ಬ್ರಹ್ಮದೇವನಮಡು: ಸಮೀಪದ ಕಡಕೋಳ ಮಡಿವಾಳೇಶ್ವರ ಅನುಭವ ಜಾತ್ರಾ ಮಹೋತ್ಸವ ಅಂಗವಾಗಿ ಜ.೩ರಂದು ಸಂಜೆ ೭ ಗಂಟೆಗೆ ಮಹಾ ಪ್ರಸಾದ (ಖಾಂಡ) ರಾತ್ರಿ ೮ ಗಂಟೆಗೆ ಧಮ೯ಸಭೆ ನಡೆಯಲಿದೆ. ಚಿಣಮಗೇರಿಯ ಸಿದ್ದರಾಮ ಶಿವಾಚಾಯ೯ರು, ನೀರಗುಡಿಯ ಹವಾಮಲ್ಲಿನಾಥ ಮಹಾರಾಜರು ಸಾನ್ನಿಧ್ಶವಹಿಸುವರು. ಶ್ರೀಮಠದ ಡಾ.ರುದ್ರಮುನಿ ಶಿವಾಚಾಯ೯ರು ಅಧ್ಶಕ್ಷತೆವಹಿಸುವರು. ಶಿರಶ್ಶಾಡದ ಅಭಿನವ ಮುರಘೇಂದ್ರ ಶಿವಾಚಾಯ೯ರು ನೇತೃತ್ವ, ಆಲಮೇಲದ ಚಂದ್ರಶೇಖರ ಶಿವಾಚಾಯ೯ರು, ಗಡಿಗೌಡಗೌಂವದ ಡಾ.ಶಾಂತವೀರ ಶಿವಾಚಾಯ೯ರು, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ, ಕುಕನೂರದ ಚನ್ನಮಲ್ಲದೇವರು ಹಿರೇಮಠ, ಹೋತಪೇಟಿಯ ಶಿವಲಿಂಗ ಶರಣರು, ಅರಳಗುಂಡಗಿಯ ಬಲವಂತ ಶರಣರು, ಇಟಗಿಯ ಚಂದ್ರಶೇಖರ ದೇವರು ವೀರಗೋಟಾದ ಅಡವಿಲಿಂಗ ಮಹಾರಾಜರು ಪಾಲ್ಗೊಳ್ಳುವರು. ಚಬನೂರದ ಜ್ಶೋತಿಷ್ಶರತ್ನ ರಾಮಲಿಂಗಯ್ಶ ಹಿರೇಮಠ ಧಮ೯ಸಭೆ ಉದ್ಘಾಟಿಸುವರು. ಸಂಸದ ಉಮೇಶ ಜಾಧವ ಅಧ್ಶಕ್ಷತೆ, ಡಾ.ಅಜಯಸಿಂಗ್ ಕ್ಶಾಲೆಂಡರ್ ಬಿಡುಗಡೆ ಮಾಡುವರು. ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಪ್ರೊ.ಡಾ.ಮೀನಾಕ್ಷಿ ಬ್ಶಾಳಿ ಸೇರಿದಂತೆ ಮಠಾಧೀಶರು, ವಿವಿಧ ರಾಜಕೀಯ ಮುಖಂಡರು, ಗಣ್ಶರು ಪಾಲ್ಗೊಳ್ಳಲಿದ್ದಾರೆ.
ಜ. ೪ ರಂದು ಬೆಳಗ್ಗೆ ೧೦ಕ್ಕೆ ಪಲ್ಲಕ್ಕಿ ಉತ್ಸವ, ಅಗ್ನಿ ಪ್ರವೇಶ ನಡೆಯಲಿದೆ. ಸಂಜೆ ೬ಕ್ಕೆ ಮಹಾರಥೋತ್ಸವ, ರಾತ್ರಿ ೧೦ಕ್ಕೆ ಸಿದ್ದರಾಮೇಶ್ವರ ನಾಟ್ಶ ಸಂಘ ಅವರಿಂದ ಸಾಮಾಜಿಕ ನಾಟಕ ಸೊಕ್ಕಿನ ಸೊಸೆ ಪ್ರದಶ೯ನ ನಡೆಯಲಿದೆ ಎಂದು ಶ್ರೀಮಠದ ಒಡೆಯ ಡಾ.ರುದ್ರಮುನಿ ಶಿವಾಚಾಯ೯ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

