ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಯಿತು.
ಮೆಗಾ ಮಾರುಕಟ್ಟೆಯಲ್ಲಿ ಒಟ್ಟು ೧೩೩ ವಾಣಿಜ್ಯ ಮಳಿಗೆಗಳಿವೆ. ಈಗಾಗಲೇ ಕೆಲವು ವಾಣಿಜ್ಯ ಮಳಿಗೆಗಳು ಹಿಂದೆ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಪಡೆದುಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಂಭತ್ತು ಜನರು ಭಾಗಿಯಾಗಿದ್ದರು. ನಾಲ್ಕು ಜನರು ವಾಣಿಜ್ಯ ಮಳಿಗೆಗಳನ್ನು ಪಡೆದುಕೊಂಡರು.
ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಅಧಿಕಾರಿಗಳಿಂದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ನಾಳೆ ಭಾನುವಾರ ಸರ್ಕಾರಿ ರಜಾ ದಿನವಾಗಿರುವದರಿಂದ ಬ್ಯಾಂಕು ರಜೆ ಇರುವದರಿಂದಾಗಿ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಠೇವಣಿ ಇಡಲು ತೊಂದರೆಯಾಗುವದರಿಂದಾಗಿ ಸೋಮವಾರ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಠೇವಣಿ ಮೊತ್ತ ೪೪,೪೦,೦೦೦ರೂ. ಆಗಿದೆ. ಇನ್ನೂ ೯೪ ವಾಣಿಜ್ಯ ಮಳಿಗೆಗಳು ಉಳಿದುಕೊಂಡಿವೆ. ಸೋಮವಾರ ನಡೆಯುವ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ವ್ಯಾಪಾರಸ್ಥರು ಭಾಗಿಯಾಗಿ ವಾಣಿಜ್ಯ ಮಳಿಗೆಗಳನ್ನು ಪಡೆದುಕೊಳ್ಳಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಮಾಹಿತಿ ನೀಡಿದರು.
ಇಂದು ಜರುಗಿದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಗಿ, ಪುರಸಭೆ ಅಭಿಯಂತರರಾದ ಮಹಾದೇವ ಜಂಬಗಿ, ಸಂತೋಷ ಗಿಡ್ಡಸಣ್ಣನವರ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ರಾಠೋಡ, ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ,ಪುರಸಭೆ ಕಂದಾಯ ನಿರೀಕ್ಷಕ ಗೀತಾಂಜಲಿ ದಾಸರ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಕರ ವಸೂಲಿಗಾರ ರಾಜು ರಾಠೋಡ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

