ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ಜ.2 ರಂದು ಶತಮಾನದ ಸಂತ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗುರುನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಮನ ಸಲ್ಲಿಸಿ ಮಾತನಾಡಿದ ಬನ್ಸಿಲಾಲ ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಚ್ ಮಣ್ಣೂರ, ಪ್ರತಿ ಘಳಿಗೆ, ಪ್ರತಿದಿನವೂ ಪ್ರಕೃತಿಯ ನವ ಚೈತನ್ಯದಂತೆ ಬದುಕಿ ಭಕ್ತರ ಹೃದಯದಲ್ಲಿ ಶಾಶ್ವತ ನೆಲೆಯೂರಿ ಜ್ಞಾನದಾಸೋಹ ಹಂಚಿ ಸಮಾಜದಲ್ಲಿ ಎಲ್ಲರೂ ಪ್ರತಿ ಪ್ರೇಮ, ಸಹೋದರತೆ ಹಾಗೂ ಸೌಹಾರ್ದತೆಯಿಂದ ಹೇಗೆ ಬಾಳಬೇಕು ಎಂಬುದನ್ನು ಕಲಿಸಿಕೊಟ್ಟು ತಾವೂ ಅದರಂತೆ ಬದುಕಿ ಮಾದರಿಯಾದ ದಾರ್ಶನಿಕ, ಸಂತ ಶರಣರ, ವಿವೇಕಾನಂದರ ಆದರ್ಶಗಳನ್ನು ಯುವಜನಾಂಗಕ್ಕೆ ಅಮೂಲ್ಯವಾದ ಸಂದೇಶವನ್ನು ಸಾರಿದ ನಿಜ ಸಂತ ಅವರಾಗಿದ್ದರು ಎಂದು ತಿಳಿಸಿದರು.
ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ ಉಪಸ್ಥಿತರಿದ್ದರು
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಿಳಿ ಸಮವಸ್ತ್ರ ಧರಿಸಿ ಸಾಲಾಗಿ ಶಿಸ್ತಿನಿಂದ ಪುಷ್ಪ ಸಮರ್ಪಣೆ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

