ಇಂಡಿ: ರಿಪಬ್ಲಿಕನ ಪಾರ್ಟಿ ಆಪ್ ಇಂಡಿಯಾ(ಅಂಬೇಡ್ಕರ) ಘಟಕದ ಇಂಡಿ ತಾಲ್ಲೂಕಿನ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಇಂಡಿ ಜಿಲ್ಲೆ ಆಗಬೇಕೆಂದು ಪ್ರತಿಭಟನೆ ನಡೆಸಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳರವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕಾ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ ಮಾತನಾಡಿ, ಇಂಡಿ ತಾಲೂಕು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ತೀರ ಹಿಂದುಳಿದ ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನು ಪ್ರಗತಿ ಕಾಣಬೇಕಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆಗೆ ಸಂಬಂದಿಸಿದಂತೆ ಜಿಲ್ಲೆಗೆ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟು ಇರುತ್ತವೆ, ಅದರಂತೆ ಹಲವಾರು ವರ್ಷಗಳಿಂದ ಅಭಿವೃದಿ ಕಾಣದೆ ತೀರ ಹಿಂದುಳಿದ ಗಡಿ ಭಾಗವಾಗಿದ್ದು ಅಭಿವೃದ್ಧಿಗಾಗಿ ಸದರ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು. ಸಂವಿಧಾನ ವಿಧಿ ೩೭೧ (ಜೆ) ಗೆ ಸೇರ್ಪಡೆ ಹಕ್ಕೋತಾಯ ಮಾಡುತ್ತಾ ಸೂಕ್ತ ನಿರ್ಣಯ ಕೈಗೊಂಡು ಇಂಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ರಾಮಚಂದ್ರ ಕಾಂಬಳೆ, ವಿಶ್ವನಾಥ ವಾಘ್ಮೋರೆ, ಸುರೇಶ ಕಾಂಬಳೆ, ಪರಶುರಾಮ ಭಾವಿಕಟ್ಟಿ, ವಿಕಾಸ ಗುಡಮಿ, ಎಸ್.ಬಿ. ಹರಿಜನ, ಪರಶುರಾಮ ಉಕ್ಕಲಿ, ಬಿ. ವೇಂಕಟೇಶ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

