ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿಯ ನಿವಾಸಿ ಹಾಲಿ ವಸ್ತಿ ಹಡಗಲಿ ಗ್ರಾಮದ ೪೦ ವರ್ಷದ ಮಲ್ಲೇಶಪ್ಪ ತಂದೆ ನಾಗಪ್ಪ ಪೂಜಾರಿ ಎಂಬ ವ್ಯಕ್ತಿ ದಿನಾಂಕ : ೧೭-೦೩-೨೦೨೩ ರಿಂದ ಹಡಗಲಿಯಿಂದ ಕಾಣೆಯಾಗಿರುವ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿ ಪತ್ತೆಗೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾಗಿರುವ ವ್ಯಕ್ತಿಯು ೫.೬ ಎತ್ತರ, ಸಾಧಾರಣ ಮೈಕಟ್ಟು, ಚೌಕ ಮುಖ ಹಾಗೂ ಮೊಂಡ ಮೂಗು ಹೊಂದಿದ್ದು, ಮೂಗಿನ ಮೇಲೆ ಹಳೆ ಗಾಯದ ಕಲೆ ಇದ್ದು, ಉದ್ದ ಗಡ್ಡ ಬಿಟ್ಟಿರುತ್ತಾನೆ. ಕನ್ನಡ ಹಾಗೂ ಹಿಂದಿ ಭಾಷೆ ಬಲ್ಲವನಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಚುಕ್ಕೆಯುಳ್ಳ ಅಂಗಿ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದನು.ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಸಾರ್ವಜನಿಕರು ಜಿಲ್ಲಾ ನಿಸ್ತಂತು ಕಚೇರಿ ದೂ: ೦೮೩೫೨-೨೫೦೮೪೪/೨೫೦೭೫೧ ವಿಜಯಪುರ ಗ್ರಾಮೀಣ ಠಾಣೆ ದೂ: ೦೮೩೫೨-೨೫೦೯೨೩ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

