Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತ್ರಿಕಾಲಜ್ಞಾನಿ, ಭವರೋಗ ವೈದ್ಯ, ಮಡಿವಾಳಪ್ಪನವರ ೨೦೧ನೇ ಅನುಭಾವ ಜಾತ್ರೆ ತನ್ನಿಮಿತ್ತ ವಿಶೇಷ ಲೇಖನ – ಡಾ.ಸಂತೋಷ ನವಲಗುಂದ, ಮಳ್ಳಿ “ಎಂಥಾ ಕಂಡಾಬಟ್ಟೆ ಸೂಳೆ ಮಕ್ಕಳಿವರೋಸಾಧು ಸಂತರ ಕಂಡರೆ ನಿಂದೆನಾಡ್ತಿಹರೋಅಂಥ ಇಂಥ ಮಾತಿಗೆ ಹಾಯ್ ಹಾಯ್ ಎಂಬುವರೋಇವರ ಅಂತ ತಿಳಿಯದೆ ಸುಳ್ಳೆ ಸತ್ತು ಹೋಗುವರೊ || ದೊಡ್ಡ ಕಾಮಧೇನು ಸ್ನೇಹ ಮಾಡವಲ್ಲರೋ ಖಾಲಿಗೊಡ್ಡಾಕಳ ಹಿಂಡಿ ಕೈ ಮುರಿದು ಕೊಂಬುವರೊಗುಡ್ಡದ ಮಹಾಂತನ ಗುರ್ತು ಅರಿಯಲ್ಲರೋ | ಇಂಥದಡ್ಡ ಸೂಳೆ ಮಕ್ಕಳನ್ನು ಯಾರು ಕೇಳುವರೋ”ಸಾಧು-ಸತ್ಪುರುಷರಿಗೆ ಸಮಾಜದಲ್ಲಿನ ಕುಹಕಿಗಳು ನಿಂದೆಯನಾಡುವ ಪರಿಗೆ ಕಡಕೋಳದ ಮಡಿವಾಳಪ್ಪನವರು ಕೊಡುವ ತತ್ವದುತ್ತರ ಕನ್ನಡದ ಇನ್ನಾವ ಸಾಹಿತ್ಯದಲ್ಲಿ ಕಾಣುವುದು ವಿರಳ. ಕನ್ನಡ ನಾಡು ಆಯಾ ಕಾಲಘಟ್ಟದಲ್ಲಿ ಭಿನ್ನ ಪ್ರದೇಶ, ಭಿನ್ನ ಸನ್ನಿವೇಶಗಳಲ್ಲಿ ಸಾಹಿತ್ಯದ ಹುಟ್ಟು ಪಡೆದುಕೊಂಡಿದೆ. ಅಂತೆಯೇ, ೧೮ನೇ ಶತಮಾನದಲ್ಲಿ ರಚನೆಯಾದ ತತ್ವಪದ ಸಾಹಿತ್ಯ ಕನ್ನಡ ಸಾಹಿತ್ಯದ ಸಿರಿವಂತಿಕೆ ಹೆಚ್ಚಿಸುವುದಷ್ಟೇ ಅಲ್ಲದೇ; ಗಟ್ಟಿ ನೆಲೆಯೂ ಒದಗಿಸಿದೆ.ಢಾಂಬಿಕತನಕ್ಕೆ ಬಲುಬೇಗ ನೆಚ್ಚುವ ಜನರು ನಿಜದ ಅರಿವು ಹೊಂದದೇ ವ್ಯರ್ಥ ಕಾಲಹರಣ ನಡೆದಿದೆ ಎಂಬುದು ಮಡಿವಾಳಪ್ಪನವರು ಸೂಚ್ಯವಾಗಿ…
Udayarashmi kannada daily newspaper
ಇಂದು ಸಾವಿತ್ರಿಬಾಯಿ ಫುಲೆ ಜನ್ಮದಿನದ ವಿಶೇಷ ಲೇಖನ – ಕಬೂಲ್ ಕೊಕಟನೂರಶಿಕ್ಷಕರು, ದೇವರಹಿಪ್ಪರಗಿ ಮೊ.೯೯೭೨೧೧೫೫೦೨ ನಹೀಜ್ಞಾನೇನ ಸದೃಶಂ ಎನ್ನುವಂತೆ ಜ್ಞಾನಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಬೇರೊಂದಿಲ್ಲ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಾಣಿಯಂತೆ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು, ಪರುಷ ಸಮಾಜದಲ್ಲಿ ಸರಿಸಮಾನವಾಗಿ ಬೆಳೆಯಲು ಶಿಕ್ಷಣದಿಂದಲೇ ಮಾತ್ರ ಸಾಧ್ಯವೆಂದು ಸಾರಿದ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿಯಾಗಿದ್ದಾರೆ. ಇಂಡಿಯಾಸ್ ಫಸ್ಟ್ ಲೆಡಿಸ್ ಟೀಚರ್ ಎಂದು ಬ್ರೀಟಿಷರಿಂದ ಬಿರುದು ಪಡೆದು ಸ್ತ್ರೀಯರ ಶಿಕ್ಷಣಕ್ಕಾಗಿ ಇಡೀ ಜೀವಮಾನ ಸವೆಸಿದವರಲ್ಲಿ ಅಗ್ರಜರಾಗಿದ್ದಾರೆ. ಜನೇವರಿ ೦೩ ಇವರ ಜಯಂತಿಯಂದು ನಾವೆಲ್ಲ ಸ್ಮರಣೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.*ಸಾವಿತ್ರಿಬಾಯಿ ಪುಲೆಯವರ ಬಾಲ್ಯ ಜೀವನ*ಮಹಿಳಾ ಲೋಕದ ಮಾಣಿಕ್ಯವೆಂದೆನಿಸಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಹತ್ತೊಂಬತ್ತನೇ ಶತಮಾನದ ಭಾರತದ ಪ್ರಸಿದ್ಧ ಸಮಾಜ ಸುಧಾರಕಿ, ಕವಿ ಮತ್ತು ಶಿಕ್ಷಣತಜ್ಞರಾಗಿದ್ದರು. ಮಹಿಳಾ ಶಿಕ್ಷಣ, ಲಿಂಗ ಮತ್ತು ಜಾತಿ ಸಮಸ್ಯೆಗಳ ವಿರುದ್ಧ ಹೋರಾಡುವ ಅಪಾರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದರು. ಪುರುಷ ಸಮಾಜದಲ್ಲಿ ಮೆಟ್ಟಿ ನಿಂತು ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದವರಲ್ಲಿ ಮೊದಲಿಗರಾಗಿದ್ದಾರೆ. ಭಾರತೀಯ…
ಕೊಲ್ಹಾರ: ವಿದ್ಯಾರ್ಥಿಗಳ ಹಾಗೂ ಮನುಷ್ಯನ ಜೀವನದಲ್ಲಿ ಅವಕಾಶಗಳು ಪದೇ ಪದೇ ಬರುವದಿಲ್ಲ. ಸಿಕ್ಕ ಅವಕಾಶ, ದೊರೆತ ಸ್ಪೂರ್ತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಸಮಾಜದಲ್ಲಿ ಪ್ರತಿಭಾನ್ವಿತ ಪ್ರತಿಭೆಗಳಾಗಿ ಬದುಕುವದನ್ನು ನಾವು ಎಂದೂ ಕಳೆದುಕೊಳ್ಳಬಾರದು ಎಂದು ನಿವೃತ್ತ ಮುಖ್ಯಗುರು ಬಿ.ಎಸ್. ಹಂಗರಗಿಸಂಸ್ಕಾರ, ಸಂಸ್ಕೃತಿ, ಹೇಳಿದರು.ಪಟ್ಟಣದ ಸಮೀಪದ ಗಡ್ಡಿ ರಾಚೋಟೇಶ್ವರ ದೇವಸ್ಥಾನದಲ್ಲಿ ಕೊಲ್ಹಾರ ತಾಲೂಕಾ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.ಸಮಾಜದಲ್ಲಿ ಬೆಳೆಯುವ ಮಕ್ಕಳಿಗೆ ಒಳ್ಳೆಯ ಪರಿಸರವನ್ನು ಆಧುನಿಕ ತಂತ್ರಜ್ಞಾನದ ಶಿಕ್ಷಣ ಕಲಿಕಾ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿ, ಆಚಾರಗಳನ್ನು ನಾವು ಮಕ್ಕಳಲ್ಲಿ ಬೆಳೆಸಬೇಕು ಎಂದರು.ಪಟ್ಟಣದ ವೈದ್ಯ ಅರುಣ ಗಾಣಿಗೇರ ಮಾತನಾಡಿದರುತಾಲೂಕಿನಿಂದ ಗಾಣಿಗ ಸಮಾಜದ ಒಟ್ಟು ೧೧ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಾನಿಧ್ಯವನ್ನು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ವಹಿಸಿದ್ದರು. ನೌಕರರ ಸಂಘದ ತಾಲೂಕಾ ಅಧ್ಯಕ್ಷ ಪುಂಡಲಿಕ ಬಸರಕೋಡ…
ಇಂಡಿ: ರಿಪಬ್ಲಿಕನ ಪಾರ್ಟಿ ಆಪ್ ಇಂಡಿಯಾ(ಅಂಬೇಡ್ಕರ) ಘಟಕದ ಇಂಡಿ ತಾಲ್ಲೂಕಿನ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಇಂಡಿ ಜಿಲ್ಲೆ ಆಗಬೇಕೆಂದು ಪ್ರತಿಭಟನೆ ನಡೆಸಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳರವರಿಗೆ ಮನವಿ ಸಲ್ಲಿಸಿದರು.ಈ ವೇಳೆ ತಾಲೂಕಾ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ ಮಾತನಾಡಿ, ಇಂಡಿ ತಾಲೂಕು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ತೀರ ಹಿಂದುಳಿದ ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನು ಪ್ರಗತಿ ಕಾಣಬೇಕಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆಗೆ ಸಂಬಂದಿಸಿದಂತೆ ಜಿಲ್ಲೆಗೆ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟು ಇರುತ್ತವೆ, ಅದರಂತೆ ಹಲವಾರು ವರ್ಷಗಳಿಂದ ಅಭಿವೃದಿ ಕಾಣದೆ ತೀರ ಹಿಂದುಳಿದ ಗಡಿ ಭಾಗವಾಗಿದ್ದು ಅಭಿವೃದ್ಧಿಗಾಗಿ ಸದರ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು. ಸಂವಿಧಾನ ವಿಧಿ ೩೭೧ (ಜೆ) ಗೆ ಸೇರ್ಪಡೆ ಹಕ್ಕೋತಾಯ ಮಾಡುತ್ತಾ ಸೂಕ್ತ ನಿರ್ಣಯ ಕೈಗೊಂಡು ಇಂಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.ರಾಮಚಂದ್ರ ಕಾಂಬಳೆ, ವಿಶ್ವನಾಥ ವಾಘ್ಮೋರೆ, ಸುರೇಶ ಕಾಂಬಳೆ, ಪರಶುರಾಮ ಭಾವಿಕಟ್ಟಿ,…
ಇಂಡಿ: ಭಾರತೀಯ ಶಿಲ್ಪಕಲೆಗೆ ಜಕಣಾಚಾರಿ ಅವರ ಕೊಡುಗೆ ಅನನ್ಯ. ಕನ್ನಡ ಶಿಲ್ಪಕಲೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಬೇಲೂರು ಹಳೆಬೀಡಿನಲ್ಲಿ ಕಲ್ಲಿನಿಂದ ಶಿಲ್ಪಕಲೆಯನ್ನು ಕೆತ್ತಿ ಇಡೀ ವಿಶ್ವವೇ ವೀಕ್ಷಿಸುವಂತೆ ಮಾಡಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು.ಕರ್ನಾಟಕವು ಶಿಲ್ಪಕಲೆಯ ತವರೂರು. ಬೇಲೂರು, ಹಳೆಬೀಡು, ಸೋಮನಾಥಪುರ ಮತ್ತಿತರ ಕಡೆಗಳಲ್ಲಿ ಕೆತ್ತಿರುವ ಅಮರಶಿಲ್ಪಿ ಜಕಣಾಚಾರಿ ಅವರ ಶ್ರೇಷ್ಠ ಕೆತ್ತನೆಗಳೇ ಇದಕ್ಕೆ ಸಾಕ್ಷಿ. ಸಾಹಿತ್ಯ, ಸಂಗೀತ, ನಾಟ್ಯ, ವಾಸ್ತುಶಿಲ್ಪವು ಭಾರತೀಯ ಸಂಸ್ಕೃತಿಯ ಪ್ರತೀಕ. ವಾಸ್ತುಶಿಲ್ಪ ಕಲೆಯನ್ನು ಅಜರಾಮರಗೊಳಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರನ್ನು ಸ್ಮರಿಸುವುದು, ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಶಿಕ್ಷಕ ಎಸ್.ಎಸ್. ಅರಬ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕ ಎ.ಎಂ. ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕಿ ಎಸ್.ಪಿ. ಪೂಜಾರಿ ಕಾರ‍್ಯಕ್ರಮ ನಿರ್ವಹಿಸಿದರು. ಕಾರ‍್ಯಕ್ರಮದಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.
ನಾನು ಯಾವತ್ತೂ ಬಸವಾದಿ ಶರಣರ ಅನುಯಾಯಿ | ಸಿದ್ದೇಶ್ವರ ಶ್ರೀ ಆಶಯದಂತೆ ಬದುಕೋಣ | ಸಿಎಂ ಬಣ್ಣನೆ ವಿಜಯಪುರ: ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದೇಶ್ವರ ಸ್ವಾಮೀಜಿಗಳಿಗೆ ಗುರುನಮನ ಸಲ್ಲಿಸಿದರು.ಮಂಗಳವಾರ ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು. ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು ಎಂದು ಹೇಳಿದರು.ಪರಸ್ಪರ ದ್ವೇಷವನ್ನು ಮಾಡಬಾರದು. ಹೇಗೆ ತಾಯಿ ಮಕ್ಕಳನ್ನು ಪ್ರೀತಿಸುತ್ತಾಳೆ, ಹಾಗೆ ನಾವು ಜನರನ್ನು…
ಬ್ರಹ್ಮದೇವನಮಡು: ಸಮೀಪದ ಕಡಕೋಳ ಮಡಿವಾಳೇಶ್ವರ ಅನುಭವ ಜಾತ್ರಾ ಮಹೋತ್ಸವ ಅಂಗವಾಗಿ ಜ.೩ರಂದು ಸಂಜೆ ೭ ಗಂಟೆಗೆ ಮಹಾ ಪ್ರಸಾದ (ಖಾಂಡ) ರಾತ್ರಿ ೮ ಗಂಟೆಗೆ ಧಮ೯ಸಭೆ ನಡೆಯಲಿದೆ. ಚಿಣಮಗೇರಿಯ ಸಿದ್ದರಾಮ ಶಿವಾಚಾಯ೯ರು, ನೀರಗುಡಿಯ ಹವಾಮಲ್ಲಿನಾಥ ಮಹಾರಾಜರು ಸಾನ್ನಿಧ್ಶವಹಿಸುವರು. ಶ್ರೀಮಠದ ಡಾ.ರುದ್ರಮುನಿ ಶಿವಾಚಾಯ೯ರು ಅಧ್ಶಕ್ಷತೆವಹಿಸುವರು. ಶಿರಶ್ಶಾಡದ ಅಭಿನವ ಮುರಘೇಂದ್ರ ಶಿವಾಚಾಯ೯ರು ನೇತೃತ್ವ, ಆಲಮೇಲದ ಚಂದ್ರಶೇಖರ ಶಿವಾಚಾಯ೯ರು, ಗಡಿಗೌಡಗೌಂವದ ಡಾ.ಶಾಂತವೀರ ಶಿವಾಚಾಯ೯ರು, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ, ಕುಕನೂರದ ಚನ್ನಮಲ್ಲದೇವರು ಹಿರೇಮಠ, ಹೋತಪೇಟಿಯ ಶಿವಲಿಂಗ ಶರಣರು, ಅರಳಗುಂಡಗಿಯ ಬಲವಂತ ಶರಣರು, ಇಟಗಿಯ ಚಂದ್ರಶೇಖರ ದೇವರು ವೀರಗೋಟಾದ ಅಡವಿಲಿಂಗ ಮಹಾರಾಜರು ಪಾಲ್ಗೊಳ್ಳುವರು. ಚಬನೂರದ ಜ್ಶೋತಿಷ್ಶರತ್ನ ರಾಮಲಿಂಗಯ್ಶ ಹಿರೇಮಠ ಧಮ೯ಸಭೆ ಉದ್ಘಾಟಿಸುವರು. ಸಂಸದ ಉಮೇಶ ಜಾಧವ ಅಧ್ಶಕ್ಷತೆ, ಡಾ.ಅಜಯಸಿಂಗ್ ಕ್ಶಾಲೆಂಡರ್ ಬಿಡುಗಡೆ ಮಾಡುವರು. ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಪ್ರೊ.ಡಾ.ಮೀನಾಕ್ಷಿ ಬ್ಶಾಳಿ ಸೇರಿದಂತೆ ಮಠಾಧೀಶರು, ವಿವಿಧ ರಾಜಕೀಯ ಮುಖಂಡರು, ಗಣ್ಶರು ಪಾಲ್ಗೊಳ್ಳಲಿದ್ದಾರೆ.ಜ. ೪ ರಂದು ಬೆಳಗ್ಗೆ ೧೦ಕ್ಕೆ…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿಯ ಗ್ರಾಮಸ್ತರು ಹಾಗೂ ಗೆಳೆಯರ ಬಳಗದಿಂದ ಸಿದ್ದೇಶ್ವರ ಶ್ರೀಗಳ ಪುಣ್ಶಾರಾಧನೆ ಅಂಗವಾಗಿ ಪುಷ್ಪಾಚ೯ನೆ ಮಾಡಿ ಪೂಜೆ ಸಲ್ಲಿಸಿದರು.ಈ ವೇಳೆ ಶಾಂತಪ್ಪ ಕೇಶಟ್ಟಿ, ಮಲ್ಲಾರೀ ಜೋಶಿ, ಬಸವರಾಜ ನಾವಿ, ಶಿವು ಹುರಕಡ್ಲಿ, ಪ್ರಶಾಂತ ಪಟ್ಟಣಶೆಟ್ಟಿ, ಬಸವರಾಜ ಕೇಶಟ್ಟಿ, ಮಡಿವಾಳ ನಾಯ್ಕೋಡಿ, ರಾಜು ಕುಲಕರ್ಣಿ, ಗುರುರಾಜ ಹುರಕಡ್ಲಿ, ವೇಂಕಟೇಶ ಜೋಶಿ, ನಾನಾಗೌಡ ಪಾಟೀಲ, ಮಹಾಂತೇಶ ನಾಯ್ಕೋಡಿ ಹಾಗೂ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಗುರು ಕುಲ ವಿದ್ಶಾ ಮಂದಿರ ಮಕ್ಕಳು, ಸಿದ್ದಸಿರಿ ಬ್ಯಾಂಕಿನ ಸಿಬ್ಬಂದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮೋರಟಗಿ: ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದಂತೆ ಸಂಸ್ಕೃತಿಕ ಕಾರ್ಯಕ್ರಮಗಳು ಮುಳುಗುತ್ತಿವೆ. ಸಂಗೀತದಲ್ಲಿ ಶಾಂತಿ ಅಡಗಿದೆ. ಸಾಂಸಾರಿಕ ನಾಟಕಗಳು ರಸ ಮಂಜರಿ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಗ್ರಾಮೀಣ ಬಾಗದಲ್ಲಿ ಮಾತ್ರ ಜೀವಂತವಿವೆ ಸಂಗೀತ ಕೇಳುವುದರಿಂದ ಶಾಂತಿ ಪ್ರಾಪ್ತಿವಾಗುತ್ತದೆ ಎಂದು ಬಗಲೂರು ಗ್ರಾ. ಪಂ. ಅಧ್ಯಕ್ಷ ಲವಕುಶ ಮೋರಟಗಿ ಹೇಳಿದರು.ಸಮೀಪದ ಕುಳೇಕುಮಟಗಿ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಸಂಸ್ಕೃತಿಕ ಕಲಾ ಸಂಘ ಮೋರಟಗಿ ವತಿಯಿಂದ ಮಂಗಳವಾರ ಹಮ್ಮಿಕೊಂಡ ವಚನ ಗಾಯನ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಮ್ಮ ಹಿರಿಯರಲ್ಲಿ ಅಕ್ಷರ ಜ್ಞಾನ ಇರಲಿಲ್ಲ. ಆ ಸಮಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೂಡಾ ಕೊಡುತ್ತಿರಲಿಲ್ಲ. ವ್ಯವಸಾಯಕ್ಕೆ ಹೆಚ್ಚಿನ ಆದ್ಯತೆ ನೀಡುತಿದ್ದರು. ಶಿಕ್ಷಣ ಪಡೆಯದಿದ್ದರೂ ಕೂಡಾ ನಾಟಕ ಬಯಲಾಟ ಮತ್ತು ಸಂಗೀತಗಳಲ್ಲಿ ಭಾಗವಹಿಸಿ ಪಾತ್ರ ನಿರ್ವಹಿಸಿ ಅಕ್ಷರ ಮುಟ್ಟಿ ಮಾತನಾಡುತಿದ್ದರು ಎಂದರು.ಕಾರ್ಯಕ್ರಮದಲ್ಲಿ ರಾಮಸ್ವಾಮಿ ಮಯೂರ, ಲಕ್ಶ್ಮಣ ಕಟ್ಟಿಮನಿ, ಸಿದ್ದು ಅಗಸರ, ಸಿದ್ದಣ್ಣ ನಾರಾಯಣಪುರ, ಮಲ್ಲಿಕಾರ್ಜುನ ಅಗಸರ, ಅಂಬರೀಷ್ ಕಟ್ಟಿಮನಿ, ಮಹಾಂತಪ್ಪ ಮಂದೇವಾಲಿ, ಎಸ್ ಬಿ ಘತ್ತರಗಿ, ಆರ್…
