Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲೆಯು ಆನೇಕಾಲು ರೋಗದಿಂದ ಮುಕ್ತವಾಗಬೇಕಾದರೆ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮದಲಿ ಎಲ್ಲರೂ ಕಡ್ಡಾಯವಾಗಿ ಮಾತ್ರೆಗಳನ್ನು ಸೇವಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು.ಮಂಗಳವಾರ ಸಾಮೂಹಿಕ ಔಷಧ ಸೇವನೆಯ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಆರೋಗ್ಯ ಶಿಕ್ಷಣ ಸಾಮಗ್ರಿಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯ ಆನೆಕಾಲು ರೋಗ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಜಿಲ್ಲೆಯ ಸಿಂದಗಿ ತಾಲೂಕಿನ ಹಾಗೂ ಮುದ್ದೇಬಿಹಾಳ ತಾಲೂಕಿನ ಜನವರಿ ೧೮ರಿಂದ ೨ ವರ್ಷ ಮೇಲ್ಪಟ್ಟ ಅಂಗನವಾಡಿ ಮಕ್ಕಳು,ಪ್ರಾಥಮಿಕ,ಪ್ರೌಢಶಾಲೆ,ಪದವಿಪೂರ್ವ ಹಾಗೂ ಪದವಿ ಕಾಲೇಜಿಗಳ ವಿದ್ಯಾರ್ಥಿಗಳಿಗೆ ಹಾಗೂ ಫೆಬ್ರವರಿ ೧೦ ರಿಂದ ಫೆ.೨೯ರವರೆಗೆ ಸಮೂಹದಲ್ಲಿ ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಈ ರೋಗ ಶೂನ್ಯಕ್ಕೆ ತರಲು ಕ್ರಮವಹಿಸಬೇಕು. ಜಿಲ್ಲೆಯ ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಎರಡು ವಲಯಗಳನ್ನು ಆನೆಕಾಲು ರೋಗ ಮುಕ್ತ ತಾಲೂಕು ಮಾಡಲು ಕಡ್ಡಾಯವಾಗಿ…
– ಇಲಾಹಿ ಇ. ಜಮಖಂಡಿ ಚಿಮ್ಮಡ: ಆಧುನಿಕತೆಯ ಭರಾಟೆ ನಡುವೆಯೂ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಂಕ್ರಾಂತಿ ಎಂದೇ ಕರೆಯಲ್ಪಡುವ ಮಕರ ಸಂಕ್ರಮಣವನ್ನು ಈ ಭಾಗದಲ್ಲಿ ಸೋಮವಾರ ಮತ್ತು ಮಂಗಳವಾರ ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು.ಸೂರ್ಯದೇವನು ತನ್ನ ಪಥ ಬದಲಾಯಿಸಿ ಒಂದು ರಾಶಿಯಿಂದ ಮತ್ತೊಂದು ರಾಶಿಯತ್ತ ತನ್ನ ಕಿರಣ ಬೀರುತ್ತಾನೆ. ದಕ್ಷಿಣ ದಿಕ್ಕಿನಿಂದ ಉತ್ತರದ ಕಡೆಗೆ ಅರ್ದ ವರ್ಷ ಪಯಣ ಮಾಡಿ ಮಕರ ರಾಶಿಗೆ ಆಗಮಿಸುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಈ ಸಮಯದಲ್ಲಿ ರೈತಾಪಿ ಜನರ ಸುಗ್ಗಿಕಾಲವಾಗಿದ್ದು ಸುಗ್ಗಿಯನ್ನು ಮುಕಾಯಗೊಳಿಸಿ ಭುವಿಯನ್ನು ಸೂರ್ಯನ ಒಡಲಿಗೆ ಹರಿಬಿಟ್ಟು ವಿವಿಧ ಬಣ್ಣ ವಸ್ತುಗಳಿಂದ ಶೃಂಗರಿಸಿದ ಎತ್ತಿನ ಬಂಡಿ ಹೂಡಿಕೊಂಡು ಇಡೀ ಕುಟುಂಬದೊಂದಿಗೆ ತಮ್ಮ ನಂಬಿಕೆಯ ದೇವರ ದರ್ಶನ ಮಾಡಿಕೊಂಡು ಕರೀ ದಿನವಾದ ಮಂಗಳವಾರ ನದೀ ತೀರಕ್ಕೆ ಹೋಗಿ ವಿಶೇಷ ಅಡುಗೆ ತಯಾರಿಸಿಕೊಂಡು ಕುಟುಂಬದೊಂದಿಗೆ ಊಟಮಾಡಿ ಜಲ ಚರಗಳಿಗೂ ಉಣಬಡಿಸಿ ಇಡೀದಿನ ಪ್ರಕೃತಿ ಮಡಿಲಲ್ಲಿ ಕಳೆಯುವ ಪಧ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ಅದರಂತೆ ಸೋಮವಾರವೂ ಈ ಭಾಗದ…
ತಾಳಿಕೋಟಿ: ತಾಲೂಕಿನ ಮೂಕಿಹಾಳ ಗ್ರಾಮದ ಹಜರತ್ ಲಾಡ್ಲೆ ಮಶ್ಯಾಕ ದರ್ಗಾ ಉರುಸು ಪ್ರಯುಕ್ತ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ಹಜರತ್ ಲಾಡ್ಲೆ ಮಶ್ಯಾಕ ದರ್ಗಾ ಕಮೀಟ ಸಹಯೋಗದಲ್ಲಿ ಜ.೧೮ ಗುರುವಾರ ದಿವಸ ” ಜಿಲ್ಲಾ ಮಟ್ಟದ ಜಾನಪದ ಸಮಾವೇಶ ” ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ತಿಳಿಸಿದ್ದಾರೆ.ಮೂಕಿಹಾಳ ಗ್ರಾಮದ ದರ್ಗಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಬೆಳಿಗ್ಗೆ ೧೧ ಘಂಟೆಗೆ ಹಿರೂರ ಪಡೇಕನೂರ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ದಾವಲಮಲೀಕ ಅಜ್ಜನವರ ಸಾನಿಧ್ಯದಲ್ಲಿ , ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಸಮಾವೇಶ ಉದ್ಘಾಟಿಸುವರು. ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಕಲಾವಿದರನ್ನು ಸನ್ಮಾನಿಸುವರು. ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಹಿತಿ…
ಮುದ್ದೇಬಿಹಾಳ: ಡೆಲೆವರಿ ವೃತ್ತಿಯಲ್ಲಿ ತೋಡಗಿಕೊಂಡಿರುವ ಅಸಂಘಟಿತ ವಲಯದ ಕಾರ್ಮಿಕರು ಗಿಗ್ ಕಾರ್ಮಿಕರ ವಿಮಾ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಕಾರ್ಮಿಕ ನೀರಿಕ್ಷಕ ಐ.ಎಚ್.ಇನಾಮದಾರ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದಲ್ಲಿಯೇ ಮೋದಲ ಬಾರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ೧೮ ರಿಂದ ೬೦ ವರ್ಷದ ಒಳಗಿನವರು ಸೇವಾ ಸಿಂಧು ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಕರ್ತವ್ಯದಲ್ಲಿರುವಾಗ ಮತ್ತು ಇಲ್ಲದಿರುವಾಗ ಅಪಘಾತಗಳು ಸಂಭವಿಸಿದರೆ ೨ ಲಕ್ಷಗಳ ವಿಮಾ ಪರಿಹಾರ ಸಿಗಲಿದ್ದು, ಆಧಾರ ಕಾರ್ಡ, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ, ವೇತನ ಪಡೆದ ಬ್ಯಾಂಕ ಪಾಸ್ ಬುಕ್ ಮತ್ತು ಇ-ಶ್ರಮ್ ನೋಂದಣಿ ಸಂಖ್ಯೆಯೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.ದಿನ ಪತ್ರಿಕೆಗಳನ್ನು ಮನೆ, ಮನೆಗೆ ವಿತರಿಸುವ ವಿತರಕರು ಸೇರಿದಂತೆ ಅಮೇಜಾನ, ಸ್ವೀಗ್ಗಿ, ಜೋಮ್ಯಾಟೊ, ಪೋರ್ಟರ್, ಪಾರ್ಮಸಿ, ಬಲಿಂಕಿಟ್, ಜಿಪ್ಪೋ, ಬಿಗ್ ಬಾಸ್ಕೆಟ್, ಡಾಮಿನೋಸ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೋಡಗಿಸಿಕೋಂಡವರೂ ಸಹ ಈ ಯೋಜನೆಯ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ಲೊಟಗೇರಿ ಗ್ರಾಮದ ಸಮುದಾಯ ಭವನದ ಮುಂದೆ ಕುಳಿತು ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ೭ ಜನರ ಮೇಲೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದಾರೆ.ಲೊಟಗೇರಿ ಗ್ರಾಮದ ಸಂಗಪ್ಪ ಬಿರಾದಾರ, ಹುಲಗಪ್ಪ ಕೊಳ್ಳಿ, ಹಣಮಂತ ಕೊಳ್ಳಿ, ತಿಮ್ಮಣ್ಣ ಬಿರಾದಾರ, ಲಕ್ಕಪ್ಪ ನಾಗರಬೆಟ್ಟ, ಬಿಜ್ಜೂರ ಗ್ರಾಮದ ಶಿವಪುತ್ರ ಚಾಕರಿ ಮತ್ತು ಘಾಳಪೂಜಿ ಗ್ರಾಮದ ಚೆನ್ನಪ್ಪ ನಾಗರಬೆಟ್ಟ ಮೇಲೆ ಕೇಸ್ ದಾಖಲಾಗಿದೆ.
– ಸಂಪದಾ ಹಿರೇಮಠಆಲಮಟ್ಟಿ: ಹೊಸವರ್ಷದ ಪ್ರಥಮ ಹಬ್ಬವೆಂದೇ ಕರೆಯಲಾಗುತ್ತಿರುವ ಎಳ್ಳ ಅಮವಾಸ್ಯೆಯ ಮಕರ ಸಂಕ್ರಮಣ ದಿನವಾದ ಸೋಮವಾರ ಮುಂಜಾನೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಆಲಮಟ್ಟಿಗೆ ಆಗಮಿಸಿ ಕೃಷ್ಣೆಯ ಎಡ ಮತ್ತು ಬಲಬದಿಗಳಲ್ಲಿ ಪವಿತ್ರ ಸ್ನಾನ ಮಾಡುತ್ತಿರುವುದು ವಿಶೇಷವಾಗಿತ್ತು.ಮಕರಸಂಕ್ರಮಣದ ದಿನದಂದು ಸೂರ್ಯನು ತನ್ನ ಪಥವನ್ನು ಬದಲಾಯಿಸಿ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ವಾಲುತ್ತಾನೆ. ಈ ದಿನದಂದು ಪವಿತ್ರ ಕೃಷ್ಣೆಯಲ್ಲಿ ಎಳ್ಳು ಮೈಗೆ ಹಚ್ಚಿಕೊಂಡು ಮಿಂದೆದ್ದು ಉಳಿದವರಿಗೂ ಎಳ್ಳನ್ನು ಹಂಚಿ ದೇವಸ್ಥಾನಗಳಿಗೆ ತೆರಳಿ ದೇವರುಗಳ ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಲಿಂಗಭೆದವಿಲ್ಲದೇ ಶಾಸ್ತ್ರಿ ಜಲಾಶಯದ ಹಿನ್ನೀರು ಹಾಗೂ ಮುನ್ನೀರು ಪ್ರದೇಶಗಳಾಗಿರುವ ಪಾರ್ವತಿ ಕಟ್ಟೆ ಸೇತುವೆ ಕೆಳಭಾಗ, ಚಂದ್ರಮ್ಮಾದೇವಿ ದೇವಸ್ಥಾನದ ಬಳಿ, ಕೃಷ್ಣಾ ಸೇತುವೆಗಳ ಕೆಳಭಾಗದಲ್ಲಿ, ಸೀತಿಮನಿ, ಮನಹಳ್ಳಿ, ಯಲಗೂರ, ಯಲ್ಲಮ್ಮನ ಬೂದಿಹಾಳಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪವಿತ್ರ ಸ್ನಾನ ಮಾಡಿದರು.*ಸ್ಥಳಾಭಾವ:* ದೂರದ ಊರುಗಳಿಂದ ಆಗಮಿಸಿದ್ದ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್‌ನಲ್ಲಿ ಸ್ಥಳಾವಕಾಶ ಸಿಗದೇ…
ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಶಾಸಕ ಬಸನಗೌಡ ಯತ್ನಾಳ ಅಭಿಮತ ವಿಜಯಪುರ: ವೈಜ್ಞಾನಿಕ ಕಾರಣಗಳಿಂದಲೇ ಋಷಿಮುನಿಗಳು, ಹಿರಿಯರು ಆಕಳನ್ನು ಗೋಮಾತೆ ಅಂದಿದ್ದಾರೆ. ಜೋಳ ಬೆಳೆಯುವುದು ಕಡಿಮೆ ಆಗಿದ್ದರಿಂದ, ಕ್ರಮೇಣ ಗೋ ಸಂಪತ್ತು ಕಡಿಮೆ ಆಗುತ್ತಿದ್ದು, ಮುಂದಿನ ಅಧಿವೇಶನದಲ್ಲಿ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ, ಕ್ವಿಂಟಲ್ ಗೆ ರೂ.5 ಸಾವಿರ ನಿಗದಿಪಡಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಹೇಳಿದರು.ನಗರ ಮತಕ್ಷೇತ್ರ ವ್ಯಾಪ್ತಿಯ ತೊರವಿ ಸಮೀಪ ಸಿದ್ದೇಶ್ವರ ಸಂಕ್ರಮಣ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರಾ ಮಹೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ ಗಣತಿ ಪ್ರಕಾರ 120 ಕೋಟಿ ಪಶು ಸಂಪತ್ತು ಇತ್ತು. ಆಗ ಜನಸಂಖ್ಯೆ ಕೇವಲ 35 ಕೋಟಿ ಇದ್ದರೆ, ಇಂದು 150 ಕೋಟಿ ನಾವುಗಳಿದ್ದರೆ, 25 ಕೋಟಿಗೆ ಅವು ಬಂದಿವೆ. ಮೇವಿನ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಜೋಳ ಬೆಳೆದರೆ ಕಣಕಿ ಸಿಗುತ್ತದೆ, ಅದರಿಂದ ದನಗಳನ್ನು ಸಾಕಬಹುದು. ದನಗಳಿದ್ದರೆ…
ದೇವರಹಿಪ್ಪರಗಿ: ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಆರ್.ಎಸ್.ಪಾಟೀಲ(ಕುಚಬಾಳ) ಎರಡನೆಯ ಬಾರಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಸೇರಿದ ಕಾರ್ಯಕರ್ತರು ನೂತನ ಅಧ್ಯಕ್ಷರ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ ಮಾತನಾಡಿ, ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಜಿಲ್ಲೆಯಲ್ಲಿ ಮತ್ತೆ ಜಯಭೇರಿ ಭಾರಿಸಿ ನೆಚ್ಚಿನ ಪ್ರಧಾನಿ ಮೋದಿಯವರ ಕೈ ಬಲಪಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವೆಲ್ಲ ಕಾರ್ಯಕರ್ತರು ನೂತನ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸೋಣ ಹಾಗೂ ಮುನ್ನಡೆಸೋಣ ಎಂದರು.ಯುವಮೋರ್ಚಾ ಜಿಲ್ಲಾ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಶಿವರಾಜ ತಳವಾರ, ಸೋಮು ದೇವೂರ, ಮಹಾಂತೇಶ ಗುಡಿಮನಿ, ಚಂದ್ರಶೇಖರ ದಾನಗೊಂಡ, ಕಾಶೀನಾಥ ಚವ್ಹಾಣ, ಸಾಹೇಬಗೌಡ ಬಿರಾದಾರ, ಪರಮಾನಂದ ಹಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.
ದೇವರಹಿಪ್ಪರಗಿ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಸವ ಶರಣ ಸಂಗಮ ಸೇವಾ ಸಮೀತಿಯಿಂದ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಪರಿಷತ್ ಹಾಗೂ ಸೇವಾ ಸಮೀತಿಯ ಪದಾಧಿಕಾರಿಗಳು ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಸವಶರಣ ಸಂಗಮ ಸಮೀತಿಯ ತಾಲ್ಲೂಕು ಅಧ್ಯಕ್ಷ ಸಂಗಪ್ಪಣ್ಣ ತಡವಲ್ ಮಾತನಾಡಿ, ಸಿದ್ಧರಾಮೇಶ್ವರರು ಶ್ರೀಶೈಲ ಮಲ್ಲಿಕಾರ್ಜುನನ ಒಬ್ಬ ಮಹಾನ್ ಭಕ್ತರಾಗಿದ್ದರು. ಅನುಭವ ಮಂಟಪದ ಗೋಷ್ಠಿಯಲ್ಲಿ ಭಾಗವಹಿಸಿ ಮಹಾಶಿವಯೋಗಿ ಎನಿಸಿಕೊಂಡರು ಎಂದು ಮಾಹಿತಿ ನೀಡಿದರು.ಶಿಕ್ಷಕ ಪ್ರಲ್ಹಾದ್ ಕುಲಕರ್ಣಿ ಮಾತನಾಡಿ, ೧೨ನೇ ಶತಮಾನದ ಶಿವಶರಣರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.ತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಶಾಲೆಯ ಮುಖ್ಯಗುರು ಪಿ.ಸಿ.ತಳಕೇರಿ, ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ಸೋಮು ದೇವೂರ, ಸಂಗಮೇಶ ಕೆರೆಪ್ಪಗೋಳ, ನಾಗಯ್ಯ ಹಿರೇಮಠ, ಮಹಾಂತಯ್ಯ ಮಠಪತಿ, ರವಿ ಕೋಟಿನ್, ಬಸವರಾಜ ಬಡಿಗೇರ, ಗುರಣ್ಣ ಹೊಕ್ಕುಂಡಿ, ಶಿವಶಂಕರ ರೂಗಿ,…
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಜನರು ಸೋಮವಾರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.ರೈತ ಬಾಂಧವರು ತಮ್ಮ ಹೊಲದಲ್ಲಿ ಬೆಳೆದು ನಿಂತಿದ್ದ ಬೆಳೆಯಲ್ಲಿನ ಐದು ಜೋಳದ ತೆನೆ, ಗೋಧಿ ತೆನೆ, ಕಡಲೆ ಗಿಡ ಮಾರುಕಟ್ಟೆಯಲ್ಲಿ ಖರೀದಿಸಿದ್ದ ಬಾರಿಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ತಂದು ಮನೆಯಲ್ಲಿನ ದೇವರ ಜಗುಲಿ ಮೇಲೆ ಇಟ್ಟು ದೇವರ ಪೂಜೆಯೊಂದಿಗೆ ಬೆಳೆಗಳ ತೆನೆಗಳಿಗೆ ಪೂಜೆ ಸಲ್ಲಿಸಿದರು. ಹಬ್ಬಕ್ಕಾಗಿ ತಯಾರಿಸಿದ ವಿವಿಧ ಖಾದ್ಯದೊಂದಿಗೆ ಎಳ್ಳು, ಬೆಲ್ಲದೊಂದಿಗೆ ಮನೆಯ ದೇವರಿಗೆ ನೈವೇದ್ಯ ಅರ್ಪಿಸಿದರು.ಸಂಜೆ ಕುಟುಂಬ ಸದಸ್ಯರು ಎಳ್ಳು, ಬೆಲ್ಲ, ಕಾಯಿ ಕರ್ಪೂರದೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕುಟುಂಬ ಸದಸ್ಯರು, ಸಂಬಂಧಿಕರು, ಹಿರಿಯರು, ಸ್ನೇಹಿತರಿಗೆ ಪರಸ್ಪರ ಎಳ್ಳು ಬೆಲ್ಲ (ಕುಸುರೆಳ್ಳು) ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು.ಲಕ್ಷ್ಮೀ ನಗರದಲ್ಲಿ ವಿಶಿಷ್ಟ ಆಚರಣೆ : ಪಟ್ಟಣದ ಲಕ್ಷ್ಮೀ ನಗರದ ನಿವಾಸಿಗಳು ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದು ಗಮನ ಸೆಳೆಯಿತು. ಮಹಿಳೆಯರು ಬಡಾವಣೆಯ ವಿಶಾಲ ಜಾಗೆಯನ್ನು ಸ್ವಚ್ಛಗೊಳಿಸಿ, ನೀರು ಸಿಂಪಡಿಸಿ ರಂಗವಲ್ಲಿ…
