ಬಾಗಲಕೋಟೆ: ಬಾಗಲಕೋಟೆಯ ಸಿದ್ದನಕೊಳ್ಳದಲ್ಲಿ ಜನೆವರಿ 15 ಸೋಮವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜರುಗಿದ 2024 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ “ತುಷಾರ್” ಚಲನಚಿತ್ರ ನೋಡಿದ ಹಿರಿಯ ನಿರ್ದೇಶಕರು, ಕಲಾವಿದರು ಮತ್ತು ಆಯ್ಕೆ ಸಮಿತಿ “ತುಷಾರ್” ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚಲನಚಿತ್ರೋತ್ಸವದಲ್ಲಿ ಆಯ್ಕೆಯಾದ ತುಷಾರ್ ಚಲನಚಿತ್ರದ ನಟ ನಿರ್ದೇಶಕ ನಿರ್ಮಾಪಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಸಮಾರಂಭದಲ್ಲಿ ಅವಾರ್ಡ್ ನೀಡುವುದರ ಮುಖಾಂತರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮಿಗಳು, ಚಿತ್ರನಟ ಶೋಭರಾಜ್, ಕೆಜಿಎಫ್ ಸಿನಿಮಾ ಖ್ಯಾತಿಯ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಕಿನ್ನಾಳ ರಾಜ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ಸದಸ್ಯೆ ರಕ್ಷಿತಾ ಇಟಿ, ಗೋವಾದ ಉದ್ಯಮಿ ಸಿದ್ದಣ್ಣ ಮೇಟಿ, ನಟ ನಿರ್ದೇಶಕ ನಿರ್ಮಾಪಕ ಡಾ.ಪ್ರಭು ಗಂಜಿಹಾಳ, ಟಿವಿ ಧಾರಾವಾಹಿ ನಟ ನಟಿಯರು, ಸಿನಿಮಾ ನಿರ್ದೇಶಕರು, ಕಲಾವಿದರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

