ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಹಾಯೋಗಿ ವೇಮನ ಜಯಂತಿ, ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಲರಾಮ ಕಟ್ಟಿಮನಿ ಅವರು ಮಾತನಾಡಿ, ಜ.೧೯ ರಂದು ಮಹಾಯೋಗಿ ವೇಮರ ಮತ್ತು ಜ.೨೧ ರಂದು ಅಂಬಿಗರ ಚೌಡಯ್ಯನವರ ಜಯಂತಿಯನ್ನು ಎಲ್ಲ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಆಚರಿಸಬೇಕು. ಜ.೨೧ ರಂದು ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಚೌಡಯ್ಯನವರ ವೃತ್ತದಲ್ಲಿ ಸಮಾಜ ಬಾಂಧವರೊಂದಿಗೆ ಪೂಜೆ ಸಲ್ಲಿಸುವದಾಗಿ ತಿಳಿಸಿದರು. ಎರಡೂ ಜಯಂತಿಯ ಆಚರಣೆ ಬಳಿಕ ತಾಲೂಕು ಮಟ್ಟದ ಅಧಿಕಾರಿಗಳು ತಹಶೀಲ್ದಾರ ಕಚೇರಿಯಲ್ಲಿ ನಡೆಯುವ ಆಚರಣೆಯಲ್ಲಿ ಹಾಜರಿರುವಂತೆ ಸೂಚಿಸಿದರು.
ಜ.೨೬ ರಂದು ೭೫ ನೇ ಗಣರಾಜ್ಯೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿರುವದಾಗಿ ತಿಳಿಸಿದರು. ಎಲ್ಲ ಪಂಚಾಯತಿಗಳು, ಕಚೇರಿಗಳು ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವವನ್ನು ಕಡ್ಡಾಯವಾಗಿ ಅಚರಿಸತಕ್ಕದ್ದು. ಪಥಸಂಚಲನ, ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶೇಶವಾಗಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಮೇಶ ಲಮಾಣಿ, ತಾಲೂಕು ಪಂಚಾಯತ ನ ಖೂಬಾಸಿಂಗ ಜಾಧವ, ಬಿಇಓ ಬಸವರಾಜ ಸಾವಳಗಿ, ಆರ್.ಎಫ್.ಓ ಎಸ್.ಜಿ.ಸಂಗಾಲಕ ಮುಖಂಡರಾದ ಎಚ್.ಆರ್.ಬಾಗವಾನ, ಚಂದ್ರಶೇಖರ ಅಂಬಿಗೇರ, ಸಂದೀಪ ಬಿದರಕೋಟಿ, ಶಿವಪ್ಪ ಚಿಮ್ಮಲಗಿ, ಸಂಗಪ್ಪ ಪ್ಯಾಟಿ, ಅಯ್ಯಪ್ಪ ತಂಗಡಗಿ, ಆನಂದ ಅಸ್ಕಿ, ಭೀಮಣ್ಣ ಹಿರೇ ಅಂಬಿಗೇರ, ಸುರೇಶ ವಾಲಿಕಾರ, ವಿಶ್ವನಾಥ ಅಂಬಿಗೇರ ಸೇರಿದಂತೆ ಮತ್ತೀತರರು ಇದ್ದರು. ಶಿಕ್ಷಕ ಟಿ.ಡಿ.ಲಮಾಣಿ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

