ವಿಜಯಪುರ: ನಗರದ ಮಲ್ಲಿಕಾರ್ಜುನ ನಗರದ ಶ್ರೀ ಶಿವಾಲಯ ಗಜಾನನ ತರುಣ ಮಂಡಳಿಯು ಇತ್ತೀಚೆಗೆ ಈಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೆ, ಗುರು ನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಾನಿಧ್ಯವನ್ನು ಜ್ಞಾನಯೋಗಾಶ್ರಮದ ಬಸವರಾಜ ಸ್ವಾಮೀಜಿ ವಹಿಸಿದ್ದರು. ಹೂನುಮಲ್ಲಪ್ಪ ಜಂಗಮಶೆಟ್ಟಿ, ಮಹೇಶ ಅನಂತಪುರ ಉಪಸ್ಥಿತರಿದ್ದು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ 1111 ಜ್ಞಾನಜ್ಯೋತಿ ದೀಪ ಬೆಳಗಿಸಿ ಪೂಜ್ಯರ ಪವಿತ್ರ ಆತ್ಮಕ್ಕೆ ನುಡಿ ನಮನ ಸಲ್ಲಿಸಿದರು.
ನಗರದ ಹವ್ಯಾಸಿ ಕಲಾಬಳಗದ ಕಲಾವಿದರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತವಾಣಿ ಆಧಾರಿತ ಆಧ್ಯಾತ್ಮಿಕ ನಾಟಕ “ಜ್ಞಾನಯೋಗಿಗೆ ನಮೋ ನಮಃ” ವಿಶೇಷ ಪ್ರದರ್ಶನ ಪ್ರಸ್ತುತಪಡಿಸಿದರು. ನಾಟಕ ರಚನೆ, ವಿನ್ಯಾಸ, ಪರಿಕಲ್ಪನೆ ಮತ್ತು ನಿರ್ದೇಶನದೊಂದಿಗೆ ಶ್ರೀಗಳ ಪಾತ್ರದಲ್ಲಿ ಡಾ.ದರ್ಶನ್ ಧರಿ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೇಯಾ ಹೋಟೆಲ್ ಮಾಲೀಕ ಕಿಟ್ಟು ಶೆಟ್ಟಿ ಅನ್ನಪ್ರಸಾದ ಸೇವೆ ಮಾಡಿದರು.
ಇದೇ ವೇಳೆ ದಿವಂಗತ ಕು. ಶಿಲ್ಪಾ ಶೆಟ್ಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ವೈದ್ಯ ಮಿತ್ರರು ಅಭಿನಯಿಸಿದ ಉತ್ತಮ ನಟನೆಗೆ ಕಲಾವಿದರಿಗೆಲ್ಲ ಸಂಗಮೇಶ್ವರ ತೇಲ್ಲೂರು ಸನ್ಮಾನ ಮಾಡಿದರು.
ಡಾ. ಡಿ ಎನ್ ಧರಿ ವಂದಿಸಿದರು.


