ದೇವರಹಿಪ್ಪರಗಿ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಸವ ಶರಣ ಸಂಗಮ ಸೇವಾ ಸಮೀತಿಯಿಂದ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಪರಿಷತ್ ಹಾಗೂ ಸೇವಾ ಸಮೀತಿಯ ಪದಾಧಿಕಾರಿಗಳು ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವಶರಣ ಸಂಗಮ ಸಮೀತಿಯ ತಾಲ್ಲೂಕು ಅಧ್ಯಕ್ಷ ಸಂಗಪ್ಪಣ್ಣ ತಡವಲ್ ಮಾತನಾಡಿ, ಸಿದ್ಧರಾಮೇಶ್ವರರು ಶ್ರೀಶೈಲ ಮಲ್ಲಿಕಾರ್ಜುನನ ಒಬ್ಬ ಮಹಾನ್ ಭಕ್ತರಾಗಿದ್ದರು. ಅನುಭವ ಮಂಟಪದ ಗೋಷ್ಠಿಯಲ್ಲಿ ಭಾಗವಹಿಸಿ ಮಹಾಶಿವಯೋಗಿ ಎನಿಸಿಕೊಂಡರು ಎಂದು ಮಾಹಿತಿ ನೀಡಿದರು.
ಶಿಕ್ಷಕ ಪ್ರಲ್ಹಾದ್ ಕುಲಕರ್ಣಿ ಮಾತನಾಡಿ, ೧೨ನೇ ಶತಮಾನದ ಶಿವಶರಣರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಶಾಲೆಯ ಮುಖ್ಯಗುರು ಪಿ.ಸಿ.ತಳಕೇರಿ, ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ಸೋಮು ದೇವೂರ, ಸಂಗಮೇಶ ಕೆರೆಪ್ಪಗೋಳ, ನಾಗಯ್ಯ ಹಿರೇಮಠ, ಮಹಾಂತಯ್ಯ ಮಠಪತಿ, ರವಿ ಕೋಟಿನ್, ಬಸವರಾಜ ಬಡಿಗೇರ, ಗುರಣ್ಣ ಹೊಕ್ಕುಂಡಿ, ಶಿವಶಂಕರ ರೂಗಿ, ಎಸ್.ಜಿ.ತಾವರಖೇಡ, ಮಹಾಂತೇಶ ಬಿರಾದಾರ, ಬಸವರಾಜ ಮಾನೆ, ಪರಶುರಾಮ ವಡ್ಡರ, ಲಕ್ಷ್ಮಣ ವಡ್ಡರ, ಪ್ರಭು ಬರಟಗಿ, ಬಸವರಾಜ ವಡ್ಡರ, ಎಸ್.ಎಮ್.ನಂದ್ಯಾಳ ಸೇರಿದಂತೆ ಶಿಕ್ಷಕರು, ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಸದಸ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

