Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ೨೦೨೩-೨೪ನೇ ಸಾಲಿನ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (ಎಸ್‌ಎಸ್‌ಪಿ)ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಯು ಕರ್ನಾಟಕ ನಿವಾಸಿಯಾಗಿರಬೇಕು, ೧೦ನೇ ತರಗತಿಯ ನಂತರ ಯಾವುದೇ ಕೋರ್ಸ ಮಾಡುತ್ತಿರುವವರು ಅರ್ಜಿ ಸಲ್ಲಿ¸ಬಹುದಾಗಿದೆ. ಅಧ್ಯಯನ ಪ್ರಮಾಣ ಪತ್ರ, ಅಂಕಪಟ್ಟಿ, ಆಧಾರ ಕಾರ್ಡ, ಶುಲ್ಕ ರಶೀದಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಸಾಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಮಡೆಯಬಹುದು ಎಂದು ವಿಜಯಪುರ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲಿಕ ಮಾನವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ (ಸಿಎಆರ್ ಮತ್ತು ಡಿಎಆರ್) ೩೦೬೪ ಹುದ್ದೆಗಳಿಗೆ ಜ.೨೮ರಂದು ಬೆಳಿಗ್ಗೆ ೧೧ ರಿಂದ ೧೨-೩೦ರವರೆಗೆ ರಾಜ್ಯದಾದ್ಯಂತ ಲಿಖಿತ ಪರೀಕ್ಷೆ ಆಯೋಜಿಸಲಾಗಿದೆ.ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಕರೆ ಪತ್ರದ ಬಗ್ಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಲಾಗುವುದು. ಕರೆ ಪತ್ರದ ಲಿಂಕ್‌ನ್ನು ಸಹ ಕಳಿಸಲಾಗುವುದು. ಜಿಲ್ಲೆಯ ಅಭ್ಯರ್ಥಿಗಳು ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ ಸೋನಾವಣೆ ಅವರು ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಜಿಲ್ಲೆಯ ೨೨ ಪರೀಕ್ಷಾ ಕೇಂದ್ರಗಳಲ್ಲಿ ಜನವರಿ ೨೦ ಹಾಗೂ ೨೧ ರಂದು ನಡೆಯಲಿದ್ದು, ಸದರಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ಜನವರಿ ೨೦ ಹಾಗೂ ೨೧ ರಂದು ಕನ್ನಡಭಾಷಾ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಮುನ್ನೆಚ್ಚರಿಕೆಯಾಗಿ ಕಲಂ ೧೪೪ರನ್ವಯ ಅಂದು ಬೆಳಿಗ್ಗೆ ೯ ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನ್‌ನನ್ನು ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಸದರಿ ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರನೆಟ್, ಸೈಬರ…
ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿಯ ನಿವಾಸಿ ಹಾಲಿ ವಸ್ತಿ ಹಡಗಲಿ ಗ್ರಾಮದ ೪೦ ವರ್ಷದ ಮಲ್ಲೇಶಪ್ಪ ತಂದೆ ನಾಗಪ್ಪ ಪೂಜಾರಿ ಎಂಬ ವ್ಯಕ್ತಿ ದಿನಾಂಕ : ೧೭-೦೩-೨೦೨೩ ರಿಂದ ಹಡಗಲಿಯಿಂದ ಕಾಣೆಯಾಗಿರುವ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿ ಪತ್ತೆಗೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕಾಣೆಯಾಗಿರುವ ವ್ಯಕ್ತಿಯು ೫.೬ ಎತ್ತರ, ಸಾಧಾರಣ ಮೈಕಟ್ಟು, ಚೌಕ ಮುಖ ಹಾಗೂ ಮೊಂಡ ಮೂಗು ಹೊಂದಿದ್ದು, ಮೂಗಿನ ಮೇಲೆ ಹಳೆ ಗಾಯದ ಕಲೆ ಇದ್ದು, ಉದ್ದ ಗಡ್ಡ ಬಿಟ್ಟಿರುತ್ತಾನೆ. ಕನ್ನಡ ಹಾಗೂ ಹಿಂದಿ ಭಾಷೆ ಬಲ್ಲವನಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಚುಕ್ಕೆಯುಳ್ಳ ಅಂಗಿ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದನು.ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಸಾರ್ವಜನಿಕರು ಜಿಲ್ಲಾ ನಿಸ್ತಂತು ಕಚೇರಿ ದೂ: ೦೮೩೫೨-೨೫೦೮೪೪/೨೫೦೭೫೧ ವಿಜಯಪುರ ಗ್ರಾಮೀಣ ಠಾಣೆ ದೂ: ೦೮೩೫೨-೨೫೦೯೨೩ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಬರುವ ಅಲೆಮಾರಿ ಸಮುದಾಯದವರು ಆರ್ಥಿಕ ಅಭಿವೃದ್ದಿಯನ್ನು ಹೊಂದಲು ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿ ರಚಿಸಬೇಕಾಗಿದ್ದು, ಸಮಿತಿಯ ನಾಮನಿರ್ದೇಶಿತ ಸದಸ್ಯತ್ವಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಕ್ಕೆ ಸೇರಿದ ಅರ್ಹ ಆಸಕ್ತರು ದಿನಾಂಕ : ೩೧-೦೧-೨೦೨೪ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಕೃಷಿಮೇಳದ ಘೋಷವಾಕ್ಯ – ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ವಿಜಯಪುರ: “ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ” ಘೋಷವಾಕ್ಯದೊಂದಿಗೆ ನಗರದ ಹೊರವಲಯದ ವಿಜಯಪುರದ ಹಿಟ್ನಳ್ಳಿ ಫಾರ್ಮ್ನನಲ್ಲಿ ಜನವರಿ ೨೧ ರಿಂದ ೨೩ವರೆಗೆ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಬೃಹತ್ ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೃಷಿ ಮೇಳ ಸಮಿತಿ ಅಧ್ಯಕ್ಷರು ಹಾಗೂ ಡೀನ್ ಡಾ. ಭೀಮಪ್ಪ ಎ ತಿಳಿಸಿದರು.ಇಂದು ಕೃಷಿ ಮಹಾವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯ ಜೊತೆಗೆ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ರೈತರಿಗೆ ಆಧುನಿಕ ಬೇಸಾಯ ಕ್ರಮಗಳ ಕುರಿತಂತೆ ಕಾಲ-ಕಾಲಕ್ಕೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ನಿರಂತರ ಸಂಶೋಧನೆಗಳ ಫಲಿತಾಂಶಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿ ಮೇಳಗಳಂತಹ ಬೃಹತ್ ವಿಸ್ತರಣಾ ಕಾರ್ಯಕ್ರಮಗಳು ಬಹಳ ಮಹತ್ವವನ್ನು ಪಡೆದಿವೆ ಎಂದು ಹೇಳಿದರು.ಜನವರಿ ೨೧ರಂದು ಬೆಳಗ್ಗೆ ೧೧ ಗಂಟೆಗೆ ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ನಾಗಠಾಣ ಮತಕ್ಷೇತ್ರದ ಶಾಸಕ…
ಮುದ್ದೇಬಿಹಾಳ: ತಾಲೂಕಿನ ನಾತವಾಡ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಹಣಮಂತ ದೇವರ ಗುಡಿಯ ಮುಂದೆ ಇಸ್ಪೀಟ್ ಆಡುತ್ತಿದ್ದ ನಾಲತವಾಡದ ಆರ್ ಗಣೇಶ ಗುರುಗೋಳ, ಹಣಮಂತ ವಡ್ಡರ, ಸುನೀಲ ಹಾದಿಮನಿ, ಸೈಯ್ಯದ ಕತೀಬ, ಸುಭಾಷ್ ಕಸಬೇಗೌಡರ ಮೇಲೆ ಪ್ರಕರಣ ದಾಖಲಾಗಿದೆ.
ಆಲಮಟ್ಟಿ: ಇನ್ನುಳಿದ ಸಂಘಟನೆಗಳಿಗಿಂತ ಶಿಕ್ಷಕ ಸಂಘಟನೆ ಸಂಪೂರ್ಣ ಭಿನ್ನವಾಗಿದ್ದು, ಸರ್ವಾಧಿಕಾರಿ ಧೋರಣೆಯ ತತ್ವಗಳಿಂದ ಮುಕ್ತವಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಕ್ಷಕ ಸಂಘಟನೆ ಸದಾ ಶಿಕ್ಷಕರ ಏಳಿಗೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.ಇಲ್ಲಿಯ ಎಚ್.ಪಿ.ಎಸ್. ಶಾಲೆಯಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ವಿವಿಧ ಹಂತದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಅವರು ಮಾತನಾಡಿದರು.ನಿಡಗುಂದಿ ತಾಲ್ಲೂಕಿನಲ್ಲಿಯೂ ಶಿಕ್ಷಕ ಸಂಘಟನೆ ಹೊಸ ಹೊಸ ಕಾರ್ಯಚಟುವಟಿಕೆಗಳಿಂದ ಶಿಕ್ಷಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು. ಶಿಕ್ಷಕ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ೨೦೦೫ ರಲ್ಲಿ ಅಧಿಸೂಚಿತಗೊಂಡು ೨೦೦೭ ರಲ್ಲಿ ನೌಕರಿಗೆ ಸೇರಿದ ೧೧,೦೦೦ ಕ್ಕೂ ಅಧಿಕ ನೌಕರರಿಗೆ ಎನ್ ಪಿಎಸ್ ನಿಂದ ಹಳೆ ಪಿಂಚಣಿ ವ್ಯವಸ್ಥೆಗೆ ರಾಜ್ಯ ಸರ್ಕಾರ ಒಪ್ಪಿದೆ ಎಂದರು. ಅದಕ್ಕಾಗಿ ನಡೆಸಿದ ಪ್ರಯತ್ನ ಹಾಗೂ ಹೋರಾಟವನ್ನು ವಿವರಿಸಿದರು. ಎಲ್ಲಾ ನೌಕರರಿಗೂ ಹಳೆ ಪಿಂಚಣಿ ವ್ಯವಸ್ಥೆ ಕೊಡಿಸುವುದು, ೭ ನೇ ವೇತನ…
ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಜಯಪುರದ ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇವಾಲಯದಲ್ಲಿ ದಿ.೨೨ ರಂದು ಬೆಳಿಗ್ಗೆ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಾಕ್ಷಿ ಹನುಮಾನ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ಬೊಮ್ಮನಹಳ್ಳಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ರಾಮರಾಜ್ಯದ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ, ರಾಮ ಮಂದಿರ ಲೋಕಾರ್ಪಣೆಯನ್ನು ಆಧ್ಯಾತ್ಮಿಕವಾಗಿ ಸಂಭ್ರಮಿಸುವ ದೃಷ್ಟಿಯಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಇಡೀ ವಿಶ್ವದ ದೃಷ್ಟಿ ಈಗ ಅಯೋಧ್ಯೆ ಕಡೆಗೆ ನೆಟ್ಟಿದೆ. ಐದು ನೂರು ವರ್ಷಗಳ ಹೋರಾಟಕ್ಕೆ ಅಂತಿಮ ಜಯ ದೊರಕಿದೆ. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇದೇ ದಿನಾಂಕ ೨೨ ರಂದು ನೆರವೇರಲಿರುವುದು. ಪ್ರತಿಯೊಬ್ಬರು ಸಂತಸಪಡುವ ಸುಸಮಯ,ದಿನಾಂಕ ೨೨ ರಂದು ಬೆಳಿಗ್ಗೆ ಇಲ್ಲಿನ ಗಣೇಶನಗರ ಶ್ರೀಸಾಕ್ಷಿ ಹನುಮಾನ ಮಂದಿರದಲ್ಲಿ ಅತ್ಯಂತ ವಿಶೇಷವಾದ ಶ್ರೀರಾಮ ತಾರಕ ಯಜ್ಞ ನೆರವೇರಲಿದೆ. ಈ ಯಜ್ಞನ ವಿಶೇಷತೆ…
ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.ಬುಧವಾರದಂದು ಗ್ರಾಮದ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ೫೪ ನೇ ಪುಣ್ಯಾರಾಧನೆಯ ‘ಧರ್ಮಸಭೆ’ಯಲ್ಲಿ ಸಿಂಹಗಢ ಮಹಾರಾಜರ ಶಿಥಿಲಗೊಂಡಿರುವ ಈ ಮಹಾದೇವನ ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸಬೇಕು ಎಂದು ಗ್ರಾಮಸ್ಥರು ಶಿಥಿಲಗೊಂಡಿರುವ ದೇವಾಸ್ಥಾನದ ಭಾವಚಿತ್ರಗಳನ್ನು ನೀಡಿದರು.ಈ ವೇಳೆ ಚಡಚಣ ಪಟ್ಟದ ಜವಳಿ ವ್ಯಾಪಾರಸ್ಥ ಸಿದ್ದಾರಾಮ ಭಂಢರಕವಟೆಯವರು ಶಿಥಿಲಗೊಂಡಿರುವ ದೇವಾಸ್ಥಾನದ ಮೆಟ್ಟಿಲುಗಳ ನಿರ್ಮಾಣಕ್ಕೆ ೧.೫೦ ಲಕ್ಷ ರೂಗಳ ದೇಣಿಗೆ ನೀಡಿದರು.ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಶಾಸಕರ ನಿಧಿಯಿಂದ ನಾನು ೫೦ ಲಕ್ಷ ರೂ ಅನುದಾನ ನೀಡುತ್ತೇನೆ. ಹಾಗೂ ಪುರಾತತ್ವ ಇಲಾಖೆಯ ಜೊತೆ ಚರ್ಚಿಸಿ ದೇವಾಸ್ಥಾನದ ಸಂಪೂರ್ಣ ಜಿರ್ಣೋದ್ಧಾರಗೊಳಿಸುವುದಾಗಿ ಭರವಸೆ ನೀಡಿದರು.ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ರವರು ಕೂಡಾ ತಮ್ಮ ವೈಯಕ್ತಿಕ ನಿಧಿಯಿಂದ…
