ಆಲಮಟ್ಟಿ: ಇನ್ನುಳಿದ ಸಂಘಟನೆಗಳಿಗಿಂತ ಶಿಕ್ಷಕ ಸಂಘಟನೆ ಸಂಪೂರ್ಣ ಭಿನ್ನವಾಗಿದ್ದು, ಸರ್ವಾಧಿಕಾರಿ ಧೋರಣೆಯ ತತ್ವಗಳಿಂದ ಮುಕ್ತವಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಕ್ಷಕ ಸಂಘಟನೆ ಸದಾ ಶಿಕ್ಷಕರ ಏಳಿಗೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.
ಇಲ್ಲಿಯ ಎಚ್.ಪಿ.ಎಸ್. ಶಾಲೆಯಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ವಿವಿಧ ಹಂತದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಅವರು ಮಾತನಾಡಿದರು.
ನಿಡಗುಂದಿ ತಾಲ್ಲೂಕಿನಲ್ಲಿಯೂ ಶಿಕ್ಷಕ ಸಂಘಟನೆ ಹೊಸ ಹೊಸ ಕಾರ್ಯಚಟುವಟಿಕೆಗಳಿಂದ ಶಿಕ್ಷಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು. ಶಿಕ್ಷಕ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ೨೦೦೫ ರಲ್ಲಿ ಅಧಿಸೂಚಿತಗೊಂಡು ೨೦೦೭ ರಲ್ಲಿ ನೌಕರಿಗೆ ಸೇರಿದ ೧೧,೦೦೦ ಕ್ಕೂ ಅಧಿಕ ನೌಕರರಿಗೆ ಎನ್ ಪಿಎಸ್ ನಿಂದ ಹಳೆ ಪಿಂಚಣಿ ವ್ಯವಸ್ಥೆಗೆ ರಾಜ್ಯ ಸರ್ಕಾರ ಒಪ್ಪಿದೆ ಎಂದರು. ಅದಕ್ಕಾಗಿ ನಡೆಸಿದ ಪ್ರಯತ್ನ ಹಾಗೂ ಹೋರಾಟವನ್ನು ವಿವರಿಸಿದರು. ಎಲ್ಲಾ ನೌಕರರಿಗೂ ಹಳೆ ಪಿಂಚಣಿ ವ್ಯವಸ್ಥೆ ಕೊಡಿಸುವುದು, ೭ ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯ ಒದಗಿಸುವುದು, ಪಿಎಸ್ ಟಿ ಶಿಕ್ಷಕರ ಪದೋನ್ನತಿ ಸಮಸ್ಯೆ ಬಗೆಹರಿಸುವುದು ನಮ್ಮ ಸಂಘದ ಮುಂದಿರುವ ಗುರಿ ಎಂದರು. ಈಗ ನಾಮನಿರ್ದೇಶನಗೊಂಡ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು.
ಸಂಘಟನೆಯ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನಕಾರ್ಯದರ್ಶಿ ಸಲಿಂ ದಡೆದ ಮಾತನಾಡಿ, ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆದಾಯ ತೆರಿಗೆಯ ಫಾರ್ಮ್ ಪ್ರತಿ ವರ್ಷ ನೀಡಲಾಗುತ್ತಿದೆ, ಗುರುತಿನ ಕಾರ್ಡ್ ನೀಡಲಾಗಿದೆ. ಕುಟುಂಬದ ಪ್ರತಿಯೊಬ್ಬರ ಮಾಹಿತಿಯನ್ನು ಎಚ್ ಆರ್ ಎಂಎಸ್ ತತ್ರಾಂಶದಲ್ಲಿ ಸೇರಿಸಿ ಪ್ರತಿಯೊಬ್ಬ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿಯ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ಆರ್.ಎಸ್. ಕಮತ, ಆರ್.ಬಿ.ಗೌಡರ, ಬಿ.ಎಸ್. ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಎಂ.ಜಿ. ಪೂಜಾರ, ಎಂ.ಎಂ. ಮುಲ್ಲಾ, ಬಿ.ಸಿ. ನದಾಫ್, ಎಸ್.ಎಂ. ಪಾಟೀಲ, ನಾಗರಾಜ ಬಸರಕೋಡ, ಮುತ್ತು ಯಳಮೇಲಿ, ಮುತ್ತುರಾಜ ಹೆಬ್ಬಾಳ, ಪ್ರಕಾಶ ಇಜೇರಿ, ಭಾಷಾಸಾಬ್ ಮನಗೂಳಿ, ಸುರೇಶ ಹುರಕಡ್ಲಿ, ಎಚ್.ಡಿ. ನದಾಫ್, ಎಸ್.ಎಂ. ಪಾಟೀಲ, ಪ್ರಭಾಕರ ಹೆಬ್ಬಾಳ, ರಾಜು ಹಲಗಿ, ಮಲ್ಲಿಕಾರ್ಜುನ ವಾಲಿ ಇತರರು ಇದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ವಿಭಾಗದ ವಿವಿಧ ಪದಾಧಿಕಾರಿಗಳ ನೇಮಕ ಆದೇಶ ನೀಡಿ ಗೌರವಿಸಲಾಯಿತು.
ನೇಮಕ:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ: ಎಂ.ಆರ್. ಮಕಾನದಾರ್, ವಿ.ಕೆ. ಮಸೂತಿ, ಲಲಿತಾ ಸಂಖ, ಎಚ್.ಡಿ. ಮಾದರ, ಪವಾಡೆಪ್ಪ ಚಲವಾದಿ,
ಬೆಳಗಾವಿ ವಿಭಾಗೀಯ ಸಹಕಾರ್ಯದರ್ಶಿ:
ಬಸಮ್ಮ ಪೂಜಾರಿ, ಬಸವರಾಜ ಚಿಂಚೋಳಿ, ಕೆ.ಎಂ. ಗುಡದಿನ್ನಿ,
ಬೆಳಗಾವಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ: ವಾಸುದೇವ ಸುಲಾಖೆ, ಸಿ.ಎಸ್. ಭಾವಿಕಟ್ಟಿ
ಬೆಳಗಾವಿ ವಿಭಾಗದ ಮಾಧ್ಯಮ ಸಂಚಾಲಕ: ಆನಂದ ಗೌಡರ
ನಿಡಗುಂದಿ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ: ಬಿ.ಎಸ್. ಯರವಿನತೆಲಿಮಠ
Subscribe to Updates
Get the latest creative news from FooBar about art, design and business.
Related Posts
Add A Comment

