ಶ್ರೀ ಸಿದ್ದೇಶ್ವರರ ನೂರೆಂಟು ದಿನಗಳ ಜಪಯಜ್ಞ ಕಾರ್ಯಕ್ರಮದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಅಭಿಮತ
ಇಂಡಿ: ಧರ್ಮ, ಜಾತಿಗೆ ಜಾಗವಿಲ್ಲದ ಮಾನವಕುಲಕೋಟಿಗೆ ಉದ್ದಾರ ಮಾಡುವ ಏಕೈಕ ಸಿದ್ದೇಶ್ವರ ಮಹಾಸ್ವಾಮಿಗಳ ಆಶ್ರಮ. ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕೃತಿಯಲ್ಲಿ, ಚರಾಚರ ವಸ್ತುಗಳಲ್ಲಿ ದೇವರನ್ನು ಕಂಡ ಶತಮಾನದ ಮಹಾನ್ ಸಂತರಾಗಿದ್ದರು. ಅವರು ಕೃಷಿ, ಉದ್ಯೋಗ, ಶಿಕ್ಷಣ, ನೀರಾವರಿ ಪರಿಸರದ ಬಗ್ಗೆ ತಮ್ಮ ಪ್ರವಚನ ಮೂಲಕ ಚಿಂತನೆ ಮಾಡುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿದ ಸಿದ್ಧಾಂತ ಶಿಖಾಮಣಿ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ತಾಲ್ಲೂಕಿನ ಅಥರ್ಗಾ ಗ್ರಾಮದ ಷಣ್ಣುಖಾರೂಢ ಆಶ್ರಮದಲ್ಲಿ ಆಯೋಜಿಸಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರರ ನೂರೆಂಟು ದಿನಗಳ ಜಪಯಜ್ಞ ಹಾಗೂ ನೂರೆಂಟು ಸಾಧಕ ಶಿರೋಮಣಿಗಳಿಂದ ನುಡಿನಮನ ಮಹಾ ಮಂಗಲೋತ್ಸವದ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದರು.
ಬಸವರಾಜಪಾಟೀಲ ಸೇಡಂ ಮಾತನಾಡಿ, ಸಿದ್ದೇಶ್ವರರರಂತಹ ಶ್ರೇಷ್ಠ ದಾರ್ಶನಿಕ, ಅಧುನಿಕ ದೇವರನ್ನೇ ಪಡೆದಿರುವ ನಿಮ್ಮ ಜಿಲ್ಲೆಯ ಜನತೆ ಧನ್ಯರು. ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನಗಳನ್ನು ಸರಕಾರ ಪ್ರಚುರಪಡಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿದ್ದ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ, ಈಶಪ್ರಸಾದ ಮಹಾಸ್ವಾಮಿಜೀ, ಮರುಘೇಂದ್ರ ಮಹಾಸ್ವಾಮಿಗಳು. ಶಾಂತ ಗಂಗಾಧರ ಜಗದ್ಗುರುಗಳು ಆಶೀರ್ವಚನ ನೀಡಿದರು.