Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ವಿಜಯಪುರ ವತಿಯಿಂದ ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಜನವರಿ ೧೦ರಂದು ಬೆಳಿಗ್ಗೆ ೧೧ ಗಂಟೆಗೆ MY BHARAT-VIKSIT BHARAT@2047 ವಿಷಯದ ಬಗ್ಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಒಂದು ಲಕ್ಷ ರೂ. ಬಹುಮಾನ, ದ್ವೀತಿಯ ಸ್ಥಾನ ಪಡೆದವರಿಗೆ ೫೦ ಸಾವಿರ ರೂ. ತೃತೀಯ ಸ್ಥಾನ (ಎರಡು) ಪಡೆದವರಿಗೆ ತಲಾ ೨೫ ಸಾವಿರ ರೂ. ಬಹುಮಾನ ನೀಡಲಾಗುವುದು.ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ದಿನಾಂಕ : ೦೯-೦೧-೨೦೨೪ರೊಳಗಾಗಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ವಿಜಯಪುರ ಕಚೇರಿ ದೂ: ೦೮೩೫೨-೨೪೪೧೩೦, ಮೊ: ೯೯೭೦೮೨೩೯೩೦ ಸಂಖ್ಯೆಗೆ…
ಮುದ್ದೇಬಿಹಾಳ: ಹಸಿರು ತೋರಣ ಗೆಳೆಯರ ಬಳಗದ ನೂತನ ಅಧ್ಯಕ್ಷರನ್ನಾಗಿ ವೈದ್ಯ ವೀರೇಶ ಇಟಗಿ ಮತ್ತು ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕ ಬಿ. ಎಚ್.ಬಳಬಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಬಿ.ಎಂ.ಪಲ್ಲೇದ, ಉಪಾಧ್ಯಕ್ಷರಾಗಿ ಬಸವರಾಜ ಬಿಜ್ಜೂರ, ಖಜಾಂಚಿಯಾಗಿ ಅಶೋಕ ರೇವಡಿ, ಸಂಚಾಲಕರಾಗಿ ಮಹಾಬಲೇಶ್ವರ ಗಡೇದ, ಸಹ ಕಾರ್ಯದರ್ಶಿಯಾಗಿ ವೀರೇಶ ಹಂಪನಗೌಡರ ಆಯ್ಕೆಯಾದರು.ಈ ವೇಳೆ ರವಿ ಗೂಳಿ, ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ರಾಜಶೇಖರ ಕಲ್ಯಾಣಮಠ, ಬಿ.ಎಸ್.ಮೇಟಿ, ಅಶೋಕ ರೇವಡಿ ಸೇರಿದಂತೆ ಬಳಗದ ಸದಸ್ಯರು ಉಪಸ್ಥಿತರಿದ್ದರು.ಜ.೭ ರಂದು ಸಂಜೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ ಎಂದು ಬಳಗದ ಕಾರ್ಯದರ್ಶಿ ವೀರೇಶ ಢವಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಪಿಎಸ್‌ಐ ಕೊಠಡಿಯನ್ನು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಉದ್ಘಾಟಿಸಿದರು.ಪಿಎಸ್‌ಐ ಸಂಜೀವ ತಿಪರೆಡ್ಡಿ ಸೇರಿದಂತೆ ಸಿಬ್ಬಂದಿ ಇದ್ದರು.
ಮುದ್ದೇಬಿಹಾಳ: ತಾಲೂಕಿನ ಅಮರಗೋಳ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ತಮ್ಮ ಫಾಯಿದೆಗೋಸ್ಕರ ಹಣ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದವರ ಮೇಲೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.ತಾಲೂಕಿನ ತಂಡಗಿ ಗ್ರಾಮದ ಗಣೇಶ ಹಾದಿಮನಿ, ಅಮರಗೋಳದ ಶಿವಪ್ಪ ಜೂಲಗುಡ್ಡ, ಹುನಗುಂದ ತಾಲೂಕು ಹುಲ್ಲಳ್ಳಿ ಗ್ರಾಮದ ಶರಣಪ್ಪ ಮಾದರ ಮತ್ತು ಮಹಾಂತೇಶ ಬೆಣ್ಣೂರ, ಧನ್ನೂರ ಗ್ರಾಮದ ಬಸವರಾಜ ಶಿರಹಟ್ಟಿ ಇವರ ಮೇಲೆ ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳ: ಮುಸ್ಲಿಂ ಮಹಿಳೆಯರ ಕುರಿತು ಮಾತನಾಡಿದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ರಾಜ್ಯ ಸರ್ಕಾರವು ಸ್ವಯಂ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವುದು ಅಗತ್ಯವಿದೆ ಎಂದು ಕರ್ನಾಟಕ ಮುಸ್ಲಿಂ ಯೂನಿಟ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಲಾಡ್ಲೆಮಶಾಕ ನಾಯ್ಕೋಡಿ ಆಗ್ರಹಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಜದಲ್ಲಿ ದ್ವೇಷ ಬಿತ್ತುವ ಉದ್ದೇಶದಿಂದ ಕಲ್ಲಡಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಕುರಿತು ಹೇಳಿಕೆ ನೀಡಿದ್ದಾರೆ. ಇದು ಕೇವಲ ಆ ಧರ್ಮದ ಮಹಿಳೆಯರಿಗೆ ಮಾತ್ರವಲ್ಲದೇ ಇಡೀ ಮಹಿಳಾ ಸಮಾಜಕ್ಕೆ ಅಪಮಾನವಾದಂತಾಗಿದೆ. ಇವರ ವಿರುದ್ಧ ರಾಜ್ಯ ಸರ್ಕಾರವು ಹಿಂದೇಟು ಹಾಕದೆ ಕಾನೂನು ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.
ಮುದ್ದೇಬಿಹಾಳ: ಕರ್ನಾಟಕ ಮುಸ್ಲಿಂ ಸಂಘದ ಜಿಲ್ಲಾಧ್ಯಕ್ಷರನ್ನಾಗಿ ಪಟ್ಟಣದ ಲಾಳೆಸಾ ನದಾಫ್ ಅವರನ್ನು ಆಯ್ಕೆ ಮಾಡಿ ರಾಜ್ಯಧ್ಯಕ್ಷ ಎಲ್.ಎನ್.ಬಶೀರ ಅಹಮದ್ ಆದೇಶಿಸಿದ್ದಾರೆ.
ಆಲಮೇಲ: ತಾಲೂಕಿನ ಸುಕ್ಷೇತ್ರ ಮಂಗಳೂರು ಭೀಮಾಶಂಕರ ಮಹಾರಾಜರ ರಥೋತ್ಸವವು ಭಕ್ತರ ಜಯಘೋಷಗಳ ಮಧ್ಯ ಅದ್ದೂರಿಯಾಗಿ ಜರುಗಿತು.ಅಂದು ಬೆಳಗಿನ ಜಾವ ಕತೃ ಗದ್ದುಗೆಗೆ ಮಹಾರುದ್ದಾಭಿಷೇಕ, ಬಿಲ್ವಾರ್ಚನೆ, ಮಂಗಳಾರುತಿ ಜರುಗಿತು.ಗ್ರಾಮದೆಲ್ಲೆಡೆ ಪಲ್ಲಕ್ಕಿ ಮೆರವಣಿಗೆ, ಕುಂಭ ಕಳಸ ಮೆರವಣಿಗೆ ಮಹಾಪ್ರಸಾದ ವಿತರಣೆ ನಡೆಯಿತು.ಪಟಾಕಿ,ಬ್ಯಾಂಜೋ, ಚಿಟ್ಟಹಲಿಗೆ ಮೇಳ, ಪುರವಂತರ ಸೇವೆಯೊಂದಿಗೆ ರಥೋತ್ಸವವು ಅದ್ದೂರಿಯಾಗಿ ಜರುಗಿತು.ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬಮ್ಮನಹಳ್ಳಿಯ ಭೀಮಾಶಂಕರ ಮಠದ ಸದ್ಗುರು ನರಸಿಂಹ ಮಹಾರಾಜರು, ವೇ:ಮಲ್ಲಯ್ಯ ಸಿ ಹಿರೇಮಠ, ಪುರಾಣಿಕರಾದ ಮಾಹಾಂತೇಶ್ ಶಾಸ್ತ್ರಿಗಳು ತದ್ದೇವಾಡಿ, ಈರಣ್ಣ ಶಾಸ್ತ್ರಿಗಳು ಚಿಕ್ಕರೂಗಿ, ವಿಠ್ಠಲ ಗು ಕೊಳ್ಳುರ ಹೈ ಕೋರ್ಟ್ ವಕೀಲರು, ಭಗವಂತ ಚ ರೇವೂರ, ಎಸ್ ಆರ್ ರೇವೂರ, ಆರ್ ಎಸ್ ಮಾವೂರ, ಎಸ್ ಎಮ್ ಮಾರ್ಯಾಳ, ಡಿ ಎಸ್ ಮಾವೂರ ಇಂಜನಿಯರ್, ವಿ ಜಿ ಸಿಂಪಿ ನಿವೃತ್ತ ಉಪನ್ಯಾಸಕರು, ಭೀಮಾಶಂಕರ ಈರಪ್ಪ ಮಾವೂರ, ಭೀಮಾಶಂಕರ ಸಿವಿಲ್ ಕಾಂಟ್ರಾಕ್ಟರ್ ಇದ್ದರು.ಸುತ್ತಮುತ್ತಲಿನ ಅನೇಕ ಗ್ರಾಮಗಳ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು.
ಆಲಮಟ್ಟಿ: ಕಳೆದ ಮಂಗಳವಾರದಿಂದ ಆಲಮಟ್ಟಿ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಕಾರ್ಮಿಕರು ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಸಂಜೆ ಅಧಿಕಾರಿಗಳ ಭರವಸೆ ಮೇರೆಗೆ ಹಿಂದಕ್ಕೆ ಪಡೆಯಲಾಯಿತು.ಕಳೆದ ನಾಲ್ಕು ದಿನಗಳಿಂದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಧರಣಿ ನಡೆಸಿದರೂ ಧರಣಿ ಸ್ಥಳಕ್ಕೆ ಭೇಟಿ ನೀಡದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ಕೊನೆಗೂ ಶುಕ್ರವಾರ ಸಂಜೆ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಐದು ತಿಂಗಳ ವೇತನ ಬಿಲ್ ಆಗಿದ್ದು, ಒಂದೆರೆಡು ದಿನದಲ್ಲಿ ತಮ್ಮ ಖಾತೆಗೆ ಜಮೆಯಾಗಲಿದೆ, ಇನ್ನೀತರ ಬೇಡಿಕೆಗಳ ಕುರಿತು ಚರ್ಚೆ ನಡೆಸಿ ಬಗೆಹರಿಸೋಣ, ಸದ್ಯಕ್ಕೆ ಧರಣಿ ಹಿಂದಕ್ಕೆ ಪಡೆಯಲು ಕೋರಿದರು.ನಮ್ಮ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಬೇಕು, ಪ್ರತಿ ವರ್ಷ ಎರಡು ಜತೆ ಸಮವಸ್ತ್ರ ಒದಗಿಸಬೇಕು, ನೌಕರರಿಗೆ ಗುರುತಿನ ಚೀಟಿ ಒದಗಿಸಬೇಕು, ನೌಕರರ ಕೌಶಲ್ಯ ಹಾಗೂ ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಯನ್ನು ಈಡೇರಿಸಲು ಅವರು ಮನವಿ ಮಾಡಿದರು.ಮಲ್ಲಿಕಾರ್ಜುನ ಎಚ್.ಟಿ, ದ್ಯಾಮಣ್ಣ ಬಿರಾದಾರ, ಲಕ್ಷ್ಮಣ…
ಸಿಂದಗಿ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜನರ ಜೀವನಕ್ಕೆ ಮತ್ತು ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದರು. ಅವರ ಸಂದೇಶ, ಹಿತ ನುಡಿಗಳು ಎಂದೆಂದಿಗೂ ಜೀವಂತ ಎಂದು ಶಾಲೆಯ ಆಡಳಿತಾಧಿಕಾರಿ ಎಸ್.ಎಸ್. ಪಾಟೀಲ ಹೇಳಿದರು.ಪಟ್ಟಣದ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯ ಮಲ್ಲಿಕಾರ್ಜುನ ಕನ್ನಡ ಮಾಧ್ಯಮ ಮತ್ತು ಪಂಚತಂತ್ರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಶ್ರೀಗಳ ಗುರು ನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ನಾಡು ಸೇರಿದಂತೆ ದೇಶ, ವಿದೇಶಗಳಲ್ಲಿ ಹಲವು ದಶಕಗಳಿಂದ ಪ್ರತಿ ನಿತ್ಯವೂ ಪ್ರವಚನವನ್ನೇ ಉಸಿರಾಗಿಸಿಕೊಂಡಿರುವ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಬದುಕು ಅತ್ಯಂತ ಸರಳವಾದುದು. ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಬಾಳಿ, ಬದುಕಿ, ಸರಳತೆಯನ್ನೇ ಬೋಧಿಸಿದವರು ಎಂದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಎನ್.ಜಿ.ಸಜ್ಜನ, ಸುಜಾತ ಪಾಟೀಲ ಸೇರಿದಂತೆ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಶ್ರೀ ಸಿದ್ದೇಶ್ವರರ ನೂರೆಂಟು ದಿನಗಳ ಜಪಯಜ್ಞ ಕಾರ್ಯಕ್ರಮದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಅಭಿಮತ ಇಂಡಿ: ಧರ್ಮ, ಜಾತಿಗೆ ಜಾಗವಿಲ್ಲದ ಮಾನವಕುಲಕೋಟಿಗೆ ಉದ್ದಾರ ಮಾಡುವ ಏಕೈಕ ಸಿದ್ದೇಶ್ವರ ಮಹಾಸ್ವಾಮಿಗಳ ಆಶ್ರಮ. ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕೃತಿಯಲ್ಲಿ, ಚರಾಚರ ವಸ್ತುಗಳಲ್ಲಿ ದೇವರನ್ನು ಕಂಡ ಶತಮಾನದ ಮಹಾನ್ ಸಂತರಾಗಿದ್ದರು. ಅವರು ಕೃಷಿ, ಉದ್ಯೋಗ, ಶಿಕ್ಷಣ, ನೀರಾವರಿ ಪರಿಸರದ ಬಗ್ಗೆ ತಮ್ಮ ಪ್ರವಚನ ಮೂಲಕ ಚಿಂತನೆ ಮಾಡುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿದ ಸಿದ್ಧಾಂತ ಶಿಖಾಮಣಿ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.ತಾಲ್ಲೂಕಿನ ಅಥರ್ಗಾ ಗ್ರಾಮದ ಷಣ್ಣುಖಾರೂಢ ಆಶ್ರಮದಲ್ಲಿ ಆಯೋಜಿಸಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರರ ನೂರೆಂಟು ದಿನಗಳ ಜಪಯಜ್ಞ ಹಾಗೂ ನೂರೆಂಟು ಸಾಧಕ ಶಿರೋಮಣಿಗಳಿಂದ ನುಡಿನಮನ ಮಹಾ ಮಂಗಲೋತ್ಸವದ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದರು.ಬಸವರಾಜಪಾಟೀಲ ಸೇಡಂ ಮಾತನಾಡಿ, ಸಿದ್ದೇಶ್ವರರರಂತಹ ಶ್ರೇಷ್ಠ ದಾರ್ಶನಿಕ, ಅಧುನಿಕ ದೇವರನ್ನೇ ಪಡೆದಿರುವ ನಿಮ್ಮ ಜಿಲ್ಲೆಯ ಜನತೆ ಧನ್ಯರು. ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ…
