ಮುದ್ದೇಬಿಹಾಳ: ಹಸಿರು ತೋರಣ ಗೆಳೆಯರ ಬಳಗದ ನೂತನ ಅಧ್ಯಕ್ಷರನ್ನಾಗಿ ವೈದ್ಯ ವೀರೇಶ ಇಟಗಿ ಮತ್ತು ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕ ಬಿ. ಎಚ್.ಬಳಬಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಬಿ.ಎಂ.ಪಲ್ಲೇದ, ಉಪಾಧ್ಯಕ್ಷರಾಗಿ ಬಸವರಾಜ ಬಿಜ್ಜೂರ, ಖಜಾಂಚಿಯಾಗಿ ಅಶೋಕ ರೇವಡಿ, ಸಂಚಾಲಕರಾಗಿ ಮಹಾಬಲೇಶ್ವರ ಗಡೇದ, ಸಹ ಕಾರ್ಯದರ್ಶಿಯಾಗಿ ವೀರೇಶ ಹಂಪನಗೌಡರ ಆಯ್ಕೆಯಾದರು.
ಈ ವೇಳೆ ರವಿ ಗೂಳಿ, ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ರಾಜಶೇಖರ ಕಲ್ಯಾಣಮಠ, ಬಿ.ಎಸ್.ಮೇಟಿ, ಅಶೋಕ ರೇವಡಿ ಸೇರಿದಂತೆ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಜ.೭ ರಂದು ಸಂಜೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ ಎಂದು ಬಳಗದ ಕಾರ್ಯದರ್ಶಿ ವೀರೇಶ ಢವಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

