ಆಲಮೇಲ. ಕನ್ನಡ ಜಾನಪದ ಪರಿಷತ್ ಆಲಮೇಲ ತಾಲೂಕು ಘಟಕದ ಉದ್ಘಾಟನೆ ರವಿವಾರ ಜ. ೭ ರಂದು ತಾಲೂಕಿನ ಕಡಣಿ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ.
ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕಜಾಪ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಉದ್ಘಾಟಿಸುವರು. ಯುವ ಪ್ರಶಸ್ತಿ ಪುರಸ್ಕೃತರ ಸಂಘದ ರಾಷ್ಟ್ರೀಯ ಅಧ್ಯಕ್ಷ ನೂತನ ಪದಾಧಿಕಾರಿಗಳಿಗೆ ಪದಪತ್ರ ನೀಡುವರು, ಕಜಾಪ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ಅಧ್ಯಕ್ಷತೆ ವಹಿಸುವರು, ಕಜಾಪ ಜಿಲ್ಲಾ ಕಾರ್ಯದರ್ಶಿ ಡಾ.ರಮೇಶ ತೇಲಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ರಮೇಶ ಕತ್ತಿ, ಸರಕಾರಿ ನೌಕರರ ಸಂಘದ ಸಿಂದಗಿ ತಾಲೂಕಾಧ್ಯಕ್ಷ ಆರ್ ಜಿ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಆಲಮೇಲ ತಾಲೂಕಾಧ್ಯಕ್ಷ ಶಿವಶರಣ ಗುಂದಗಿ, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಸೈಯದ್ ದೇವರಮನಿ, ಕಡಣಿ ಗ್ರಾಂ ಪಂ ಅಧ್ಯಕ್ಷ ಬಸವಲಿಂಗಪ್ಪ ಕತ್ತಿ, ಗಣ್ಯರಾದ ಈರಯ್ಯ ಗಂಗೊಳ್ಳಿ, ಬಸವರಾಜ ತಾವರಗೇರಿ, ಗಂಗಾಧರ ಶ್ರೀಗಿರಿ, ಹಣಮಂತ್ರಾಯ ಕಳಸಗೊಂಡ, ಶಿವಣ್ಣಗೌಡ ಪಾಟೀಲ ಮತ್ತು ಆನಂದಗೌಡ ಬಿರಾದಾರ ಆಗಮಿಸುವರು.
ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಕಲಾವಿದರ ಸನ್ಮಾನ , ಜಾನಪದ ಕಲಾತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಕನ್ನಡ ಜಾನಪದ ಪರಿಷತ್ ಆಲಮೇಲ ನೂತನ ತಾಲೂಕಾಧ್ಯಕ್ಷ ಗಿರೀಶ ಕಂಬಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ತಾಲೂಕು ಘಟಕದ ನೂತನ ಪದಾಧಿಕಾರಿಗಳು*
ಷ ಬ್ರ ಚಂದ್ರಶೇಖರ ಶಿವಾಚಾರ್ಯರು ಹಿರೇಮಠ ಆಲಮೇಲ ( ಗೌರವಾಧ್ಯಕ್ಷರು), ಗಿರೀಶ ಕಂಬಾರ (ಅಧ್ಯಕ್ಷ), ಇಸ್ಮಾಯಿಲ್ ಮೋರಟಗಿ(ಖಜಾಂಚಿ), ಬಸವಂತ್ರಾಯ ಬಿರಾದಾರ (ಕಾರ್ಯದರ್ಶಿ), ಆನಂದ ಬಿರಾದಾರ ( ಸಂಘಟನಾ ಕಾರ್ಯದರ್ಶಿ), ಶರಣು ಬಮನಳ್ಳಿ (ಪತ್ರಿಕಾ ಕಾರ್ಯದರ್ಶಿ), ಮಶ್ಯಾಕ ಬಬಲಾದಿ (ಸಂಚಾಲಕ), ಗುಂಡು ಅಫಜಲಪುರ, ಪುಂಡಲೀಕ ಸುರಗಿಹಳ್ಳಿ, ಶರಣಬಸವ ಲಾಳಸಂಗಿ, ಮಹಾದೇವ ಮಾಳಗಿ, ಕಲ್ಲಪ್ಪ ಕೋರಳ್ಳಿ, ರಮೇಶ ಗೋಣಿ, ಶಿವನಗೌಡ ಹರಿಂದ್ರಾಳ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಪ್ರೊ.ಸಿದ್ರಾಮಪ್ಪ ತಾವರಖೇಡ ಅಧ್ಯಕ್ಷತೆಯಲ್ಲಿ ಹತ್ತು ಜನರ ಸಲಹಾ ಸಮಿತಿ ರಚಿಸಲಾಗಿದೆ.

