ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ.) ದಲ್ಲಿ ೨೦೨೪-೨೫ನೇ ಸಾಲಿನ ೬ನೇ ತರಗತಿಗೆ ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪಾಲಕರು ತಮ್ಮ ಮಕ್ಕಳ ಅರ್ಜಿಯನ್ನು www.schooleducation.kar.nic.in ಅಥವಾ www.vidyavahini.karnataka.gov.in ವೆಬ್‌ಸೈಟ್ ಬಳಸಿ ದಿನಾಂಕ ೧೭/೦೧/೨೦೨೪ ರಿಂದ ೦೬/೦೨/೨೦೨೪ ರವರೆಗೆ ಸಲ್ಲಿಸಲು ಅವಕಾಶವಿರುತ್ತದೆ.
ತಮ್ಮ ಮಕ್ಕಳ ಅರ್ಜಿಗೆ ಸಂಬಂಧಿಸಿದ ಸಂದೇಶಗಳನ್ನು ಅರ್ಜಿಯಲ್ಲಿ ನೀಡಲಾದ ಮೋಬೈಲ್ ಸಂಖ್ಯೆಗೆ ಕಳುಹಿಸಲಾಗುವುದರಿಂದ ಪಾಲಕರು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನೀಡುವದು ಕಡ್ಡಾಯವಾಗಿದೆ.
ದಿನಾಂಕ ೦೩/೦೩/೨೦೨೪ ರಂದು ಬೆಳಿಗ್ಗೆ ೧೦.೩೦ ರಿಂದ ೧.೦೦ ಗಂಟೆಯವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ೫ನೇ ತರಗತಿಗೆ ಸಂಬಂಧಿಸಿದ ಪಠ್ಯಾಧರಿಸಿ ಕನ್ನಡ-೧೬, ಇಂಗ್ಲಿಷ್-೧೬, ಗಣಿತ-೧೬, ವಿಜ್ಞಾನ-೧೬, ಸಮಾಜ ವಿಜ್ಞಾನ-೧೬, ಸಾಮಾನ್ಯ ಜ್ಞಾನ-೧೦ ಮತ್ತು ಬೌದ್ಧಿಕ ಸಾಮರ್ಥ್ಯ-೧೦ ಒಟ್ಟು ೧೦೦ ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದ್ದು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯದ ಮುಖ್ಯಗುರುಮಾತೆ ಶ್ರೀಮತಿ ಎನ್. ಬಿ. ತೆಗ್ಗಿನಮಠ ಮೋ. ಸಂಖ್ಯೆ ೯೬೩೨೩೭೮೦೫೮ ಅಥವಾ ೯೯೧೬೭೨೭೨೪೩ ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
