ಕೊಲ್ಹಾರ: ವಿದ್ಯಾರ್ಥಿಗಳ ಹಾಗೂ ಮನುಷ್ಯನ ಜೀವನದಲ್ಲಿ ಅವಕಾಶಗಳು ಪದೇ ಪದೇ ಬರುವದಿಲ್ಲ. ಸಿಕ್ಕ ಅವಕಾಶ, ದೊರೆತ ಸ್ಪೂರ್ತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಸಮಾಜದಲ್ಲಿ ಪ್ರತಿಭಾನ್ವಿತ ಪ್ರತಿಭೆಗಳಾಗಿ ಬದುಕುವದನ್ನು ನಾವು ಎಂದೂ ಕಳೆದುಕೊಳ್ಳಬಾರದು ಎಂದು ನಿವೃತ್ತ ಮುಖ್ಯಗುರು ಬಿ.ಎಸ್. ಹಂಗರಗಿ
ಸಂಸ್ಕಾರ, ಸಂಸ್ಕೃತಿ, ಹೇಳಿದರು.
ಪಟ್ಟಣದ ಸಮೀಪದ ಗಡ್ಡಿ ರಾಚೋಟೇಶ್ವರ ದೇವಸ್ಥಾನದಲ್ಲಿ ಕೊಲ್ಹಾರ ತಾಲೂಕಾ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾಜದಲ್ಲಿ ಬೆಳೆಯುವ ಮಕ್ಕಳಿಗೆ ಒಳ್ಳೆಯ ಪರಿಸರವನ್ನು ಆಧುನಿಕ ತಂತ್ರಜ್ಞಾನದ ಶಿಕ್ಷಣ ಕಲಿಕಾ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿ, ಆಚಾರಗಳನ್ನು ನಾವು ಮಕ್ಕಳಲ್ಲಿ ಬೆಳೆಸಬೇಕು ಎಂದರು.
ಪಟ್ಟಣದ ವೈದ್ಯ ಅರುಣ ಗಾಣಿಗೇರ ಮಾತನಾಡಿದರು
ತಾಲೂಕಿನಿಂದ ಗಾಣಿಗ ಸಮಾಜದ ಒಟ್ಟು ೧೧ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾನಿಧ್ಯವನ್ನು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ವಹಿಸಿದ್ದರು. ನೌಕರರ ಸಂಘದ ತಾಲೂಕಾ ಅಧ್ಯಕ್ಷ ಪುಂಡಲಿಕ ಬಸರಕೋಡ ಅಧ್ಯಕ್ಷತೆಯಲ್ಲಿ ಅತಿಥಿಗಳಾಗಿ ಎಸ್.ಎನ್. ಗಿಡ್ಡಪ್ಪಗೋಳ, ಅಪ್ಪನಗೌಡ ಬಿರಾದಾರ, ಕಲ್ಮೇಶ ಪರಗೊಂಡ, ಬಿ.ಎನ್.ತುಪ್ಪದ, ಎಮ್.ಎಸ್.ದಳವಾಯಿ, ಕೆ.ಎಸ್.ಬಾಲಗೋಂಡ, ವಿ.ಆರ್.ಐಹೊಳ್ಳಿ, ಬಿ.ಎಸ್.ಬಾಗಲಕೋಟ, ಟಿ.ಪಿ.ದಳವಾಯಿ, ಮಂಜುನಾಥ ಮಟ್ಟಹಾಳ, ಎಸ್.ಎಮ್.ಹಂಡಿ, ಅಶೋಕ ಗಿಡ್ಡಪ್ಪಗೋಳ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

