Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಜನವರಿ ೨೩ ರಿಂದ ೨೬ರವರೆಗೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜರುಗುವ ಶ್ರೀ ಯಲ್ಲಮ್ಮದೇವಿ ಜಾತ್ರೆ ಹಾಗೂ ಜ.೨೪ ರಿಂದ ೩೦ರವರೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಜರುಗುವ ಶ್ರೀ ಬನಶಂಕರಿದೇವಿ ಜಾತ್ರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಜಾತ್ರೆಗೆ ತೆರಳುವ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ನಿಗಮದ ವಿಜಯಪುರ ವಿಭಾಗದ ಕೇಂದ್ರ ಬಸ್ ನಿಲ್ದಾಣ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ, ಬಸವನಬಾಗೇವಾಡಿ ಹಾಗೂ ನಿಡಗುಂದಿ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರು ಇಚ್ಛಿಸಿದಲ್ಲಿ ಕರಾರು ಒಪ್ಪಂದದ ಮೇಲೆಯೂ ಸಹ ಸದರಿ ಜಾತ್ರೆಗೆ ಬಸ್ಸಗಳನ್ನು ಒದಗಿಸಲಾಗುವುದು.ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-೧ ಮೊ: ೭೭೬೦೯೯೨೨೬೩, ಘಟಕ-೨ ಮೊ: ೭೭೬೦೯೯೨೨೬೪, ಇಂಡಿ ಮೊ: ೭೭೬೦೯೯೨೨೬೫, ಸಿಂದಗಿ ಮೊ: ೭೭೬೦೯೯೨೨೬೬, ಮುದ್ದೇಬಿಹಾಳ ಮೊ: ೭೭೬೦೯೯೨೨೬೭, ತಾಳಿಕೋಟೆ ಮೊ:…
ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೧೧೦/೧೧ ಕೆವ್ಹಿ ಭೂತನಾಳ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ೧೧ ಕೆವ್ಹಿ ೨೦ಎಂವಿಎ, ೧೧೦/೩೩ ಕೆವ್ಹಿ ಶಕ್ತಿ ಪರಿವರ್ತಕದ ಛೇದಕ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ೩೩/೧೧ ಕೆವ್ಹಿ ತಿಡಗುಂದಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಹಾಗೂ ೩೩/೧೧ ಕೆವ್ಹಿ ಅರಕೇರಿ ಎಲ್‌ಐಎಸ್‌ಗೆ ಜನವರಿ ೧೯ ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ವಿಜಯಪುರ: ಕೃಷಿ ವಿಶ್ವವಿದ್ಯಾಲಯ, ಧಾರವಾಡ ವಿಜಯಪುರ ಆವರಣ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಜನವರಿ ೨೧ ರಿಂದ ೨೩ರವರೆಗೆ ವಿಜಯಪುರ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ‘ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ’ ಕೃಷಿ ಮೇಳ-೨೦೨೩-೨೪ ಹಮ್ಮಿಕೊಳ್ಳಲಾಗಿದೆ.ಜನವರಿ ೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಿದ್ದಾರೆ.ನಾಗಠಾಣ ಶಾಸಕರಾದ ವಿಠ್ಠಲ ಕಟದೊಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಬಸನಗೌಡ ಆರ್.ಪಾಟೀಲ ಯತ್ನಾಳ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್.ನಾಡಗೌಡ,…
ಮುದ್ದೇಬಿಹಾಳ: ತಾಲೂಕಿನ ಆಲಕೊಪ್ಪರ ಗ್ರಾಮದ ಶಾರದಾ ಬೆಲ್ಲದ ತನ್ನ ೮ ವರ್ಷದ ಮಗಳು ಅಶ್ವಿನಿ ಬೆಲ್ಲದ ಇವಳನ್ನು ಕರೆದುಕೊಂಡು ಮುದ್ದೇಬಿಹಾಳದ ಸಂತೆಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಅಂತಾ ಶಾರದಾಳ ಪತಿ ನಿಂಬೆಣ್ಣ ಬೆಲ್ಲದ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಫಿರ್ಯಾದು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಹಾಯೋಗಿ ವೇಮನ ಜಯಂತಿ, ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಬಲರಾಮ ಕಟ್ಟಿಮನಿ ಅವರು ಮಾತನಾಡಿ, ಜ.೧೯ ರಂದು ಮಹಾಯೋಗಿ ವೇಮರ ಮತ್ತು ಜ.೨೧ ರಂದು ಅಂಬಿಗರ ಚೌಡಯ್ಯನವರ ಜಯಂತಿಯನ್ನು ಎಲ್ಲ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಆಚರಿಸಬೇಕು. ಜ.೨೧ ರಂದು ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಚೌಡಯ್ಯನವರ ವೃತ್ತದಲ್ಲಿ ಸಮಾಜ ಬಾಂಧವರೊಂದಿಗೆ ಪೂಜೆ ಸಲ್ಲಿಸುವದಾಗಿ ತಿಳಿಸಿದರು. ಎರಡೂ ಜಯಂತಿಯ ಆಚರಣೆ ಬಳಿಕ ತಾಲೂಕು ಮಟ್ಟದ ಅಧಿಕಾರಿಗಳು ತಹಶೀಲ್ದಾರ ಕಚೇರಿಯಲ್ಲಿ ನಡೆಯುವ ಆಚರಣೆಯಲ್ಲಿ ಹಾಜರಿರುವಂತೆ ಸೂಚಿಸಿದರು.ಜ.೨೬ ರಂದು ೭೫ ನೇ ಗಣರಾಜ್ಯೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿರುವದಾಗಿ ತಿಳಿಸಿದರು. ಎಲ್ಲ ಪಂಚಾಯತಿಗಳು, ಕಚೇರಿಗಳು ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವವನ್ನು ಕಡ್ಡಾಯವಾಗಿ ಅಚರಿಸತಕ್ಕದ್ದು. ಪಥಸಂಚಲನ, ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶೇಶವಾಗಿಸುವಂತೆ ಸೂಚಿಸಿದರು.ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಮೇಶ ಲಮಾಣಿ, ತಾಲೂಕು ಪಂಚಾಯತ ನ ಖೂಬಾಸಿಂಗ ಜಾಧವ, ಬಿಇಓ ಬಸವರಾಜ…
ಬಾಗಲಕೋಟೆ: ಬಾಗಲಕೋಟೆಯ ಸಿದ್ದನಕೊಳ್ಳದಲ್ಲಿ ಜನೆವರಿ 15 ಸೋಮವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜರುಗಿದ 2024 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ “ತುಷಾರ್” ಚಲನಚಿತ್ರ ನೋಡಿದ ಹಿರಿಯ ನಿರ್ದೇಶಕರು, ಕಲಾವಿದರು ಮತ್ತು ಆಯ್ಕೆ ಸಮಿತಿ “ತುಷಾರ್” ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಚಲನಚಿತ್ರೋತ್ಸವದಲ್ಲಿ ಆಯ್ಕೆಯಾದ ತುಷಾರ್ ಚಲನಚಿತ್ರದ ನಟ ನಿರ್ದೇಶಕ ನಿರ್ಮಾಪಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಸಮಾರಂಭದಲ್ಲಿ ಅವಾರ್ಡ್ ನೀಡುವುದರ ಮುಖಾಂತರ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮಿಗಳು, ಚಿತ್ರನಟ ಶೋಭರಾಜ್, ಕೆಜಿಎಫ್ ಸಿನಿಮಾ ಖ್ಯಾತಿಯ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಕಿನ್ನಾಳ ರಾಜ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ಸದಸ್ಯೆ ರಕ್ಷಿತಾ ಇಟಿ, ಗೋವಾದ ಉದ್ಯಮಿ ಸಿದ್ದಣ್ಣ ಮೇಟಿ, ನಟ ನಿರ್ದೇಶಕ ನಿರ್ಮಾಪಕ ಡಾ.ಪ್ರಭು ಗಂಜಿಹಾಳ, ಟಿವಿ ಧಾರಾವಾಹಿ ನಟ ನಟಿಯರು, ಸಿನಿಮಾ ನಿರ್ದೇಶಕರು, ಕಲಾವಿದರು ಪಾಲ್ಗೊಂಡಿದ್ದರು.
ಮುದ್ದೇಬಿಹಾಳ: ಶಾಲಾ ಹಂತದಲ್ಲಿ ಅಭಿವೃದ್ಧಿ ಹಾಗೂ ನಿರ್ವಹಣೆಯ ಹೊಣೆ ಹೊತ್ತು ಮೂಲ ಸೌಕರ್ಯಗಳನ್ನು ಖಾತರಿಗೊಳಿಸುವುದರ ಜೊತೆ ಕಲಿಕೆಗೆ ಪೂರಕ ವಾತಾವರಣ ಕಟ್ಟಿ ಕೊಡಲು ಶ್ರಮಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯವು ನಾಡಿಗೆ ಮಾದರಿಯಾಗಿದೆ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ ಶಂಕರಗೌಡ ಸೋಮನಾಳ ಹೇಳಿದರು.ತಾಲೂಕಿನ ಬಸರಕೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಲ್ಕೋ ಸೋಲಾರ ಪ್ರೈವೇಟ್ ಲಿಮಿಟೆಡ್, ನೆಕ್ಸ್ಟ್ ಎಜ್ಯೂಕೇಷನ್ ಬೆಂಗಳೂರು ಇವರ ತಾಂತ್ರಿಕ ಜ್ಞಾನ ಹಾಗೂ ಮೆಂಡಾ ಫೌಂಡೇಷನ್ ಬೆಂಗಳೂರು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಬುನ್ನೀಸಾ ಬೀಳಗಿ ಇವರ ಆರ್ಥಿಕ ನೆರವಿನೊಂದಿಗೆ ಸ್ಥಾಪಿತವಾದ ಸ್ಮಾರ್ಟ್ (ಡಿಜಿಟಲ್) ಕ್ಲಾಸ ಉದ್ಘಾಟಿಸಿ ಅವರು ಮಾತನಾಡಿದರು.ಆಂಗ್ಲ ವ್ಯಾಮೋಹ ಹಾಗೂ ಖಾಸಗಿ ಶಾಲೆಗಳ ಹಾವಳಿಯಿಂದ ಮುಚ್ಚುವ ಹಂತ ತಲುಪಿರುವ ಸರ್ಕಾರಿ ಶಾಲೆ ಉಳಿಸಲು ನಡೆದ ಕ್ರಿಯಾತ್ಮಕ ನಡಿಗೆ ಸರ್ವ ಮಾನ್ಯವಾಗಲಿ. ದೇಶದ ಭವಿಷ್ಯವನ್ನು ತನ್ನ ಮಡಿಲಲ್ಲಿ ಹೊತ್ತಿರುವ ಸರ್ಕಾರಿ ಶಾಲೆಗಳ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ನಿರೂಪಿಸಲು ಅತ್ಯಾಧುನಿಕ ಸೌಲಭ್ಯಗಳ ಜೊತೆ ಗುಣಾತ್ಮಕ…
ವಿಜಯಪುರ : ಕೆಪಿಸಿಸಿ ಮಹಿಳಾ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಸ್ನೇಹಲತಾ ಶೆಟ್ಟಿ ನೇಮಕಗೊಂಡಿದ್ದಾರೆಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಸ್ನೇಹಲತಾ ಶೆಟ್ಟಿ ಇವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ನೆಟ್ಟ ಡಿಸೋಜ ಅವರ ಆದೇಶದ ಮೇರೆಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀಮತಿ ಡಾ. ಬಿ. ಪುಷ್ಪ ಅಮರ್ನಾಥ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆಇದಕ್ಕೆ ಸಹಕರಿಸಿದ ಅಖಿಲ ಭಾರತ ಕೆಪಿಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾದಂತಹ ಡಿ ಕೆ ಶಿವಕುಮಾರ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ, ಮತ್ತು ಸಚಿವರಾದ ಶಿವಾನಂದ ಪಾಟೀಲ, ಜಿಲ್ಲಾ ಎಲ್ಲಾ ಶಾಸಕರು ಮತ್ತು ಕಾರ್ಯಕರ್ತರು ಮತ್ತು ಗೀತಾಂಜಲಿ ಆರ್ ಪಾಟೀಲ, ರಾಜ್ಯ ಕೆಪಿಸಿಸಿ ಮಹಿಳಾ ಉಪಾಧ್ಯಕ್ಷರು, ಕಾಂಗ್ರೆಸ್ ಮುಖಂಡರು ಶುಭಾಶಯ ಕೋರಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ.) ದಲ್ಲಿ ೨೦೨೪-೨೫ನೇ ಸಾಲಿನ ೬ನೇ ತರಗತಿಗೆ ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪಾಲಕರು ತಮ್ಮ ಮಕ್ಕಳ ಅರ್ಜಿಯನ್ನು www.schooleducation.kar.nic.in ಅಥವಾ www.vidyavahini.karnataka.gov.in ವೆಬ್‌ಸೈಟ್ ಬಳಸಿ ದಿನಾಂಕ ೧೭/೦೧/೨೦೨೪ ರಿಂದ ೦೬/೦೨/೨೦೨೪ ರವರೆಗೆ ಸಲ್ಲಿಸಲು ಅವಕಾಶವಿರುತ್ತದೆ.ತಮ್ಮ ಮಕ್ಕಳ ಅರ್ಜಿಗೆ ಸಂಬಂಧಿಸಿದ ಸಂದೇಶಗಳನ್ನು ಅರ್ಜಿಯಲ್ಲಿ ನೀಡಲಾದ ಮೋಬೈಲ್ ಸಂಖ್ಯೆಗೆ ಕಳುಹಿಸಲಾಗುವುದರಿಂದ ಪಾಲಕರು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನೀಡುವದು ಕಡ್ಡಾಯವಾಗಿದೆ.ದಿನಾಂಕ ೦೩/೦೩/೨೦೨೪ ರಂದು ಬೆಳಿಗ್ಗೆ ೧೦.೩೦ ರಿಂದ ೧.೦೦ ಗಂಟೆಯವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ೫ನೇ ತರಗತಿಗೆ ಸಂಬಂಧಿಸಿದ ಪಠ್ಯಾಧರಿಸಿ ಕನ್ನಡ-೧೬, ಇಂಗ್ಲಿಷ್-೧೬, ಗಣಿತ-೧೬, ವಿಜ್ಞಾನ-೧೬, ಸಮಾಜ ವಿಜ್ಞಾನ-೧೬, ಸಾಮಾನ್ಯ ಜ್ಞಾನ-೧೦ ಮತ್ತು ಬೌದ್ಧಿಕ ಸಾಮರ್ಥ್ಯ-೧೦ ಒಟ್ಟು ೧೦೦ ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದ್ದು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯದ ಮುಖ್ಯಗುರುಮಾತೆ ಶ್ರೀಮತಿ ಎನ್. ಬಿ. ತೆಗ್ಗಿನಮಠ ಮೋ. ಸಂಖ್ಯೆ ೯೬೩೨೩೭೮೦೫೮ ಅಥವಾ…
ವಿಜಯಪುರ: 2024-25 ನೇ ಸಾಲಿಗೆ ಸರಕಾರಿ ಆದರ್ಶ ವಿದ್ಯಾಲಯ ಇಂಡಿ ಶಾಲೆಗೆ ಆರನೇ ತರಗತಿ ದಾಖಲಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.2023-24 ನೇ ಸಾಲಿನಲ್ಲಿ ಇಂಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಹಾಗೂ ಇದೇ ತಾಲೂಕಿನ ಖಾಯಂ ನಿವಾಸಿಗಳ ಮಕ್ಕಳು, ಬೇರೆ ತಾಲೂಕು, ಜಿಲ್ಲೆ , ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿಗಳನ್ನು ಜನೇವರಿ 17 ರಿಂದ ಪೇಬ್ರುವರಿ 6 ರವರೆಗೆ ಸಲ್ಲಿಸಬಹುದು. ಪ್ರವೇಶ ಪರೀಕ್ಷೆ ಮಾರ್ಚ 3ರಂದು ನಡೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ ಹಾಗೂ ಮುಖ್ಯೋಪಾಧ್ಯಾಯ ಎಸ್.ಜಿ.ಬನಸೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆನ್‌ಲೈನ್‌ನಲ್ಲಿ ಅರ್ಜಿಗಳನ್ನು www.schooleducation.kar.nic.in, www.vidyavahini.karnataka.gov.in ವೆಬ್ ಸೈಟ್ ನಲ್ಲಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಎಸ್ಎಟಿಎಸ್ ನಂಬರ, ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ ಸೈಜಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯ ಆಧಾರಕಾರ್ಡ, ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ…
