ಮೋರಟಗಿ: ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದಂತೆ ಸಂಸ್ಕೃತಿಕ ಕಾರ್ಯಕ್ರಮಗಳು ಮುಳುಗುತ್ತಿವೆ. ಸಂಗೀತದಲ್ಲಿ ಶಾಂತಿ ಅಡಗಿದೆ. ಸಾಂಸಾರಿಕ ನಾಟಕಗಳು ರಸ ಮಂಜರಿ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಗ್ರಾಮೀಣ ಬಾಗದಲ್ಲಿ ಮಾತ್ರ ಜೀವಂತವಿವೆ ಸಂಗೀತ ಕೇಳುವುದರಿಂದ ಶಾಂತಿ ಪ್ರಾಪ್ತಿವಾಗುತ್ತದೆ ಎಂದು ಬಗಲೂರು ಗ್ರಾ. ಪಂ. ಅಧ್ಯಕ್ಷ ಲವಕುಶ ಮೋರಟಗಿ ಹೇಳಿದರು.
ಸಮೀಪದ ಕುಳೇಕುಮಟಗಿ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಸಂಸ್ಕೃತಿಕ ಕಲಾ ಸಂಘ ಮೋರಟಗಿ ವತಿಯಿಂದ ಮಂಗಳವಾರ ಹಮ್ಮಿಕೊಂಡ ವಚನ ಗಾಯನ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರಲ್ಲಿ ಅಕ್ಷರ ಜ್ಞಾನ ಇರಲಿಲ್ಲ. ಆ ಸಮಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೂಡಾ ಕೊಡುತ್ತಿರಲಿಲ್ಲ. ವ್ಯವಸಾಯಕ್ಕೆ ಹೆಚ್ಚಿನ ಆದ್ಯತೆ ನೀಡುತಿದ್ದರು. ಶಿಕ್ಷಣ ಪಡೆಯದಿದ್ದರೂ ಕೂಡಾ ನಾಟಕ ಬಯಲಾಟ ಮತ್ತು ಸಂಗೀತಗಳಲ್ಲಿ ಭಾಗವಹಿಸಿ ಪಾತ್ರ ನಿರ್ವಹಿಸಿ ಅಕ್ಷರ ಮುಟ್ಟಿ ಮಾತನಾಡುತಿದ್ದರು ಎಂದರು.
ಕಾರ್ಯಕ್ರಮದಲ್ಲಿ ರಾಮಸ್ವಾಮಿ ಮಯೂರ, ಲಕ್ಶ್ಮಣ ಕಟ್ಟಿಮನಿ, ಸಿದ್ದು ಅಗಸರ, ಸಿದ್ದಣ್ಣ ನಾರಾಯಣಪುರ, ಮಲ್ಲಿಕಾರ್ಜುನ ಅಗಸರ, ಅಂಬರೀಷ್ ಕಟ್ಟಿಮನಿ, ಮಹಾಂತಪ್ಪ ಮಂದೇವಾಲಿ, ಎಸ್ ಬಿ ಘತ್ತರಗಿ, ಆರ್ ಎಸ್ ಪಾಟೀಲ್, ರವಿ ವಿಭೂತಿ, ಭೀಮಾಶಂಕರ ವಿಭೂತಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

