ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.
ಬುಧವಾರದಂದು ಗ್ರಾಮದ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ೫೪ ನೇ ಪುಣ್ಯಾರಾಧನೆಯ ‘ಧರ್ಮಸಭೆ’ಯಲ್ಲಿ ಸಿಂಹಗಢ ಮಹಾರಾಜರ ಶಿಥಿಲಗೊಂಡಿರುವ ಈ ಮಹಾದೇವನ ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸಬೇಕು ಎಂದು ಗ್ರಾಮಸ್ಥರು ಶಿಥಿಲಗೊಂಡಿರುವ ದೇವಾಸ್ಥಾನದ ಭಾವಚಿತ್ರಗಳನ್ನು ನೀಡಿದರು.
ಈ ವೇಳೆ ಚಡಚಣ ಪಟ್ಟದ ಜವಳಿ ವ್ಯಾಪಾರಸ್ಥ ಸಿದ್ದಾರಾಮ ಭಂಢರಕವಟೆಯವರು ಶಿಥಿಲಗೊಂಡಿರುವ ದೇವಾಸ್ಥಾನದ ಮೆಟ್ಟಿಲುಗಳ ನಿರ್ಮಾಣಕ್ಕೆ ೧.೫೦ ಲಕ್ಷ ರೂಗಳ ದೇಣಿಗೆ ನೀಡಿದರು.
ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಶಾಸಕರ ನಿಧಿಯಿಂದ ನಾನು ೫೦ ಲಕ್ಷ ರೂ ಅನುದಾನ ನೀಡುತ್ತೇನೆ. ಹಾಗೂ ಪುರಾತತ್ವ ಇಲಾಖೆಯ ಜೊತೆ ಚರ್ಚಿಸಿ ದೇವಾಸ್ಥಾನದ ಸಂಪೂರ್ಣ ಜಿರ್ಣೋದ್ಧಾರಗೊಳಿಸುವುದಾಗಿ ಭರವಸೆ ನೀಡಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ರವರು ಕೂಡಾ ತಮ್ಮ ವೈಯಕ್ತಿಕ ನಿಧಿಯಿಂದ ೫ ಲಕ್ಷ ರೂ ಅನುದಾನ ನೀಡುತ್ತೇನೆ. ಅಲ್ಲದೇ ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಜೊತೆ ಹಾಗೂ ಎಚ್.ಕೆ.ಪಾಟೀಲರ ಜೊತೆ ಚರ್ಚಿಸಿ ಶಿಥಿಲಾವಸ್ಥೆಯ ಮಂದಿರವನ್ನು ಅಭಿವೃದ್ಧಿ ಪಡಿಸಲು ಮನವಿಯನ್ನು ಮಾಡುತ್ತೇನೆ ಎಂದರು.
ಗ್ರಾಮದ ಸಿಂಹಗಢ ಮಹಾರಾಜರ ಸಮಸ್ತ ಸದ್ಬಕ್ತ ಮಂಢಳಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

