ಆಲಮಟ್ಟಿ: ಕಳೆದ ಮಂಗಳವಾರದಿಂದ ಆಲಮಟ್ಟಿ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಕಾರ್ಮಿಕರು ಆರು ತಿಂಗಳ ವೇತನ ಪಾವತಿಗೆ ಆಗ್ರಹಿಸಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ಸಂಜೆ ಅಧಿಕಾರಿಗಳ ಭರವಸೆ ಮೇರೆಗೆ ಹಿಂದಕ್ಕೆ ಪಡೆಯಲಾಯಿತು.
ಕಳೆದ ನಾಲ್ಕು ದಿನಗಳಿಂದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಧರಣಿ ನಡೆಸಿದರೂ ಧರಣಿ ಸ್ಥಳಕ್ಕೆ ಭೇಟಿ ನೀಡದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ಕೊನೆಗೂ ಶುಕ್ರವಾರ ಸಂಜೆ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಐದು ತಿಂಗಳ ವೇತನ ಬಿಲ್ ಆಗಿದ್ದು, ಒಂದೆರೆಡು ದಿನದಲ್ಲಿ ತಮ್ಮ ಖಾತೆಗೆ ಜಮೆಯಾಗಲಿದೆ, ಇನ್ನೀತರ ಬೇಡಿಕೆಗಳ ಕುರಿತು ಚರ್ಚೆ ನಡೆಸಿ ಬಗೆಹರಿಸೋಣ, ಸದ್ಯಕ್ಕೆ ಧರಣಿ ಹಿಂದಕ್ಕೆ ಪಡೆಯಲು ಕೋರಿದರು.
ನಮ್ಮ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಬೇಕು, ಪ್ರತಿ ವರ್ಷ ಎರಡು ಜತೆ ಸಮವಸ್ತ್ರ ಒದಗಿಸಬೇಕು, ನೌಕರರಿಗೆ ಗುರುತಿನ ಚೀಟಿ ಒದಗಿಸಬೇಕು, ನೌಕರರ ಕೌಶಲ್ಯ ಹಾಗೂ ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಯನ್ನು ಈಡೇರಿಸಲು ಅವರು ಮನವಿ ಮಾಡಿದರು.
ಮಲ್ಲಿಕಾರ್ಜುನ ಎಚ್.ಟಿ, ದ್ಯಾಮಣ್ಣ ಬಿರಾದಾರ, ಲಕ್ಷ್ಮಣ ಬ್ಯಾಲ್ಯಾಳ, ಮುತ್ತು ಬಡಿಗೇರ ಸೇರಿದಂತೆ ಹಲವರು ಇದ್ದರು. ಡಿಎಫ್ ಓ ರಾಜಣ್ಣ ನಾಗಶೆಟ್ಟಿ, ಆರ್.ಎಫ್.ಓ ಮಹೇಶ ಪಾಟೀಲ ಮತ್ತೀತರ ಅಧಿಕಾರಿಗಳು ಇದ್ದರು.
*ಉದ್ಯಾನ ಆರಂಭ:* ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದ ಆಲಮಟ್ಟಿಯ ವಿವಿಧ ಉದ್ಯಾನಗಳನ್ನು ಶುಕ್ರವಾರ ಬೆಳಿಗ್ಗೆಯೇ ಆರಂಭಿಸಲಾಯಿತು. ಮುಷ್ಕರ ನಡೆದರೂ ನಾನಾ ಕಡೆಯಿಂದ ಅರಣ್ಯ ಕಾರ್ಮಿಕರನ್ನು ಕರೆಯಿಸಿ ಉದ್ಯಾನ ಆರಂಭಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

