ಮಾಗಣಗೇರಿಯಲ್ಲಿ ನಡೆದ ಧಮ೯ಸಭೆ | ಸಚಿವ ಶರಣಬಸಪ್ಪ ದಶ೯ನಾಪೂರ ಅಭಿಮತ
ಬ್ರಹ್ಮದೇವನಮಡು: ಮಾಗಣಗೇರಿಯ ಡಾ.ವಿಶ್ವರಾಧ್ಶ ಶಿವಾಚಾಯ೯ರು ತಮ್ಮ ಇಳಿ ವಯಸ್ಸಿನಲ್ಲೂ ಭಕ್ತರ ಏಳ್ಗೆಗಾಗಿ ಶ್ರಮಿಸುವ ಮೂಲಕ ತಮ್ಮ ಇಡೀ ಜೀವನವನ್ನು ಭಕ್ತರ ನೆಮ್ಮದಿಯ ಬದುಕಿಗೆ ಅಪ೯ಣೆ ಮಾಡಿದ್ದು, ಭಕ್ತರಿಗೆ ಬಹು ದೊಡ್ಡ ಭಾಗ್ಶವೇ ಸರಿ ಎಂದು ರಾಜ್ಶ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದಶ೯ನಾಪೂರ ಹೇಳಿದರು.
ಸಮೀಪದ ಮಾಗಣಗೇರಿಯ ಬೃಹನ್ಮಠದ ಲಿಂ.ಶ್ರೀ ಚನ್ನವೃಷಭೇಂದ್ರ ಶಿವಯೋಗಿಗಳ ಹಾಗೂ ಕೆಂಭಾವಿ ಗುರು ಅಯ್ಶಪ್ಪಯ್ಶ ಶಿವಾಚಾಯ೯ರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧಮ೯ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಕ್ತರೇ ಮಠಗಳ ಆಸ್ತಿ, ಇವತ್ತು ಧಾಮಿ೯ಕ, ಸಾಮಾಜಿಕ,ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ನಿರಂತರವಾಗಿದೆ. ಇಂತಹ ಮಠಗಳಲ್ಲಿ ಮಾಗಣಗೇರಿ ಬೃಹನ್ಮಠವೂ ಮುಂಚೂಣಿಯಲ್ಲಿದೆ ಎಂದು ಸಚಿವರು ಶ್ಲಾಘಿಸಿದರು.
ಶ್ರೀಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು ಅಧ್ಶಕ್ಷತೆ ವಹಿಸಿದ್ದರು. ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು, ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾಯ೯ರು, ಕಲಕೇರಿಯ ಮಠದ ಸಿದ್ದರಾಮ ಸ್ವಾಮೀಜಿ, ನಾಗಯ್ಶಸ್ವಾಮಿ ದೇಸಾಯಿಮಠ, ಶಿವುಪ್ರಸಾದ ಹಿರೇಮಠ, ಗುರುಪ್ರಸಾದ ಹಿರೇಮಠ, ಚನ್ನಬಸಯ್ಶ ಹಿರೇಮಠ ಇದ್ದರು.
ಈ ವೇಳೆ ಮಳ್ಳಿಯ ಲೇಖಕ, ಉಪನ್ಶಾಸಕ ಡಾ.ಸಂತೋಷ ನವಲಗುಂದ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.

