ತಾಳಿಕೋಟಿ: ತಾಲೂಕಿನ ಮೂಕಿಹಾಳ ಗ್ರಾಮದ ಹಜರತ್ ಲಾಡ್ಲೆ ಮಶ್ಯಾಕ ದರ್ಗಾ ಉರುಸು ಪ್ರಯುಕ್ತ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ಹಜರತ್ ಲಾಡ್ಲೆ ಮಶ್ಯಾಕ ದರ್ಗಾ ಕಮೀಟ ಸಹಯೋಗದಲ್ಲಿ ಜ.೧೮ ಗುರುವಾರ ದಿವಸ ” ಜಿಲ್ಲಾ ಮಟ್ಟದ ಜಾನಪದ ಸಮಾವೇಶ ” ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ತಿಳಿಸಿದ್ದಾರೆ.
ಮೂಕಿಹಾಳ ಗ್ರಾಮದ ದರ್ಗಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಬೆಳಿಗ್ಗೆ ೧೧ ಘಂಟೆಗೆ ಹಿರೂರ ಪಡೇಕನೂರ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ದಾವಲಮಲೀಕ ಅಜ್ಜನವರ ಸಾನಿಧ್ಯದಲ್ಲಿ , ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಸಮಾವೇಶ ಉದ್ಘಾಟಿಸುವರು. ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಕಲಾವಿದರನ್ನು ಸನ್ಮಾನಿಸುವರು. ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಹಿತಿ ಶಿಕ್ಷಕ ಸಾಹೇಬಗೌಡ ಬಿರಾದಾರ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಜಿ ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಾಂಗ್ರೆಸ್ ಮುಖಂಡ ಆನಂದಗೌಡ ದೊಡಮನಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ ವಕೀಲರು, ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಕಾಂಗ್ರೆಸ್ ಮುಖಂಡ ರಾಯನಗೌಡ ತಾತರಡ್ಡಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್ ಎಂ ಸಜ್ಜನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ , ಮೈಬೂಬ ಚೋರಗಸ್ತಿ, ಮಹಾಂತೇಶ ಮುರಾಳ, ಮತ್ತು ಕನ್ನಡ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ೨೫ ಜಾನಪದ ಕಲಾ ತಂಡಗಳು ಆಗಮಿಸಿ ಕಲಾ ಪ್ರದರ್ಶನ ನೀಡುವರು. ಜಿಲ್ಲೆಯ ಹಿರಿಯ ೨೫ ಜನ ಜಾನಪದ ಕಲಾವಿದರನ್ನು ಸನ್ಮಾನಿಸಲಾಗುವುದು.
ಪತ್ರಿಕಾ ಗೋಷ್ಠಿಯಲ್ಲಿ ಹಜರತ್ ಲಾಡ್ಲೆ ಮಶ್ಯಾಕ ದರ್ಗಾ ಕಮೀಟ ಅಧ್ಯಕ್ಷ ಕಾಶಿಂಪಟೇಲ ಪಾಟೀಲ ಮತ್ತು ಕನ್ನಡ ಜಾನಪದ ಪರಿಷತ್ ತಾಳಿಕೋಟಿ ತಾಲೂಕಾಧ್ಯಕ್ಷ ಸಿಧನಗೌಡ ಕಾಶಿನಕುಂಟಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

