್ವೀಪಥದ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಬೇಕು ಎನ್ನುವ ಹಲವಾರು ಸಮಸ್ಯಗಳನ್ನು ಹೊತ್ತ ಮನವಿ ಪತ್ರವನ್ನು ಸಚಿವರಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಎಸ್.ಎಂ.ಪಾಟೀಲಗಣಿಯಾರ, ಪರಶುರಾಮ ಬ ಗಣಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

