Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ) ಯಲ್ಲಿ ಜೂನ್ 6 ರಂದು ಶನಿವಾರ ಅಪ್ರೆಂಟಿಸ್‌ಶಿಪ್‌ಗಾಗಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ.ಶನಿವಾರ ಬೆಳಿಗ್ಗೆ 9.30 ಗಂಟೆಗೆ ಟೋಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ (ಟಿಐಇಐ) ಅವರು ಈ ಸಂದರ್ಶನ ನಡೆಸಲಿದ್ದು, ಐಟಿಐ ಪಾಸಾದ ಮತ್ತು ಐಟಿಐ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆವಿಜಯಪುರ ಜಿಲ್ಲೆಯಲ್ಲಿ ಬರುವ ಎಲ್ಲ ಐಟಿಐ ತರಬೇತಿದಾರರು ಎರಡು ಭಾವಚಿತ್ರ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಈ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ತರಬೇತಿ ಕೇಂದ್ರದ ಪ್ರಾಚಾರ್ಯ ಎಂ. ಡಿ. ಪಡಸಲಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964658059 ಮತ್ತು 9916853605 ಸಂಪರ್ಕಿಸಬಹುದಾಗಿದೆ.
ಉದಯರಶ್ಮಿ ದಿನಪತ್ರಿಕೆ ಹಂಪಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ ವಾಸುದೇವ ಬಡಿಗೇರ ಅವರ ದೇವರ ದಾಸಿಮಯ್ಯನವರ ಮರು ಚಿಂತನೆ ವಿಷಯ ನಿಜಕ್ಕೂ ಅರ್ಥರಹಿತ ಪೂರ್ವಾಗ್ರಹಪೀಡಿತ ವಿಚಾರಗಳೇ ಹೊರತು ಅವರ ಯಾವ ವಿಚಾರಗಳು ಸತ್ಯದ ನಿಲುವಿಗೆ ನಿಲ್ಲುವುದಿಲ್ಲ.ಇನ್ನು ಮೈಸೂರಿನ ಪ್ರೊ ವಸಂತಕುಮಾರ ಅವರು ಇದೆ ರಾಗದ ಪುನರಾವರ್ತನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದು ಹಂಚಿಕೊಂಡಿದ್ದಾರೆಓತಿಕ್ಯಾತಕ್ಕೆ ಬೇಲಿ ಸಾಕ್ಷಿ ಎನ್ನುವ ಹಾಗಿದೆ ಎಂದು ಪುಣೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ (ರಾಮದುರ್ಗ) ಕಟುವಾಗಿ ಟೀಕಿಸಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಡಾ ಏಚ್ ದೇವೀರಪ್ಪ, ಡಾ ತಿಪ್ಪೇರುದ್ರಸ್ವಾಮಿ, ಡಾ ಎಂ ಚಿದಾನಂದ ಮೂರ್ತಿ, ಡಾ ವೃಷಭೇಂದ್ರಸ್ವಾಮಿ, ಡಾ ಎಂ ಎಂ ಕಲಬುರ್ಗಿ, ಪ್ರೊ ವಿದ್ಯಾಶಂಕರ, ಡಾ ವೀರಣ್ಣ ರಾಜೂರ, ಡಾ ವೀರಣ್ಣ ದಂಡೆ, ಡಾ ಜಯಶ್ರೀ ದಂಡೆ, ಪ್ರೊ. ಬಿ ಆರ್ ಪೊಲೀಸ ಪಾಟಿಲ, ಪ್ರೊ…
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮತ್ತು ಪದಾಧಿಕಾರಿಗಳಿಂದ ಸ್ವಾಗತ ಉದಯರಶ್ಮಿ ದಿನಪತ್ರಿಕೆ ಕಲಬುರಗಿ: ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಕಠಿಣ ಷರತ್ತುಗಳನ್ನು ತೆಗೆದು, ನಿಯಮಾವಳಿ ಸರಳೀಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಒತ್ತಾಯಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಕಠಿಣ ಷರತ್ತುಗಳನ್ನು ಕೈಬಿಡುವುದಾಗಿ ಭರವಸೆ ನೀಡಿದ್ದರು.ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಕೆಯುಡಬ್ಲ್ಯೂಜೆ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಈ ಬಗ್ಗೆ ವಾರದೊಳಗೆ ಕ್ರಮ ವಹಿಸುವುದಾಗಿ ತಿಳಿಸಿದ್ದರು. ಸಿಎಂ ಸೂಚನೆ ಮೇರೆಗೆ ಹೊಸ ಆದೇಶ ಹೊರಬಿದ್ದಿದೆ.ಪೂರ್ಣಾವಧಿಗೆ ಸೀಮಿತವಾಗಿದ್ದನ್ನು ಬದಲಿಸಿ, ಅರೆಕಾಲಿಕ ವರದಿಗಾರರಿಗೂ ಯೋಜನೆ ವಿಸ್ತರಿಸಲಾಗಿದೆ.ಸೌಲಭ್ಯ ಪಡೆಯಲು 11 ತಿಂಗಳ ಲೈನೇಜ್ ಪಡೆದಿರುವ ಬ್ಯಾಂಕ್ ಸ್ಟೇಟ್ ಮೆಂಟ್ ಕಡ್ಡಾಯವಾಗಿದ್ದನ್ನು ಷರತ್ತಿನಲ್ಲಿ ಕೈಬಿಡಲಾಗಿದೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸತತ ಹೋರಾಟಕ್ಕೆ ಸ್ಪಂಧಿಸಿ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಬೂಟ್, ಷೂ ಸೇರಿದಂತೆ ಪಠ್ಯಪುಸ್ತಕ ಉಚಿತವಾಗಿ ವಿತರಿಸುತ್ತಿದೆ. ಆದ್ದರಿಂದ ಪಾಲಕರು ಖಾಸಗಿ ಶಾಲೆಯ ವ್ಯಾಮೋಹಕ್ಕೆ ಒಳಗಾಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು’ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ಹಣಮಂತ ಶೆಟ್ಟೆನ್ನವರ ಮನವಿ ಮಾಡಿದರು.ತಾಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಉಪ್ಪಾರ ತೋಟದಲ್ಲಿ ಮುಖ್ಯದ್ವಾರದ ಬಳಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೂಗಳನ್ನು ಹಾಕುವುದರ ಮೂಲಕ ಮತ್ತು ಕೈಯಲ್ಲಿ ಗುಲಾಬಿ ಹೂ ನೀಡುವುದರ ಮೂಲಕ ಮುಗುಳ್ನಗೆಯಿಂದ ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಬರಮಾಡಿಕೊಂಡರು. ನಂತರ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.ನಂತರ ಮುಖ್ಯೋಪಾಧ್ಯಾಯರಾದ ಕಾಶಿನಾಥ್ ಜಾಧವ ಮಾತನಾಡಿ, ನಿರಂತರ ಅಧ್ಯಯನ, ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ. ಉನ್ನತ ಶಿಕ್ಷಣದ ಜೊತೆಗೆ ಉನ್ನತ ಹುದ್ದೆಯನ್ನು ಅಲಂಕರಿಸುವತ್ತ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಿರಿಯರಾದ…
ಬಿಡದಿ ಟೌನ್ ಶಿಪ್, ಶರಾವತಿ ಪಂಪ್ಡ್ ಸ್ಟೋರೇಜ್, ಕ್ರಿಕೆಟ್ ಸ್ಟೇಡಿಯಂ ಯೋಜನೆ ಕೈಬಿಡದಿದ್ದರೆ ಹೋರಾಟ ನಿಶ್ಚಿತ :ಶಾಸಕ ಯತ್ನಾಳ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ಮರಣ ಶಾಸನ ಆಗಲಿರುವ ಬಿಡದಿ ಟೌನ್ ಶಿಪ್ ಯೋಜನೆ, ಪಶ್ಚಿಮ ಘಟ್ಟಗಳಿಗೆ ಮಾರಕವಾಗಲಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ಆನೇಕಲ್ ನ ಫಲವತ್ತಾದ ಭೂಮಿಯಲ್ಲಿ ಬರುತ್ತಿರುವ ಕ್ರಿಕೆಟ್ ಸ್ಟೇಡಿಯಂ ಯೋಜನೆಗಳನ್ನು ಮುಂಬರುವ ಸಂಪುಟ ಸಭೆಯಲ್ಲಿ ರದ್ದುಗೊಳಿಸದಿದ್ದರೆ, ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ರಿಯಲ್ ಎಸ್ಟೇಟ್ ಲಾಬಿಗೆ, ಬಂಡವಾಳಶಾಹಿಗಳ ಒತ್ತಡಕ್ಕೆ ಶರಣಾಗಿರುವ ಸರ್ಕಾರ ಒತ್ತಾಯಪೂರ್ವಕವಾಗಿ ರೈತರ ಜಮೀನನ್ನು ಪಡೆಯುತ್ತಿರುವುದು ಖಂಡನೀಯ. ರೇಷ್ಮೆ, ಮಾವು, ಅಡಿಕೆ, ಬಾಳೆ, ತರಕಾರಿ, ಹಲಸು, ಪೇರಳೆ ಹೀಗೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿರುವ ಬಿಡದಿಯ ರೈತರು ಸಮೃದ್ಧರಾಗಿದ್ದರೆ. ಸುಮಾರು 6500 ಎಕರೆಯ ಅತ್ಯಂತ ಫಲವತ್ತಾದ, ನೀರಾವರಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಸ್ವಾಧೀನಪಡೆಸಿಕೊಳ್ಳುತ್ತಿರುವ ಸರ್ಕಾರದ ಕ್ರಮ ಅತಾರ್ಕಿಕವಾದದ್ದು.ಕೃಷಿಗೆ ಯೋಗ್ಯವಲ್ಲದ…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಆಡಂ ಹಾರ್ಟ-ಡೇವಿಸ್ ಅವರು, “ಸೈಕಲ್ ಎಂದರೆ ಮನುಷ್ಯನ ಪಾರಂಪರಿಕ-ಸಾಂಪ್ರದಾಯಿಕ ಮತ್ತು ಅತ್ಯಂತ ಸುಲಭ ಮತ್ತು ಅಗ್ಗದ ಸಾರಿಗೆಯ ಸಾಧನ.ಸೈಕಲ್ ತುಳಿಯುವುದರಿಂದ ನಿಮ್ಮ ದೇಹಕ್ಕೆ ಕಸರತ್ತು ಮತ್ತು ವ್ಯಾಯಾಮ ನೀಡುವ ಸವಾರಿಯಾಗಿದೆ” ಎಂದು ಹೇಳಿದ್ದಾರೆ. ಸೈಕಲ್ ಸವಾರಿ ಎಂದರೆ ಕೇವಲ ವ್ಯಾಯಾಮವಲ್ಲ. ಅದು ನಮ್ಮ ದೇಹ ಮತ್ತು ಮನಸ್ಸಿಗೆ ನವ ಚೈತನ್ಯವನ್ನು ನೀಡುವ ಒಂದು ಸಾಧನ. ನಾವು ಬಾಲ್ಯದಲ್ಲಿದ್ದಾಗ ಒಡನಾಡಿ ಇದ್ದಂತೆ. ಇದರಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯಲು, ಆರೋಗ್ಯವನ್ನು ಕಾಪಾಡಲು ಮತ್ತು ಪರಿಸರವನ್ನು ಸಂರಕ್ಷಿಸಲು ಸಹಕಾರಿಯಾಗಿದೆ. ನಮ್ಮ ಪಾರಂಪರಿಕ-ಸಾಂಪ್ರದಾಯಿಕ ವಾಹನವಾದ ಈ ಸೈಕಲ್ ಅನ್ನು ಬಳಸಿ, ಮುಗಿದು ಹೋಗುತ್ತಿರುವ ಇಂಧನವನ್ನು ಉಳಿಸಿ. ನಾವು ಸಣ್ಣವರಿದ್ದಾಗ ಗೆಳೆಯರೊಂದಿಗೆ ಜೊತೆಗೂಡಿ ಸೈಕಲ್ ಸವಾರಿ ಮಾಡುತ್ತಾ ನಾ ಮುಂದು ತಾ ಮುಂದು ಎಂದು ಸ್ಪರ್ಧೆಗಿಳಿಯುತ್ತಿದ್ದ ಸಂದರ್ಭಗಳು ನೆನೆಪಿಗೆ ಬಂದರೆ ಮನಸ್ಸಿಗೆ ಆಹ್ಲಾದಕರವೆನಿಸುತ್ತದೆ. ಸೈಕಲ್ ಒಂದು ವ್ಯಕ್ತಿ ಚಾಲಿತ ವಾಹನವಾಗಿದ್ದು, ಮಾನವನಿಗೆ ದೈಹಿಕ ಕಸರತ್ತು ನೀಡಬಲ್ಲ ಸಾಧನ. ಯಾವುದೇ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಕೋರಿ ಸೋಮವಾರ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರ ಮುಖಾಂತರ ಸರಕಾರಕ್ಕೆ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು .ಇಂಡಿ ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ರ್ಯಾಲಿ ಪ್ರಾರಂಭಿಸಿ ಬಸವೇಶ್ವರ ವೃತ್ತದ ಮೂಲಕ ತಾಲ್ಲೂಕು ಆಡಳಿತ ಸೌಧಕ್ಕೆ ತಲುಪಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಯುವ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಿ ಡಿ ಇನಾಮದಾರ ಮಾತನಾಡಿ, ಭಾರತ ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಪ್ರತಿಯೊಂದು ಜೀವಿಗೂ, ಪ್ರಕೃತಿಗೂ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಅದರಲ್ಲಿಯೂ ಮುಖ್ಯವಾಗಿ ಗೋವು (ಹಸು) ಭಾರತೀಯ ಸಂಸ್ಕೃತಿ, ಕೃಷಿ ಪ್ರಧಾನ ಆರ್ಥಿಕತೆ ಮತ್ತು ಕೋಟ್ಯಂತರ ಜನರ ಭಾವನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದೆ. ಶಾಂತಿ, ಕರುಣೆ ಮತ್ತು ಪೋಷಣೆಯ ಸಂಕೇತವಾಗಿರುವ ಹಸುವನ್ನು ಭಾರತದ ‘ರಾಷ್ಟ್ರ,…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: 2004-05 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಂದ ಗುರು ನಮನ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಬಾಬಾನಗರದಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಲ್. ಇಂಗಳೇಶ್ವರ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯೆ ಶಿಕ್ಷಕರ ಆಶಯ ಆಗಿರುತ್ತದೆ ಎಂದರು.ಉಪನ್ಯಾಸ ಸಿ. ಎಸ್. ಪೂಜಾರಿ ಮಾತನಾಡಿ ಮಕ್ಕಳ ಪ್ರೀತಿ,ವಿಶ್ವಾಸ ನೋಡಿ ಶಿಕ್ಷಕನಾಗಿರುವುದು ಸಾರ್ಥಕವಾಯಿತು. ಶಿಕ್ಷಕನ ನಿಜವಾದ ಧರ್ಮ ಜಾತಿಯಲ್ಲ ಶಿಕ್ಷಣ ಎಂದರು.ಮುಖ್ಯೋಪಾದ್ಯಾಯ ಎಸ್. ಬಿ. ಬಿರಾದಾರ ಮಾತನಾಡಿದರು.ವಾಣಿಜ್ಯ ತೆರಿಗೆ ಅಧಿಕಾರಿಗ ಸಿ. ಎಸ್. ಹಡಪದ, ಮುಖ್ಯೋಪಾಧ್ಯಾಯ ಸಿ .ಆರ್. ಝೆಂಡೆ, ಕಮಲಾ ಹಂಡಿ ಮಾತನಾಡಿದರು. ಅಕಾಲಿಕ ನಿಧನ ಹೊಂದಿದ ಶಿಕ್ಷಕರಿಗೆ ಮೌನ ಆಚರಿಸಿ ಸ್ಮರಿಸಲಾಯಿತು.ಎಲ್ಲರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಸಾನಿಧ್ಯವನ್ನು ಬಾಬಾನಗರ ಹಿರೇಮಠದ ರಾಚಯ್ಯ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಬಿ.ಜಿ ಸಜ್ಜನ್ ವಹಿಸಿದ್ದರು.ಎಸ್. ಜಿ. ಪುಕಾಳೆ, ಎನ್. ಸಿ. ಶರ್ಮಾ,ಎನ್. ಎ.ಸ್ ಜೊಳ್ಳಿ , ಎಚ್. ಎಲ್. ಪಾಂಡುಗೋಳ, ಗೀತಾ ಪಾಟೀಲ, ಜಿ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಜೂನ್ ೩ ರಂದು ವಿಶ್ವ ಬೈಸಿಕಲ್ ದಿನ ಆಚರಣೆ ಹಿನ್ನೆಲೆಯಲ್ಲಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೭ ಗಂಟೆಗೆ ಸೈಕಲ್ ಜಾಥಾವು ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಿAದ ಆರಂಭವಾಗಿ, ಗೋಲಗುಂಬಜ, ಗಗನಮಹಲ್, ವೀರರಾಣಿ ಕಿತ್ತೂರ ರಾಣಿ ಚನ್ನಮ್ಮ ಕೇಂದ್ರ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ಗಾಂಧಿಚೌಕ್, ಶಿವಾಜಿ ಸರ್ಕಲ್,ವಾಟರ್ ಟ್ಯಾಂಕ್, ಇಬ್ರಾಹಿಂ ರೋಜಾ, ಗೋದಾವರಿ ಮಾರ್ಗವಾಗಿ ವಾಟರ್ ಟ್ಯಾಂಕ್, ಬಿ.ಎಲ್.ಡಿ.ಇ ಮುಖ್ಯ ಗೇಟ್, ಹಾಸ್ಪಿಟಲ್ ಗೇಟ್, ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ್ ಮಾರ್ಗವಾಗಿ ಸಾಗಿ ಪುನಃ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಅಗಮಿಸಿ ಮುಕ್ತಾಯಗೊಳ್ಳಲಿದೆ. ಸಾರ್ವಜನಿಕರು, ಯುವಕರು ಹಾಗೂ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೈಕಲ್ ಜಾಥಾವನ್ನು ಯಶಸ್ವಿಗೊಳಿಸುವಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
