Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಯಿತು.ಮೆಗಾ ಮಾರುಕಟ್ಟೆಯಲ್ಲಿ ಒಟ್ಟು ೧೩೩ ವಾಣಿಜ್ಯ ಮಳಿಗೆಗಳಿವೆ. ಈಗಾಗಲೇ ಕೆಲವು ವಾಣಿಜ್ಯ ಮಳಿಗೆಗಳು ಹಿಂದೆ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಪಡೆದುಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಂಭತ್ತು ಜನರು ಭಾಗಿಯಾಗಿದ್ದರು. ನಾಲ್ಕು ಜನರು ವಾಣಿಜ್ಯ ಮಳಿಗೆಗಳನ್ನು ಪಡೆದುಕೊಂಡರು.ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಅಧಿಕಾರಿಗಳಿಂದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ನಾಳೆ ಭಾನುವಾರ ಸರ್ಕಾರಿ ರಜಾ ದಿನವಾಗಿರುವದರಿಂದ ಬ್ಯಾಂಕು ರಜೆ ಇರುವದರಿಂದಾಗಿ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಠೇವಣಿ ಇಡಲು ತೊಂದರೆಯಾಗುವದರಿಂದಾಗಿ ಸೋಮವಾರ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇಂದು ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಠೇವಣಿ ಮೊತ್ತ…
ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಜ. ೭ ರಂದು ಬೆಳಗ್ಗೆ ೧೦.೩೦ ಗಂಟೆಗೆ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಗುರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯವನ್ನು ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ. ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಅಭಿಯಾನಂದ ಸ್ವಾಮೀಜಿ, ಆಲಮಟ್ಟಿಯ ರುದ್ರಮುನಿ ದೇವರು ವಹಿಸುವರು. ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಎಂ.ಎನ್.ಚೋರಗಸ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಅಶೋಕ ಕಲ್ಲೂರ, ರವಿ ಪಟ್ಟಣಶೆಟ್ಟಿ, ರಾಹುಲ ಅಗರವಾಲ, ಡಾ.ಕರುಣಾಕರ ಚೌಧರಿ, ಸುನೀಲ ದುಂಬಾಳಿ, ಅಶೋಕ ಗುಳೇದ ಆಗಮಿಸುವರು ಎಂದು ಶಿವಲಿಂಗೇಶ್ವರ ವಿರಕ್ತಮಠದ ಪ್ರಕಟಣೆ ತಿಳಿಸಿದೆ.
ಮಾಗಣಗೇರಿಯಲ್ಲಿ ನಡೆದ ಧಮ೯ಸಭೆ | ಸಚಿವ ಶರಣಬಸಪ್ಪ ದಶ೯ನಾಪೂರ ಅಭಿಮತ ಬ್ರಹ್ಮದೇವನಮಡು: ಮಾಗಣಗೇರಿಯ ಡಾ.ವಿಶ್ವರಾಧ್ಶ ಶಿವಾಚಾಯ೯ರು ತಮ್ಮ ಇಳಿ ವಯಸ್ಸಿನಲ್ಲೂ ಭಕ್ತರ ಏಳ್ಗೆಗಾಗಿ ಶ್ರಮಿಸುವ ಮೂಲಕ ತಮ್ಮ ಇಡೀ ಜೀವನವನ್ನು ಭಕ್ತರ ನೆಮ್ಮದಿಯ ಬದುಕಿಗೆ ಅಪ೯ಣೆ ಮಾಡಿದ್ದು, ಭಕ್ತರಿಗೆ ಬಹು ದೊಡ್ಡ ಭಾಗ್ಶವೇ ಸರಿ ಎಂದು ರಾಜ್ಶ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದಶ೯ನಾಪೂರ ಹೇಳಿದರು.ಸಮೀಪದ ಮಾಗಣಗೇರಿಯ ಬೃಹನ್ಮಠದ ಲಿಂ.ಶ್ರೀ ಚನ್ನವೃಷಭೇಂದ್ರ ಶಿವಯೋಗಿಗಳ ಹಾಗೂ ಕೆಂಭಾವಿ ಗುರು ಅಯ್ಶಪ್ಪಯ್ಶ ಶಿವಾಚಾಯ೯ರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧಮ೯ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಭಕ್ತರೇ ಮಠಗಳ ಆಸ್ತಿ, ಇವತ್ತು ಧಾಮಿ೯ಕ, ಸಾಮಾಜಿಕ,ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ನಿರಂತರವಾಗಿದೆ. ಇಂತಹ ಮಠಗಳಲ್ಲಿ ಮಾಗಣಗೇರಿ ಬೃಹನ್ಮಠವೂ ಮುಂಚೂಣಿಯಲ್ಲಿದೆ ಎಂದು ಸಚಿವರು ಶ್ಲಾಘಿಸಿದರು.ಶ್ರೀಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು ಅಧ್ಶಕ್ಷತೆ ವಹಿಸಿದ್ದರು. ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು, ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾಯ೯ರು, ಕಲಕೇರಿಯ ಮಠದ ಸಿದ್ದರಾಮ ಸ್ವಾಮೀಜಿ, ನಾಗಯ್ಶಸ್ವಾಮಿ ದೇಸಾಯಿಮಠ, ಶಿವುಪ್ರಸಾದ…
ವಿಜಯಪುರ: ನಗರದ ಮಲ್ಲಿಕಾರ್ಜುನ ನಗರದ ಶ್ರೀ ಶಿವಾಲಯ ಗಜಾನನ ತರುಣ ಮಂಡಳಿಯು ಇತ್ತೀಚೆಗೆ ಈಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೆ, ಗುರು ನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಸಾನಿಧ್ಯವನ್ನು ಜ್ಞಾನಯೋಗಾಶ್ರಮದ ಬಸವರಾಜ ಸ್ವಾಮೀಜಿ ವಹಿಸಿದ್ದರು. ಹೂನುಮಲ್ಲಪ್ಪ ಜಂಗಮಶೆಟ್ಟಿ, ಮಹೇಶ ಅನಂತಪುರ ಉಪಸ್ಥಿತರಿದ್ದು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ 1111 ಜ್ಞಾನಜ್ಯೋತಿ ದೀಪ ಬೆಳಗಿಸಿ ಪೂಜ್ಯರ ಪವಿತ್ರ ಆತ್ಮಕ್ಕೆ ನುಡಿ ನಮನ ಸಲ್ಲಿಸಿದರು.ನಗರದ ಹವ್ಯಾಸಿ ಕಲಾಬಳಗದ ಕಲಾವಿದರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತವಾಣಿ ಆಧಾರಿತ ಆಧ್ಯಾತ್ಮಿಕ ನಾಟಕ “ಜ್ಞಾನಯೋಗಿಗೆ ನಮೋ ನಮಃ” ವಿಶೇಷ ಪ್ರದರ್ಶನ ಪ್ರಸ್ತುತಪಡಿಸಿದರು. ನಾಟಕ ರಚನೆ, ವಿನ್ಯಾಸ, ಪರಿಕಲ್ಪನೆ ಮತ್ತು ನಿರ್ದೇಶನದೊಂದಿಗೆ ಶ್ರೀಗಳ ಪಾತ್ರದಲ್ಲಿ ಡಾ.ದರ್ಶನ್ ಧರಿ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಶ್ರೇಯಾ ಹೋಟೆಲ್ ಮಾಲೀಕ ಕಿಟ್ಟು ಶೆಟ್ಟಿ ಅನ್ನಪ್ರಸಾದ ಸೇವೆ ಮಾಡಿದರು.ಇದೇ ವೇಳೆ ದಿವಂಗತ ಕು. ಶಿಲ್ಪಾ ಶೆಟ್ಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ವೈದ್ಯ ಮಿತ್ರರು ಅಭಿನಯಿಸಿದ…
ಇಂಡಿ: ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಜಾರಿಯಲ್ಲಿದ್ದು,ಅರ್ಹರು ಅಗತ್ಯ ದಾಖಲೆ ನೀಡಿ, ಸೌಲಭ್ಯ ಪಡೆಯಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ತಾಲೂಕಿನ ಹಿರೇರೂಗಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಜರುಗಿದ ಪಿಂಚಣಿ ಅದಾಲತ್‌ನಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದಸವಲತ್ತುಗಳು ತಲುಪಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರು ಕೈ ಜೋಡಿಸಿ ಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು. ಪಿಂಚಣಿ ಅದಾಲತ್ ಕಾರ್ಯಕ್ರಮ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಮೂಲಕ ಜನಸ್ನೇಹಿಯಾಗಿಸಬೇಕಾದ ಹೊಣೆ ಎಲ್ಲ ಹಂತದ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.ಗ್ರೇಡ್-2 ತಹಶೀಲ್ದಾರ್ ಧನಪಾಲಶೆಟ್ಟಿ ದೇವೂರ ಮಾತನಾಡಿದರು.ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ ಅವರು ಅದಾಲತ್ ನೇತೃತ್ವ ವಹಿಸಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಂಬವ್ವ ಕೋಟಗೊಂಡ,ಹಿರೇರೂಗಿ ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ಪಂಚಾಯತ್…
ವಿಜಯಪುರ: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ವಸ್ಥವೃತ್ತ ಹಾಗೂ ಯೋಗ ವಿಭಾಗದ ವತಿಯಿಂದ ಮಲಬದ್ದತೆಯಿಂದ ಬಳಲುವ ರೋಗಿಗಳಿಗಾಗಿ ಯೋಗ ಚಿಕಿತ್ಸಾ ಉಚಿತ ಶಿಬಿರ ಜನೇವರಿ 8 ರಿಂದ ಜನೇವರಿ 13ರ ವರೆಗೆ ನಡೆಯಲಿದೆ.ಆಸ್ಪತ್ರೆಯ ಆವರಣದಲ್ಲಿ ಜನೇವರಿ 8 ರಿಂದ ಜನೇವರಿ 13ರ ವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 8277192896 ಸಂಪರ್ಕಿಸಬಹುದಾಗಿದೆ.
(ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ ) ಜಯ್ ನುಡಿ (ವ್ಯಕ್ತಿತ್ವ ವಿಕಸನ ಮಾಲಿಕೆ)*- ಜಯಶ್ರೀ.ಜೆ.ಅಬ್ಬಿಗೇರಿ (ಬೆಳಗಾವಿ)*ಆಂಗ್ಲ ಭಾಷಾ ಉಪನ್ಯಾಸಕರು, ಸ.ಪ.ಪೂ ಕಾಲೇಜು, ಹಿರೇಬಾಗೇವಾಡಿ, ಜಿ:ಬೆಳಗಾವಿ ಮೊ.೯೪೪೯೨೩೪೧೪೨ ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ ಕರಿತಾವ.. ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ ನೆಟ್ಟಗಾಗ್ತಿಲ್ಲ ಎನ್ನುವುದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ ರೀತಿನ ಬದಲಿಸಬೇಕೋ ಏನೂ ತಿಳಿತಿಲ್ಲ. ಎಲ್ಲಾ ಗೊಂದಲಮಯ. ಈ ಗೊಂದಲಕ್ಕೆ ಮಂಗಳಾರತಿ ಹಾಡಬೇಕಂದರೆ ಇದನ್ನು ಗಮನವಿರಿಸಿ ಓದಿ ಇದರಲ್ಲಿಯ ನಿಯಮ ಪಾಲಿಸಿ. ಕೆಲಸಕ್ಕೆ ಉತ್ತಮ ಫಲ ತಾನೆ ಸಿಗುತ್ತೆ ನೋಡಿ.. *ಕಾಲ ಮಿತ್ರನೂ ಹೌದು ಶತ್ರುವು ಹೌದು*ಅರೆ ಅದ್ಹೇಗೆ ಮಿತ್ರ ಶತ್ರು ಆಗುವುದು ಸಾಧ್ಯವಿದೆ ಅಂತಿರೇನು? ಕಾಲವನ್ನು ನಾವು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡರೆ ಮಾತ್ರ…
ಯಡ್ರಾಮಿ: ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಯಡ್ರಾಮಿ ಪಟ್ಟಣದ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ರಥೋತ್ಸವ ಶುಕ್ರವಾರದಂದು ಸಾವಿರಾರು ಭಕ್ತರ ಜಯಘೋಷದ ಮದ್ಯೆ ಅದ್ದೂರಿಯಾಗಿ ನಡೆಯಿತು.ಗುರುವಾರ ಸಾಯಂಕಾಲ ೭ಕ್ಕೆ ಪಟ್ಟಣದ ಹನುಮಾನ ಮಂದಿರದಿಂದ ದೇವಿಯನ್ನು ಬಣ್ಣದಿಂದ ಗ್ರಾಮ ದೇವತೆ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಅಲಂಕಾರಗೊಂಡ ರಥದಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿ, ರಾತ್ರಿ ೧೨.೨೦ಕ್ಕೆ ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಸುರಪೂರ ನಿಷ್ಠಿ ಕಡ್ಲೆಪ್ಪನವರ ವಿರಕ್ತಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.ಕಳಸ ಹೊತ್ತ ಸುಮಂಗಲೆಯರು, ಹುಲಿ ವೇಷಧಾರಿ ಕುಣಿತ, ನಾಸಿಕ್ ಬ್ಯಾಂಜೊ ಪಾರ್ಟಿ, ಡೊಳ್ಳು ಕುಣಿತ, ಕುದುರೆ ಕುಣಿತ, ನಂದಿ ದ್ವಜ ಕುಣಿತ, ಬೊಂಬೆ ಮೆರವಣಿಗೆ, ಕರಡಿ ಮಜಲು, ಹಲಗೆ ಹಾಗೂ ಭಕ್ತರ ಜಯಘೋಷದೊಂದಿಗೆ ಶ್ರಿ ಗ್ರಾಮ ದೇವತೆ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಹಳೆ ಬಜಾರ್, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮೂಲಕ ಶುಕ್ರವಾರ ನಸುಕಿನ ಜಾವ…
ಆಲಮೇಲ. ಕನ್ನಡ ಜಾನಪದ ಪರಿಷತ್ ಆಲಮೇಲ ತಾಲೂಕು ಘಟಕದ ಉದ್ಘಾಟನೆ ರವಿವಾರ ಜ. ೭ ರಂದು ತಾಲೂಕಿನ ಕಡಣಿ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ. ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕಜಾಪ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಉದ್ಘಾಟಿಸುವರು. ಯುವ ಪ್ರಶಸ್ತಿ ಪುರಸ್ಕೃತರ ಸಂಘದ ರಾಷ್ಟ್ರೀಯ ಅಧ್ಯಕ್ಷ ನೂತನ ಪದಾಧಿಕಾರಿಗಳಿಗೆ ಪದಪತ್ರ ನೀಡುವರು, ಕಜಾಪ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ಅಧ್ಯಕ್ಷತೆ ವಹಿಸುವರು, ಕಜಾಪ ಜಿಲ್ಲಾ ಕಾರ್ಯದರ್ಶಿ ಡಾ.ರಮೇಶ ತೇಲಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ರಮೇಶ ಕತ್ತಿ, ಸರಕಾರಿ ನೌಕರರ ಸಂಘದ ಸಿಂದಗಿ ತಾಲೂಕಾಧ್ಯಕ್ಷ ಆರ್ ಜಿ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಆಲಮೇಲ ತಾಲೂಕಾಧ್ಯಕ್ಷ ಶಿವಶರಣ ಗುಂದಗಿ, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಸೈಯದ್ ದೇವರಮನಿ, ಕಡಣಿ ಗ್ರಾಂ ಪಂ ಅಧ್ಯಕ್ಷ ಬಸವಲಿಂಗಪ್ಪ ಕತ್ತಿ, ಗಣ್ಯರಾದ ಈರಯ್ಯ ಗಂಗೊಳ್ಳಿ, ಬಸವರಾಜ ತಾವರಗೇರಿ, ಗಂಗಾಧರ ಶ್ರೀಗಿರಿ, ಹಣಮಂತ್ರಾಯ ಕಳಸಗೊಂಡ, ಶಿವಣ್ಣಗೌಡ…
ಚಿಮ್ಮಡ: ಇದೇ ೨೨ ರಂದು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಮನೆ ಮನೆಗೆ ಶ್ರೀ ರಾಮನ ಆಶೀರ್ವಾದ ಕಾರ್ಯಕ್ರಮಕ್ಕೆ ಶ್ರೀ ಪ್ರಭು ಮಹಾಸ್ವಾಮಿಗಳು ಹಾಗೂ ಶ್ರೀ ಜನಾರ್ಧನ ಮಹಾರಾಜರು ಶನಿವಾರ ಚಾಲನೆ ನೀಡಿದರು.ಸಂಕೇತಿಕವಾಗಿ ಗ್ರಾಮದ ಐದು ಮನೆಗಳ ಮಹಿಳೆಯರಿಗೆ ಅಕ್ಷತೆ ನೀಡಿ ಆಶೀರ್ವದಿಸಿ ಮಾತನಾಡಿದ ಶ್ರೀಗಳು ನೀಡಿರುವ ಅಕ್ಷತೆಯನ್ನು ಜಗಲಿಯ ಮೇಲಿಟ್ಟು ಪ್ರತಿದಿನ ಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆ ದಿನವಾದ ಜನೆವರಿ ೨೨ರಂದು ಮನೆಯ ಹಿರಿಯರಿಂದ ಕಿರಿಯರ ತಲೆ ಮೇಲೆ ಈ ಅಕ್ಷತೆ ಹಾಕ ಆಶೀರ್ವದಿಸಿದರೆ ಪ್ರಭು ಶ್ರೀ ರಾಮನ ಆಶೀರ್ವಾದ ದೊರೆತಂತೆ ಎಂದರು.ನಂತರ ಗ್ರಾಮದ ಪ್ರತಿ ಮನೆಗಳಿಗೆ ಈ ಅಕ್ಷತೆಯನ್ನು ಮಾಹಿತಿ ಪತ್ರದೊಂದಿಗೆ ಹಂಚಲಾಯಿತು.ಕಾರ್ಯಕ್ರಮದಲ್ಲಿ ಗ್ರಾ.ಪಂ, ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಪ್ರಕಾಶ ಪಾಟೀಲ, ಮನೋಜ ಹಟ್ಟಿ, ಚಂದ್ರಕಾಂತ ಜಾಡಗೌಡ, ಅವ್ವನಪ್ಪಾ ಮುಗಳಖೋಡ, ಬಸವರಾಜ ಬಿಜಾಪೂರ, ಕಾಳು ಬಡಿಗೇರ, ಶಿವಪ್ಪಾ ದಿನ್ನಿಮನಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
