ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಜನವರಿ ೨೩ ರಿಂದ ೨೬ರವರೆಗೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜರುಗುವ ಶ್ರೀ ಯಲ್ಲಮ್ಮದೇವಿ ಜಾತ್ರೆ ಹಾಗೂ ಜ.೨೪ ರಿಂದ ೩೦ರವರೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಜರುಗುವ ಶ್ರೀ ಬನಶಂಕರಿದೇವಿ ಜಾತ್ರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಜಾತ್ರೆಗೆ ತೆರಳುವ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ನಿಗಮದ ವಿಜಯಪುರ ವಿಭಾಗದ ಕೇಂದ್ರ ಬಸ್ ನಿಲ್ದಾಣ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ, ಬಸವನಬಾಗೇವಾಡಿ ಹಾಗೂ ನಿಡಗುಂದಿ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರು ಇಚ್ಛಿಸಿದಲ್ಲಿ ಕರಾರು ಒಪ್ಪಂದದ ಮೇಲೆಯೂ ಸಹ ಸದರಿ ಜಾತ್ರೆಗೆ ಬಸ್ಸಗಳನ್ನು ಒದಗಿಸಲಾಗುವುದು.
ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-೧ ಮೊ: ೭೭೬೦೯೯೨೨೬೩, ಘಟಕ-೨ ಮೊ: ೭೭೬೦೯೯೨೨೬೪, ಇಂಡಿ ಮೊ: ೭೭೬೦೯೯೨೨೬೫, ಸಿಂದಗಿ ಮೊ: ೭೭೬೦೯೯೨೨೬೬, ಮುದ್ದೇಬಿಹಾಳ ಮೊ: ೭೭೬೦೯೯೨೨೬೭, ತಾಳಿಕೋಟೆ ಮೊ: ೭೭೬೦೯೯೨೨೬೮, ಬಸವನಬಾಗೇವಾಡಿ ಮೊ: ೭೭೬೦೯೯೨೨೬೯, ಕೇಂದ್ರ ಬಸ್ ನಿಲ್ದಾಣ ವಿಜಯಪುರ ಮೊ: ೭೭೬೦೯೯೨೨೫೮ ಹಾಗೂ ದೂ:೦೮೩೫೨-೨೫೧೩೪೪ ಸಂಖ್ಯೆಗೆ ಸಂಪರ್ಕಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
