ಆಲಮೇಲ: ತಾಲೂಕಿನ ಸುಕ್ಷೇತ್ರ ಮಂಗಳೂರು ಭೀಮಾಶಂಕರ ಮಹಾರಾಜರ ರಥೋತ್ಸವವು ಭಕ್ತರ ಜಯಘೋಷಗಳ ಮಧ್ಯ ಅದ್ದೂರಿಯಾಗಿ ಜರುಗಿತು.
ಅಂದು ಬೆಳಗಿನ ಜಾವ ಕತೃ ಗದ್ದುಗೆಗೆ ಮಹಾರುದ್ದಾಭಿಷೇಕ, ಬಿಲ್ವಾರ್ಚನೆ, ಮಂಗಳಾರುತಿ ಜರುಗಿತು.
ಗ್ರಾಮದೆಲ್ಲೆಡೆ ಪಲ್ಲಕ್ಕಿ ಮೆರವಣಿಗೆ, ಕುಂಭ ಕಳಸ ಮೆರವಣಿಗೆ ಮಹಾಪ್ರಸಾದ ವಿತರಣೆ ನಡೆಯಿತು.
ಪಟಾಕಿ,ಬ್ಯಾಂಜೋ, ಚಿಟ್ಟಹಲಿಗೆ ಮೇಳ, ಪುರವಂತರ ಸೇವೆಯೊಂದಿಗೆ ರಥೋತ್ಸವವು ಅದ್ದೂರಿಯಾಗಿ ಜರುಗಿತು.
ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬಮ್ಮನಹಳ್ಳಿಯ ಭೀಮಾಶಂಕರ ಮಠದ ಸದ್ಗುರು ನರಸಿಂಹ ಮಹಾರಾಜರು, ವೇ:ಮಲ್ಲಯ್ಯ ಸಿ ಹಿರೇಮಠ, ಪುರಾಣಿಕರಾದ ಮಾಹಾಂತೇಶ್ ಶಾಸ್ತ್ರಿಗಳು ತದ್ದೇವಾಡಿ, ಈರಣ್ಣ ಶಾಸ್ತ್ರಿಗಳು ಚಿಕ್ಕರೂಗಿ, ವಿಠ್ಠಲ ಗು ಕೊಳ್ಳುರ ಹೈ ಕೋರ್ಟ್ ವಕೀಲರು, ಭಗವಂತ ಚ ರೇವೂರ, ಎಸ್ ಆರ್ ರೇವೂರ, ಆರ್ ಎಸ್ ಮಾವೂರ, ಎಸ್ ಎಮ್ ಮಾರ್ಯಾಳ, ಡಿ ಎಸ್ ಮಾವೂರ ಇಂಜನಿಯರ್, ವಿ ಜಿ ಸಿಂಪಿ ನಿವೃತ್ತ ಉಪನ್ಯಾಸಕರು, ಭೀಮಾಶಂಕರ ಈರಪ್ಪ ಮಾವೂರ, ಭೀಮಾಶಂಕರ ಸಿವಿಲ್ ಕಾಂಟ್ರಾಕ್ಟರ್ ಇದ್ದರು.
ಸುತ್ತಮುತ್ತಲಿನ ಅನೇಕ ಗ್ರಾಮಗಳ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

